ಕುಮಟಾ : ತಾಲೂಕಿನ ಉರಗ ತಜ್ಞ ಪವನ್ ನಾಯ್ಕ ಯಾಣದಲ್ಲಿ ಮನೆಯ ಅಟ್ಟದ ಮೇಲೆ ಸೇರಿರುವ ಕಾಳಿಂಗ ಸರ್ಪವನ್ನು ರಕ್ಷಿಸಿ, ಕಾಳಿಂಗ ಹಾಗೂ ಇತರ ಹಾವಿನ ಬಗ್ಗೆ ಜಾಗ್ರತಿ ಮೂಡಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟುಬಂದಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು ಆ ವಿಡಿಯೋ ನೋಡಿದವರಿಗೆ ಮೈ ಜುಂಮ್ ಎನಿಸುವಂತಿದೆ.
ಈ ಬಗ್ಗೆ ಪವನ ನಾಯ್ಕ ಮಾತನಾಡಿ, ಇಂದು ಬೆಳಿಗ್ಗೆ 8 ಘಂಟೆಗೆ ಯಾಣ ಸೆಕ್ಷನ್ ಡೆಪ್ಯೂಟಿ ಆರ್.ಎಪ್.ಓ ವಸಂತ್ ರವರು ಹಾಗೂ ಫೊರೆಸ್ಟ್ ಗಾರ್ಡ್ ಸದಾಶಿವರವರ ಕರೆಯ ಮೇರೆಗೆ ಯಾಣದ ಬೆಟ್ಟದಮೇಲೆ ಇರುವ ಮನೆಯ ಅಟ್ಟದ ಮೇಲೆ ಸೇರಿರುವ ಕಾಳಿಂಗ ಸರ್ಪವನ್ನು ರಕ್ಷಿಸಿ, ಕಾಳಿಂಗ ಹಾಗೂ ಇತರ ಹಾವಿನ ಬಗ್ಗೆ ಜಾಗ್ರತಿ ಮೂಡಿಸಿ ಸುರಕ್ಷಿತ ಸ್ಥಳದಲ್ಲಿ ಬಿಟ್ಟಿರುವುದಾಗಿ ಹೇಳಿದ್ದಾರೆ.ಹಾವನ್ನು ರಕ್ಷಿಸಲು ಸಹಕರಿಸಿದ ಆ ಮನೆಯವರು ಹಾಗೂ ಅರಣ್ಯ ಇಲಾಖೆಗೆ ಧನ್ಯವಾದಗಳನ್ನು ಅವರು ಸಲ್ಲಿಸಿದ್ದಾರೆ.
ವಿಡಿಯೋ ಇಲ್ಲಿದೆ.