ಶಿರಸಿ : ತಾಲೂಕಿನ ಮಾರಿಕಾಂಬಾ ನಗರದ ವಾರ್ಡ್ ಸಂಖ್ಯೆ 25 ರ ಎರಡನೇ ಅಡ್ಡ ರಸ್ತೆಯ ರಾಮನಬೈಲಿಗೆ ಹೋಗುವ ರಸ್ತೆಯಲ್ಲಿರುವ ಮೋರಿಯೊಂದು ಕಟ್ಟಿ ನಿಂತಿದೆ.ಇದರಿಂದಾಗಿ ಜನರಿಗೆ ಆಗುವ ತೊಂದರೆ ಹೇಳತೀರದು.
ಮಾರಿಕಾಂಬಾ ನಗರದ ಮದ್ಯ ಭಾಗದ ಈ ಮೋರಿಯಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ಗುಂಡಿಯಾಗಿ ನೀರು ಅಲ್ಲಿಯೇ ನಿಲ್ಲುವ ಪರಿಸ್ಥಿತಿ ಗೆ ಬಂದು ತಲುಪಿದೆ. ಮೊದಲು ಕಟ್ಟಿದ್ದ ಈ ಮೋರಿ ಕುಸಿದಿರುತ್ತದೆ. ಇದರಿಂದ ಅಕ್ಕ ಪಕ್ಕದ ಮನೆಯ ಬಾವಿಗಳಲ್ಲಿ ಕಲುಷಿತ ನೀರು ಸೇರಿ ಬಳಕೆಗೆ ಯೋಗ್ಯವಲ್ಲದ ರೀತಿಯಲ್ಲಿ ಹಾಳಾಗಿದೆ.
ನೀರು ನಿಲ್ಲುತ್ತಿರುವುದರಿಂದ ಅಸಾಧ್ಯವಾದ ವಾಸನೆಯ ಜೊತೆಗೆ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ. ವಾರ್ಡ್ ಸದಸ್ಯರಿಗೆ ಈ ಬಗ್ಗೆ ಗಮನ ಸೆಳೆದಾಗ ಕಾಲುವೆಯನ್ನು ನಿರ್ಮಿಸಿಕೊಡುವ ಭರವಸೆಯನ್ನು ನೀಡಿರುವುದು ಶ್ಲಾಘನೀಯ. ಆದರೆ ನಿರ್ಮಾಣ ಆಗುವವರೆಗೆ ಬಾವಿಯ ನೀರಿಗೆ ಮೋರಿ ನೀರು ಸೇರಿದರೆ ಬಳಕೆಯನ್ನು ಹೇಗೆ ಮಾಡುವುದು..? ಕಾರಣ ವಾರಕ್ಕೆ ಒಮ್ಮೆಯಾದರೂ ಕಟ್ಟುವ ಈ ಮೋರಿಯನ್ನು ಶುಚಿಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿಕೊಟ್ಟಲ್ಲಿ ಆಗುವ ತೊಂದರೆಯನ್ನು ತಪ್ಪಿಸಿಕೊಡಲು ನಗರಸಭೆಯು ಕೆಲಸವನ್ನು ಮಾಡಿಕೊಡಬೇಕಿದೆ.
ಇದರ ಜೊತೆಯಲ್ಲಿ ಮೋರಿಯ ಪಕ್ಕದಲ್ಲಿ ಕಳೆಯೂ ಅತಿಯಾಗಿ ಬೆಳದಿದ್ದು ಓಡಾಡಲು ತೊಂದರೆ ಆಗುತ್ತಿದೆ. ಜೊತೆಗೆ ಅಲ್ಲಿಯೇ ಕಸವನ್ನು ಹಾಕಿ ಹೋಗುತ್ತಾರೆ. ಇದರಿಂದ ಅವುಗಳು ಕೊಳೆತು ಕೆಟ್ಟ ವಾಸನೆಯೂ ಬರುತ್ತಿದೆ.. ಈ ಮೇಲಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲು ನಗರಸಭೆಗೆ ಕೇಳಿಕೊಳ್ಳಲಾಗುತ್ತಿದೆ. ಈ ಬಗ್ಗೆ ಸ್ಥಳೀಯರಾದ ಶ್ರೀ ಎ ಎನ್ ಭಟ್ಟ ಸತ್ವಾಧಾರ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.