ಹೊನ್ನಾವರ: ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರ ಹಾಗೂ ಹಿಂದೂಗಳ ನರಮೇಧವನ್ನು ಖಂಡಿಸಿ, ಪಟ್ಟಣದ ಶರಾವತಿ ವೃತ್ತದಿಂದ ದುರ್ಗಾದೇವಿ ದೇವಸ್ಥಾನದವರೆಗೆ ಯುವಾಬ್ರಿಗೇಡ್ ವತಿಯಿಂದ ಪಂಜಿನ ಮೆರವಣಿಗೆ ನಡೆಸಲಾಯಿತು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಾಮರಸ್ಯ ಪ್ರಮುಖರಾದ ವಿಶ್ವನಾಥ ನಾಯಕ್ ಮಾತನಾಡಿ, ಇಡೀ ಜಗತ್ತೇ ಬಯೋತ್ಪಾದನೆಯಲ್ಲಿ ತತ್ತರಿಸಿದೆ. ಇಡೀ ಪ್ರಪಂಚದಲ್ಲಿ ಹಿಂದೂ ಧರ್ಮ ಮಾತ್ರ ಶಾಂತಿ ಹಾಗೂ ಸಂಸ್ಕøತಿ ಹೊಂದಿರುವ ದೇಶ. ಜಗತ್ತಿನ ಬಹುತೇಕ ಎಲ್ಲಾ ಸಂಸ್ಕೃತಿಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿವೆ. ಹಲವು ಸಂಘರ್ಷಗಳ ಮಧ್ಯೆ ಹಿಂದೂ ಸಂಸ್ಕೃತಿ ಬೇರೂರಿ ನಿಂತಿದೆ.

RELATED ARTICLES  ಸಾಲದ ಬಾದೆ ತಾಳಲಾರದೆ ಆತ್ಮಹತ್ಯೆಗೆ ಶರಣು.

ಎಲ್ಲೂ ಯುದ್ಧವನ್ನು ಮಾಡದೇ ಉತ್ತಮ ಸಂಸ್ಕೃತಿಯ ಮೂಲಕವೇ ಇಡೀ ವಿಶ್ವವನ್ನೇ ಹಿಂದೂ ಧರ್ಮ ಆಳಿದೆ. ಇಂತಹ ಹಿಂದೂ ಧರ್ಮವನ್ನು ಹೇಗಾದರೂ ನಾಶಗೊಳಿಸಬೇಕು ಎಂದು ದುಷ್ಟಶಕ್ತಿಗಳ ಪ್ರಯತ್ನ ನಡೆಯುತ್ತಲೇ ಇದೆ. ಅದಕ್ಕೆ ಉದಾಹರಣೆ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂ ನರಮೇಧ ಎಂದು ಹೇಳಿದರು. ಪಾಕಿಸ್ತಾನದಿಂದ ಮುಕ್ತಿ ನೀಡಿ ಅನ್ನ ನೀರು ಕೊಟ್ಟು ಬಂಗ್ಲಾವನ್ನು ಕಾಪಾಡಿದ್ದು ಭಾರತದೇಶ. ಆದರೆ ಇಂದು ಅಲ್ಲಿ ಹಿಂದೂಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗುತ್ತಿದೆ. ರಾಜಕಾರಣಿಗಳು ತಮ್ಮ ರಾಜಕೀಯ ತೆವಲಿಗೆ ಏನೇನೋ ಭಾಷಣ ಬಿಗಿಯುತ್ತಾರೆ. ಅವುಗಳಿಗೆ ನಾವು ಕಿವಿಗೊಡದೆ ಧರ್ಮದ ವಿಚಾರ ಬಂದಾಗ ನಮ್ಮಲ್ಲಿರುವ ವೈಮನಸ್ಸು ಬಿಟ್ಟು ಒಂದಾಗ ಬೇಕು ಎಂದು ಕರೆ ಕೊಟ್ಟರು.

RELATED ARTICLES  ಭಟ್ಕಳದ ಈ ಗ್ರಾಮದ ರಸ್ತೆಗೆ ಇಲ್ಲ ಡಾಂಬರ್ : ನಾಟಿಮಾಡಿ ಪ್ರತಿಭಟಿಸಿದ ಗ್ರಾಮಸ್ಥರು..

ಈ ಸಂದರ್ಭದಲ್ಲಿ ಯುವಾ ಬ್ರಿಗೆಡ್ ಕಾರ್ಯಕರ್ತರು, ಜಾಗರಣ ವೇದಿಕೆ ಕಾರ್ಯಕರ್ತರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಹಾಗೂ ಹಿಂದೂ ಸಮುದಾಯದವರು
ಪಾಲ್ಗೊಂಡಿದ್ದರು .