ದಾಂಡೇಲಿ:  ನದಿ ದಂಡೆಯ ಮೇಲೆ ಮೀನು ಹಿಡಿಯಲು ಗಾಳಹಾಕಿ ಕುಳಿತಿದ್ದ ಬಾಲಕನನ್ನು ಮೊಸಳೆ ಹೊತ್ತೊಯ್ದ ಘಟನೆ ವರದಿಯಾಗಿದೆ.ದಾಂಡೇಲಿಯ ಕಾಳಿ ನದಿ ದಡದಲ್ಲಿ ಈ ಘಟನೆ ನಡೆದಿದೆ. ಮೋಹಿನ್ ಮೆಹಬೂಬ್ (15) ಮೊಸಳೆ ಪಾಲಾದ ಬಾಲಕ ಎಂದು ತಿಳಿದುಬಂದಿದೆ. ಈತ ಮೀನು ಹಿಡಿಯಲು ದಾಂಡೇಲಿ-ಹಳಿಯಾಳ ರಸ್ತೆಯ ಕಾಳಿ ನದಿ ದಡದಲ್ಲಿ ಕುಳಿತಿದ್ದ ಎನ್ನಲಾಗಿದೆ.

ಈತ ನದಿ ದಂಡೆಯಲ್ಲಿ ನಿತ್ಯವೂ ಸಹೋದರನ ಜೊತೆ ಮೀನು ಹಿಡಿಯಲು ಬರುತ್ತಿದ್ದ ಎನ್ನಲಾಗಿದೆ. ಈ ಘಟನೆ ನಡೆದ ವೇಳೆ ಸಹೋದರ ದೂರ ಇದ್ದ. ಬಾಲಕ ನಿಂತು ಗಾಳ ಹಾಕುತ್ತಿದ್ದ ಸಮಯದಲ್ಲಿ ಮೊಸಳೆ ಏಕಾಏಕಿ ದಾಳಿ ನಡೆಸಿ, ಬಾಲಕನನನ್ನು ಹೊತ್ತೊಯ್ದಿದೆ.

RELATED ARTICLES  ರವಿ ಕೆ. ಶೆಟ್ಟಿ ಕವಲಕ್ಕಿ ಮನೆಗೆ ಮಾಜಿ ಸಚಿವ ಆಂಜನಮೂರ್ತಿ ಹಾಗೂ ಕಾಂಗ್ರೇಸ್ ಮುಖಂಡರ ಭೇಟಿ

ಮೊಸಳೆ ಬಾಲಕನ ಮೇಲೆ ದಾಳಿಮಾಡಿ ಈತನನ್ನು ಹೊತ್ತೊಯ್ದಿದೆ. ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು,ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿದ್ದು, ಶೋಧಕಾರ್ಯ ನಡೆಸಿದರೂ ಇನ್ನೂ ಬಾಲಕನ ಪತ್ತೆಯಾಗಿಲ್ಲ. ಸ್ಥಳೀಯರು ತೆಪ್ಪದ ಸಹಾಯದಿಂದ ಶೋಧ ಕಾರ್ಯ ಮುಂದುವರಿಸಿದ್ದಾರೆ.

RELATED ARTICLES  ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅಭಿವೃದ್ದಿ ಯೋಜನೆಗಳಿಂದಾಗಿ ಕನ್ನಡ ನಾಡಿಗೆ ವಿಶ್ವದಲ್ಲಿ ವಿಶಿಷ್ಠ ಸ್ಥಾನ ದೊರಕಿದೆ : ಡಿ.ಬಿ.ನಾಯ್ಕ

ಈ ಬಾಲಕನ ಕುಟುಂಬ ತೀರಾ ಬಡಕುಟುಂಬವಾಗಿದ್ದು, ತಂದೆ ರಿಕ್ಷಾ ಓಡಿಸಿಕೊಂಡು ಜೀವನ ನಡೆಸುತ್ತಿದ್ದರು. ಈ ದುರ್ಘಟನೆಯಿಂದಾಗಿ ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ,ಹಲವರು ಮನೆಗೆ ಭೇಟಿ ನೀಡಿ, ಸಾಂತ್ವನದ ಮಾತುಗಳನ್ನಾಡಿ, ಕುಟುಂಬಕ್ಕೆ ಧೈರ್ಯ ತುಂಬವ ಪ್ರಯತ್ನ ಮಾಡುತ್ತಿದ್ದಾರೆ