ಭಟ್ಕಳ : ದೇವರ ದರ್ಶನಕ್ಕೆ ಹೊರಟ ಜನರಿದ್ದ ಟೆಂಪೋ ಪಲ್ಟಿಯಾದ ಪರಿಣಾಮ ಟೆಂಪೋದಲ್ಲಿದ್ದವರಿಗೆ ಗಾಯಗಾಳಾಗಿರುವ ಘಟನೆ ವರದಿಯಾಗಿದೆ.ಭಟ್ಕಳದ ಸರ್ಪನಕಟ್ಟೆಯ ಹುಲಿದೇವರ ಮನೆ ಸಮೀಪ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.
ತಮಿಳುನಾಡಿನಿಂದ ಹೊರಟು ಕೊಲ್ಲೂರು ದರ್ಶನ ಮುಗಿಸಿ ಮುರ್ಡೇಶ್ವರಕ್ಕೆ ಹೋಗುತ್ತಿದ್ದ ಮಹೀಂದ್ರ ಟೆಂಪೋ ಪಲ್ಟಿಯಾದ ಪರಿಣಾಮ ಟೆಂಪೋದಲ್ಲಿದ್ದವರ ಪೈಕಿ 8 ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಭಟ್ಕಳದ ಸರ್ಪನಕಟ್ಟೆಯ ಹುಲಿದೇವರ ಮನೆ ಸಮೀಪ ರವಿವಾರ ರಾತ್ರಿ ನಡೆದಿದೆ.
ಹೆದ್ದಾರಿ ಕಾಮಗಾರಿ ಅವಾಂತರವೇ ಈ ಅಪಘಾತಕ್ಕೆ ಕಾರಣವಾಗಿದೆ ಎಂದು ಆಪಾದಿಸಿದ ಸಾರ್ವಜನಿಕರು ದಿನಕ್ಕೊಂದು ಕಡೆಗೆ ಸೂಚನಾ ಫಲಕ ಬದಲಾಯಿಸುತ್ತಿರುವುದರಿಂದ ತೊಂದರೆ ಆಗುತ್ತಿದೆ ಎಂದು ಕಾಮಗಾರಿ ನಡೆಸುತ್ತಿರುವವರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಟೆಂಪೋ ಪಲ್ಟಿಯಾದ ತಕ್ಷಣ ಜಮಾಯಿಸಿದ
ಹಲವಾರು ಮಂದಿ ಗಾಯಗೊಂಡವರನ್ನು ಹೊರಗೆ ತೆಗೆಯಲು ಹಾಗೂ ಆಸ್ಪತ್ರೆ ಸೇರಿಸಲು ಸಹಕರಿಸಿದರು. ಘಟನೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು ಪೊಲೀಸರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಮುಂದಿನ ಕಾರ್ಯಚಟುವಟಿಕೆಗಳನ್ನು ನಡೆಸಲಾಯಿತು.