ಕುಮಟಾ: ಹೆಗಡೆಯ ಹೆಣ್ಣುಮಕ್ಕಳ ಶಾಲೆಯಲ್ಲಿ
ಒಂದರಿಂದ ಐದನೇ ತರಗತಿಯ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಶಾಲೆಯನ್ನು ಬಣ್ಣಬಣ್ಣದ ಬಲೂನುಗಳ ಚಪ್ಪರ ಹಾಕಿ, ದ್ವಾರಗಳನ್ನು ತಳಿರು-ತೋರಣಗಳಿಂದ ಸಿಂಗರಿಸಿ ಬಣ್ಣ ಬಣ್ಣದ ರಂಗೋಲಿ ಯಿಂದ ಶಾಲೆಯ ನೆಲಹಾಸುಗಳನ್ನು ಅಲಂಕರಿಸಿ ಹಿರಿಯ ವಿದ್ಯಾರ್ಥಿಗಳು ಕರತಾಡನ ಮಾಡುತ್ತ ಒಂದರಿಂದ ಐದನೇ ತರಗತಿಯ ವಿದ್ಯಾರ್ಥಿಗಳನ್ನು ಸಡಗರ ಸಂಭ್ರಮದಿಂದ ಸ್ವಾಗತ ಮಾಡಲಾಯಿತು.

ದ್ವಾರದಲ್ಲಿ ಮಕ್ಕಳಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸಿ ಸ್ಯಾನಿಟೈಸರ್ ಮಾಡಿಸಿ ಪೆನ್ನು ಪೆನ್ಸಿಲ್ ರಬ್ಬರ್ ಬಿಸ್ಕಟ್ ಪ್ಯಾಕೆಟ್ ನೀಡಿ ಎಲ್ಲ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.

ನಂತರ ಔಪಚಾರಿಕವಾಗಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಪ್ರಕಾಶ್ ನಾಯ್ಕ್ ವಿದ್ಯಾರ್ಥಿಗಳು ಭಯ ಮುಕ್ತರಾಗಿ ಶಾಲೆಗೆ ಬಂದು ವಿದ್ಯಾರ್ಜನೆ ಮಾಡಬೇಕು ಎಂದು ಕರೆ ನೀಡಿದರು.

IMG 20211025 WA0029

ಉಪಾಧ್ಯಕ್ಷೆ ಯೋಗಿತಾ ನಾಯ್ಕ ಆನ್ಲೈನ್ ತರಗತಿ ಪಾಠ ಕಿಂತ ಭೌತಿಕವಾಗಿ ನಡೆಯುವ ತರಗತಿಗಳು ಹೆಚ್ಚು ಉಪಯುಕ್ತವಾದದ್ದು ಪಾಲಕರು ಕೂಡ ಭೌತಿಕ ತರಗತಿಗಳೇ ನಡೆದರೆ ಎಂಬ ಅಭಿಪ್ರಾಯ ಹೊಂದಿದ್ದಾರೆ. ಆದಾಗಿಯೂ ಕೋವಿಡ್ ಕಾಯಿಲೆ ನಿರ್ಲಕ್ಷಿಸಬಾರದು ಎಂದರು.

RELATED ARTICLES  ಬಿ.ಜೆ.ಪಿಯಿಂದ ದುರುದ್ದೇಶದ ರಾಜಕಾರಣ : ಶಾರದಾ ಮೋಹನ್ ಶೆಟ್ಟಿ

ಗ್ರಾಮ ಪಂಚಾಯತ್ ಸದಸ್ಯ ಶಾಲೆಯ ನಾಮನಿರ್ದೇಶಿತ ಸದಸ್ಯರು ಆದ ರಾಜು ಮುಕ್ರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ಯಾವ ಕಾರ್ಯಕ್ರಮವಿದ್ದರೂ ಅತ್ಯಂತ ವಿಭಿನ್ನವಾಗಿ ಆಚರಿಸುವುದು ವಿಶಿಷ್ಟತೆ ಇಂದು ಕೂಡ ಸಂಯೋಜಿಸಿದ ಮಕ್ಕಳ ಸ್ವಾಗತ ಕಾರ್ಯಕ್ರಮ ಬಹಳ ಸಂತೋಷ ಕೊಡುತ್ತಿತ್ತು ಎಂದರು.

ನಂತರದಲ್ಲಿ ಭೇಟಿ ನೀಡಿದ ಡಯಟ್ ಪ್ರಾಚಾರ್ಯರಾದ ಈಶ್ವರ ನಾಯ್ಕ ಶಾಲಾ ಪ್ರಾರಂಭದ ಪೂರ್ವಸಿದ್ಧತೆ ಬಿಸಿಯೂಟ ಸೇರಿದಂತೆ ಕಲಿಕಾ ಪೂರ್ವ ತಯಾರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಮಾರ್ಗದರ್ಶನ ನೀಡಿದರು. ಸಿಆರ್ ಪಿ ನರಹರಿ ಭಟ್ ಹೆಣ್ಣು ಮಕ್ಕಳ ಶಾಲೆಯಲ್ಲಿ ನಡೆಯುವ ಪ್ರತಿ ಕಾರ್ಯಕ್ರಮ ವಿಶಿಷ್ಟವಾಗಿ ಆಚರಿಸಿ ಕೊಳ್ಳುತ್ತಾರೆ ಇದು ನಮ್ಮ ತಾಲೂಕಿಗೆ ಹೆಮ್ಮೆ ಕೊಡುವಂತಹ ಸಂಗತಿ ಎಂದು ತಿಳಿಸಿ ಇಲಾಖೆಯ ಪರವಾಗಿ ಅಭಿನಂದಿಸಿದರು.

RELATED ARTICLES  ಶಿವಾನಿ ಬುಕ್‌ಸ್ಟಾಲ್ ನ ಸುಬ್ರಹ್ಮಣ್ಯ ಭಂಡಾರಿ ಇನ್ನಿಲ್ಲ.

ಆರಂಭದಲ್ಲಿ ಪ್ರಾಸ್ತಾವಿಕ ನುಡಿ ಯೊಂದಿಗೆ ಎಲ್ಲರನ್ನೂ ಸ್ವಾಗತಿಸಿದ ಮುಖ್ಯಾಧ್ಯಾಪಕಿ ಮಂಗಲ ಹೆಬ್ಬಾರ್ ನಮ್ಮ ಶಾಲೆಯ ಎಲ್ಲಾ ಶಿಕ್ಷಕರಿಗೆ ಅಡುಗೆ ಸಿಬ್ಬಂದಿಗಳಿಗೆ ಈಗಾಗಲೇ ಎರಡು ಡೋಸ್ ಲಸಿಕೆ ಆಗಿರುತ್ತದೆ.

ಯಾರು ಕೂಡ ಭಯಪಡುವ ಅಗತ್ಯವಿಲ್ಲ ಆದರೂ ಕೋವಿಡ್ ಮಾರ್ಗಸೂಚಿಯನ್ನು ಶಾಲೆಯಲ್ಲಿ ಕಡ್ಡಾಯವಾಗಿ ಪಾಲನೆ ಮಾಡುತ್ತಾ ಕಲಿಕೆ ಮುಂದುವರಿಸಲಾಗುವುದು ಎಂದರು. ದೈಹಿಕ ಶಿಕ್ಷಕಿ ಶಾಮಲಾ ಪಟಗಾರ ಕೋವಿಡ್ ಶಿಷ್ಟ ಚಾರದ ಕುರಿತು ಮಾತನಾಡಿದರು.

ಶಿಕ್ಷಕ ಶ್ರೀಧರ್ ಗೌಡ ಕಾರ್ಯಕ್ರಮ ನಿರೂಪಿಸಿದರು ಶಿಕ್ಷಕ ನಾಗರಾಜ್ ಶೆಟ್ಟಿ ವಂದನಾರ್ಪಣೆ ಮಾಡಿದರು. ಶಿಕ್ಷಕರಾದ ರೇಣುಕಾ ನಾಯ್ಕ, ನಯನ ಪಟಗಾರ ಸಹಕರಿಸಿದರು. ಎಸ್ ಡಿ ಎಂ ಸಿ ಎಲ್ಲಾ ಪದಾಧಿಕಾರಿಗಳು ಹಾಗೂ ಪಾಲಕರು ಹಾಜರಿದ್ದರು.