ಕುಮಟಾ : ತಾಲೂಕಿನ ಗುಡ್ಡದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 5 ನೇ ತರಗತಿಗಳ ಭೌತಿಕ ತರಗತಿಗಳ ಆರಂಭದ ಹಿನ್ನೆಲೆಯಲ್ಲಿ ಶ್ರೀ ಶಾಂತಿಕಾ ಪರಮೇಶ್ವರಿ ದೇವಿಗೆ ಪೂಜೆಯನ್ನು ಸಲ್ಲಿಸಿ ಮೆರವಣಿಗೆಯ ಮೂಲಕ 6 ಮತ್ತು 7 ನೇ ತರಗತಿಯ ಮಕ್ಕಳು ಪಾಲಕರು ಎಸ್ ಡಿ ಎಂ ಸಿ ಹಾಗೂ ಶಿಕ್ಷಕವೃಂದದವರೆಲ್ಲ ಸೇರಿ ವಿದ್ಯಾರ್ಥಿಗಳಿಗೆ ಸಂಭ್ರಮದ ಸ್ವಾಗತ ಕೋರಿದರು.
RELATED ARTICLES ಗ್ರಾಮೀಣ ಶಾಲೆಗೆ ಸ್ಮಾರ್ಟ ಕ್ಲಾಸ್ ಕೊಡುಗೆ : ಶಾಲೆಯ ಅಭಿವೃದ್ಧಿ ಸಂತಸ ತಂದಿದೆ - ರಾಜೇಂದ್ರ ಭಟ್ಟ.
ಈ ದಿನ ಶಾಲೆಯ ಪೂರ್ವ ವಿದ್ಯಾರ್ಥಿ ಹಾಗೂ ಪಾಲಕರಾದ ಶ್ರೀಧರ ಕುಮಟಾಕರ ರವರು 236 ಮಕ್ಕಳಿಗೂ ಸೇಬು ಹಣ್ಣನ್ನು ವಿತರಿಸುವ ಮೂಲಕ ಮಕ್ಕಳ ಸಂತಸಕ್ಕೆ ಕಾರಣರಾದರು. ಮಕ್ಕಳಿಗೆ ಪೆನ್ಸಿಲ್ ಹಾಗೂ ಮಾಸ್ಕ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಿ ಆರ್ ಪಿ ಗಳಾದ ವಿಜಯಲಕ್ಷ್ಮೀ ಭಟ್ ಅಧ್ಯಕ್ಷರಾದ ಮಂಜುನಾಥ ರಾಯ್ಕರ್ ಮುಖ್ಯ ಶಿಕ್ಷಕರಾದ ಡಿ.ಎಂ ಬಂಟ್ ಹಾಗೂ ದಾನಿಗಳಾದ ಶ್ರೀಧರರವರ ಧರ್ಮಪತ್ನಿ ಉಪಸ್ಥಿತರಿದ್ದರು. ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ಕೃಷ್ಣ ಬಾಬಾ ಪೈ ರವರು ಮಕ್ಕಳ ಅಭ್ಯುದಯಕ್ಕಾಗಿ ದೇವರಲ್ಲಿ ಪ್ರಾರ್ಥಿಸಿ ಹಾರೈಸಿದರು.