ಶಿರಸಿ : ಸುಮಾರು ಐದು ಕೋಟಿ ಮೌಲ್ಯದ ತಿಮಿಂಗಿಲದ ವಾಂತಿ ವಶಕ್ಕೆ ಪಡೆದು ಪೊಲೀಸರಿಬಇಬ್ಬರನ್ನು ಬಂಧಿಸಿದ ಘಟನೆ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಪೊಲೀಸರು ನಡೆಸಿದ ದಾಳಿಯಲ್ಲಿ ಐದು ಕೋಟಿ ಮೌಲ್ಯದ ಐದು ಕೆಜಿ ತಿಮಿಂಗಿಲದ ವಾಂತಿಯನ್ನು ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ಮೂಲದ ಸಂತೋಷ್ ಕಾಮತ್ ,ಶಿರಸಿಯ ರಾಜೇಶ್ ಪೂಜಾರಿ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಈ ಬೆಲೆಬಾಳುವ ತಿಮಿಂಗಿಲದ ವಾಂತಿಯನ್ನು ಎಲ್ಲಿಂದ ತಂದರು? ಅಥವಾ ಮಾರಾಟ ಮಾಡುವ ಯೋಜನೆ ರೂಪಿಸಿದ್ದಾರೆ? ಎನ್ನುವುದು ಇನ್ನು ತಿಳಿದುಬಂದಿಲ್ಲ.
ತಿಮಿಂಗಿಲದ ವಾಂತಿಗೆ ಅತ್ಯಂತ ಬೇಡಿಕೆಯಿದೆ. ವಿದೇಶದಲ್ಲಿ ಕಡಲಿಗೆ ತೆರಳಿದೆ ವೇಳೆ, ಸಮುದ್ರ ತೀರಕ್ಕೆ ವಾಕಿಂಗ್ ಗೆ ತೆರಳಿದ ವೇಳೆ, ತಿಮಿಂಗಿಲದ ವಾಂತಿ ಸಿಕ್ಕಿ, ರಾತ್ರೋರೋತ್ರಿ ಕೋಟ್ಯಾಧೀಶರಾದವರು ಹಲವರಿದ್ದಾರೆ. ನಮ್ಮ ದೇಶದಲ್ಲಿ ಈ ಅಪರೂಪದ ವಸ್ತು ಸಿಗುವುದು ವಿರಳಾತೀ ವಿರಳ ಕೆಲ ದೇಶದಲ್ಲಿ ಇದನ್ನು ಮಾರಾಟ ಮಾಡಬಹುದು, ಆದರೆ, ನಮ್ಮ ದೇಶದಲ್ಲಿ ಇದನ್ನು ಮಾರುವಂತಿಲ್ಲ. ಪ್ರಮುಖವಾಗಿ ಇದನ್ನು ಸುಗಂಧ ದ್ರವ್ಯ ಉತ್ಪಾದನೆಯಲ್ಲಿ ಬಳಸಲಾಗುತ್ತದೆ. ಹೀಗಾಗಿ ಪಾಶ್ಚಿಮಾತ್ಯ ರಾಜ್ಯದಲ್ಲಿ ಇದಕ್ಕೆ ಒಂದು ಕೆಜಿಗೆ ಕೋಟಿ ಬೆಲೆ ಇದೆ.
ಸೋಮವಾರ ರಾತ್ರಿ ಆರೋಪಿಗಳು
ಹಾವೇರಿಯ ಅನ್ನಪೂರ್ಣ ಎಂಬ ಮಹಿಳೆ ಬಳಿ ಅಂಬರಗೀಸ್ ಪಡೆದ ಮಾಹಿತಿ ದೊರೆತ ಪೊಲೀಸರು ದಾಳಿ ನಡೆಸಿದ್ದರು.ಆರೋಪಿ ಅನ್ನಪೂರ್ಣ ಅವರ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದೇವೆ ಎಂದು ಸಿ.ಪಿ.ಐ ರಾಮಚಂದ್ರ ನಾಯಕ ತಿಳಿಸಿದ್ದಾರೆ.
ಉತ್ತರಕನ್ನಡ ಜಿಲ್ಲೆಯಲ್ಲೇ ಮೊಟ್ಟ ಮೊದಲ ಬಾರಿಗೆ ತಿಮಿಂಗಿಲ ವಾಂತಿ ಅಕ್ರಮವಾಗಿ ಸಾಗಾಟ ಪ್ರಕರಣ ಎಂದು ತಿಳಿದುಬಂದಿದೆ. ಆರೋಪಿಗಳನ್ನು ವಿಚಾರಣೆ ನಡೆಸಿದ ಬಳಿಕವೇ ತಿಮಿಂಗಿಲ ವಾಂತಿ ಎಲ್ಲಿ ದೊರೆಯಿತು,ಎಲ್ಲಿಗೆ ಸಾಗಿಸುತ್ತಿದ್ದರು ಎಂದು ತಿಳಿದು ಬರಬೇಕಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ರವಿ ಡಿ ನಾಯ್ಕ ಡಿ.ಎಸ್.ಪಿ ನೇತೃತ್ವದಲ್ಲಿ ಸಿ.ಪಿ.ಐ ರಾಮಚಂದ್ರ ನಾಯಕ,ಪಿ.ಎಸ್.ಐ ಗಳಾದ ಭೀಮಾಶಂಕರ, ಈರಯ್ಯ ಹಾಗೂ ಸಿಬ್ಬಂದಿಗಳು ದಾಖಳಿಯಲ್ಲಿ ಪಾಲ್ಗೊಂಡಿದ್ದರು.