ಹೊನ್ನಾವರ : ರಾಗಶ್ರೀ ಸಂಗೀತ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಇದರ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡ ಗಾನ ನಾದ ಯಕ್ಷ ವೈಭವ ಕಾರ್ಯಕ್ರಮ ಹಡಿನಬಾಳದ ವಿಷ್ಣುಮೂರ್ತಿ ದೇವಾಲಯದ ಸಭಾಭವನದಲ್ಲಿ ಸಂಪನ್ನಗೊಂಡಿತು.

ಆರಂಭದಲ್ಲಿ ಪ್ರಥಮ ಭಟ್ಟ ಪ್ರಸ್ತುತಪಡಿಸಿದರೆ, ಇಂಚರ ನಾಯ್ಕ, ಸೌಮ್ಯ ಶೇಟ, ರಂಜಿತಾ ಎನ್ , ಶ್ರೀನಿಧಿ ಹೆಗಡೆ, ಭಾಗ್ಯಲಕ್ಷ್ಮೀ ಭಟ್ಟ, ಶಾಸ್ತ್ರೀಯ ಹಾಗೂ ಸುಗಮ ಸಂಗೀತ ಮತ್ತು ವಿಶೇಷವಾಗಿ ಕನ್ನಡ ಗೀತೆಯನ್ನು ಪ್ರಸ್ತುತಪಡಿಸಿದರು. ತಬಲಾದಲ್ಲಿ ವಿನಾಯಕ ಹರಡಸೆ, ಸಂವಾದಿನಿಯಲ್ಲಿ ರಮ್ಯಾ ನಾಯ್ಕ, ತಾನ್ ಪುರದಲ್ಲಿ ಇಂಚರ ನಾಯ್ಕ, ತಾಳದಲ್ಲಿ ಸಮರ್ಥ ಹೆಗಡೆ ಸಾತ್ ನೀಡಿದರು.

RELATED ARTICLES  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಲಘು ಹೃದಯಾಘಾತ

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವರಿಷ್ಠಾಚಾರ್ಯರಾದ ಎಸ್ ಜಿ ಭಟ್ಟ ಕಬ್ಬಿನಗದ್ದೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಕಲೆ ಮಾನವನ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿ ಅವನನ್ನು ಪೂರ್ಣತೆಯತ್ತ ಕೊಂಡೊಯ್ಯುತ್ತದೆ. ಬದುಕು ಶಾಂತವಾಗಿಯೂ ಸಾಮರಸ್ಯದಿಂದ ಇರಲು ಕಲೆ ಅಗತ್ಯವಾಗಿ ಬೇಕು, ದೇವಾಲಯಗಳು ಸಾಂಸ್ಕೃತಿಕ ಕೇಂದ್ರವಾಗಿ ತೆರೆದುಕೊಂಡಾಗ ಕಲೆ ಅರಳಲು ಸಹಕಾರಿ. ರಾಗಶ್ರೀ ಕಳೆದ ಇಪ್ಪತ್ತು ವರ್ಷಗಳಿಂದ ಇಂತಹ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.

ಅತಿಥಿಗಳಾಗಿ ವಿಷ್ಣುಮೂರ್ತಿ ದೇವಾಲಯದ ಅಧ್ಯಕ್ಷರಾದ ನ್ಯಾಯವಾದಿ ಕೆ ಎಸ್ ಭಟ್ಟ ಮಾತನಾಡಿ ರಾಗಶ್ರೀ ಸಂಸ್ಥೆ ನಮ್ಮ ಊರಿನ ಸಾಂಸ್ಕೃತಿಕ ರಾಯಭಾರಿ ಎಂದರು. ನಿವೃತ್ತ ಉಪನ್ಯಾಸಕ, ಆಶುಕವಿ ಕೆ ವಿ ಹೆಗಡೆ ಹಂದಿಮುಲ್ಲೆ ಕಲಾ ಬದುಕಿನ ಕುರಿತು ಮಾತನಾಡಿದರು. ರಾಗಶ್ರೀ ಅಧ್ಯಕ್ಷ ಶಿವಾನಂದ ಭಟ್ಟ ಸ್ವಾಗತಿಸಿದರು. ವಿದ್ವಾನ್ ಎನ್ ಜಿ ಹೆಗಡೆ ವಂದಿಸಿದರು. ಕುಮಾರಿ ಶ್ರೀನಿಧಿ ನಾಯ್ಕ ನಿರೂಪಿಸಿದಳು.

RELATED ARTICLES  ಶಾಸಕರ‌ ಹಸ್ತಕ್ಷೇಪದಿಂದ ಕೂಲಿ ಕಾರ್ಮಿಕರ ಕಿಟ್ ವಿತರಣೆಯಲ್ಲಿ ಅವ್ಯವಹಾರ : ಜೆ.ಡಿ.ಎಸ್ ಆರೋಪ.

ನಂತರ ಚಿಟ್ಟಾಣಿ ಕಲಾ ಬಳಗದವರಿಂದ ಲವ ಕುಶ ಯಕ್ಷಗಾನ ಸಂಪನ್ನವಾಯಿತು. ಭಾಗವತರಾಗಿ ಸರ್ವೇಶ್ವರ ಮೂರುರು, ಮೃದಂಗದಲ್ಲಿ ಸುನಿಲ್ ಭಂಡಾರಿ ಕಡತೋಕಾ, ಚಂಡೆಯಲ್ಲಿ ಗಜಾನನ ಸಾಂತೂರು, ಮುಮ್ಮೇಳದಲ್ಲಿ ಸುಬ್ರಹ್ಮಣ್ಯ ಚಿಟ್ಟಾಣಿ, ನರಸಿಂಹ ಚಿಟ್ಟಾಣಿ, ಕಾರ್ತಿಕ ಚಿಟ್ಟಾಣಿ,ವಿನಯ ಬೇರೊಳ್ಳಿ, ನಾಗೇಂದ್ರ ಮೂರುರು, ಶ್ರೀಪಾದ ಭಟ್ಟ ಹಡಿನಬಾಳ ಅತ್ಯುತ್ತಮ ಪ್ರದರ್ಶನ ನೀಡಿದರು. ಸಂಸ್ಥೆಯ ಸದಸ್ಯರಾದ ಎಸ್ ವಿ ಹೆಗಡೆ, ಸೀರಾರಾಮ ಹೆಗಡೆ, ವಿನಯ್ ಕಬ್ಬಿನಗದ್ದೆ , ಮಂಜುನಾಥ ಹೆಗಡೆ ಕಲಾವಿದರನ್ನು ಗೌರವಿಸಿದರು.