ಕುಮಟಾ : ಕ್ಷುಲ್ಲಕ ಕಾರಣಕ್ಕೆ ಮಗ ಅಪ್ಪನನ್ನೇ ಕೊಚ್ಚಿ ಕೊಲೆ ಮಾಡಿದ ಘಟನೆ ಕುಮಟಾದ ಜನತೆಯನ್ನು ಬೆಚ್ಚಿ ಬೀಳಿಸಿದೆ. ಬಂದು ಸಣ್ಣ ಸಣ್ಣ ವಿಷಯದಲ್ಲಿ ಮನೆಯಲ್ಲಿ ಅಪ್ಪ ಅಮ್ಮನೊಂದಿಗೆ ಜಗಳವಾಡುತ್ತಿದ್ದ ಮಗ ಈ ಕೃತ್ಯ ನಡೆಸಿರುವುದಾಗಿ ಸ್ಥಳೀಯವಾಗಿ ಮಾಹಿತಿ ಲಭ್ಯವಾಗಿದೆ.
ಪ್ರತಿ ದಿನವು ಸಂಜೆಯ ಹೊತ್ತಿಗೆ ಸುಮಾರು 31 ವರ್ಷದ ಶ್ರೀಕಾಂತ ರಾಮಚಂದ್ರ ಗೌಡ ಕುಡಿದು ಬಂದು ಸಣ್ಣ ಸಣ್ಣ ವಿಷಯದಲ್ಲಿ ಮನೆಯಲ್ಲಿ ಅಪ್ಪ ಅಮ್ಮನೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಘಟನೆ ನಡೆದ ದಿನ ಸಂಜೆ ಸುಮಾರು 7.35 ರ ಹೊತ್ತಿಗೆ ಮಗ ಶ್ರೀಕಾಂತ ಕುಡಿದ ಅಮಲಿನಲ್ಲೇ ಮನೆಗೆ ಬಂದಿದ್ದು ಗೇಡಿನ ಸರಗೋಲನ್ನ ಯಾಕೆ ಹಾಕಿದ್ದೀರಿ ಎಂದು ತಗಾದೆ ತೆಗೆದಿದ್ದಾನೆ ಎನ್ನಲಾಗಿದೆ.
ಇದೇ ಕಾರಣಕ್ಕೆ ಅಪ್ಪ ಮಗನ ಮಧ್ಯೆ ಜಗಳ ಆರಂಭವಾಗಿ ನೀನು ದಿನಾಲೂ ಹೀಗೇ ಕುಡಿದು ಬಂದು ಜಗಳ ಮಾಡಿದರೆ ನಿನ್ನನ್ನ ಸಾಯಿಸಿ ಬಿಡುತ್ತೆನೆ ಎಂದು 55 ವರ್ಷದ (ಅಪ್ಪ)ರಾಮಚಂದ್ರ ಕುಪ್ಪು ಗೌಡ ಹೇಳಿದ್ದಕ್ಕೆ ಸಿಟ್ಟಿಗೆದ್ದ ಮಗ ಅಲ್ಲೆ ವರಾಂಡಾದಲ್ಲಿದ್ದ ಕತ್ತಿಯಿಂದ ಹಲ್ಲೆ ಮಾಡಿದ್ದು , ತಂದೆ ರಕ್ಕದ ಮಡುವಿನಲ್ಲಿ ಪ್ರಾಣ ಬಿಟ್ಟಿದ್ದಾನೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ ಎನ್ನಲಾಗಿದೆ.
ತಾಯಿ ಸುಮಿತ್ರಾ ರಾಮಚಂದ್ರ ಗೌಡಾ ಕುಮಟಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪಿ.ಎಸ್.ಐ ಆನಂದ ಮೂರ್ತಿ. ರವಿ.ಗುಡ್ಡೆ. ಎ.ಎಸ್ ಐ. ನಾಗಾರಜಾಪ್ಪ ಆರೋಪಿಯನ್ನ ಭಂದಿಸಿದ್ದಾರೆ ಎಂದು ವರದಿಯಾಗಿದೆ.