ಕುಮಟಾ : ಕರ್ನಾಟಕ ಸರ್ಕಾರದ ಗೃಹ ಸಚಿವರಾದ ಸನ್ಮಾನ್ಯ ಶ್ರೀ ಆರಗ ಜ್ಞಾನೇಂದ್ರ ತಾಲೂಕಿನ ಶ್ರೀ ಕ್ಷೇತ್ರ ಗೋಕರ್ಣ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.ಖಾಸಗಿ ಕಾರ್ಯಕ್ರಮದ ನಿಮಿತ್ತ ಅವರು ಇಂದು ಗೋಕರ್ಣಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಶಾಸಕ ದಿನಕರ ಶೆಟ್ಟಿ, ಪ್ರಮುಖರಾದ ಶ್ರೀ ವಿನೋದ್ ಪ್ರಭು , ಜಿಲ್ಲಾ ಕಾರ್ಯದರ್ಶಿ ಶ್ರೀ ಪ್ರಶಾಂತ ನಾಯ್ಕ ,ಎ ಪಿ ಎಂ ಸಿ ಅಧ್ಯಕ್ಷರಾದ ಶ್ರೀ ರಮೇಶ್ ಪ್ರಸಾದ್,ಪ್ರಮುಖರಾದ ಶ್ರೀ ಗಣೇಶ್ ಪಂಡಿತ,ಶ್ರೀ ಮನೋಜ್ ಭಟ್,ನಿಕಟಪೂರ್ವ ಮಂಡಲಾಧ್ಯಕ್ಷರಾದ ಶ್ರೀ ಕುಮಾರ ಮಾರ್ಕಂಡೇಯ,ನಿಕಟಪೂರ್ವ ತಾ ಪಂ ಸದಸ್ಯ ಮಹೇಶ್ ಶೆಟ್ಟಿ,ಜಿಲ್ಲಾ ಯುವಮೋರ್ಚಾ ಸದಸ್ಯ ಶ್ರೀ ಆದಿತ್ಯ ಶೇಟ್ ಹಾಗೂ ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ಮತ್ತಿತರರು ಇದ್ದರು.

ಪ್ರಸಾದ ವಿತರಣೆಗೆ ಚಾಲನೆ

ರಾಜ್ಯದ ಪ್ರಸಿದ್ದ ಯಾತ್ರಾ ಕ್ಷೇತ್ರವಾದ ಗೋಕರ್ಣದ ಶ್ರೀ ಮಹಾಬಲೇಶ್ವರನ ಸನ್ನಿಧಿಯಲ್ಲಿ ಹೊಸದಾಗಿ ಪ್ರಾರಂಭಿಸಿದ ಲಡ್ಡು ಪ್ರಸಾದ ವಿತರಣೆಯನ್ನು ಗೃಹ ಸಚಿವರಾದ ಆರಗ ಜ್ಞಾನೇಂದ್ರ ಉದ್ಘಾಸಿದರು, ಸ್ವತಃ ಭಕ್ತರಿಗೆ ಲಡ್ಡು ಪ್ರಸಾದ ನೀಡಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಸಕ ದಿನಕರ ಶೆಟ್ಟಿ ಪಕ್ಷದ ಹಿರಿಯ ಮುಖಂಡ ವಿನೋದ ಪ್ರಭು, ಉಪವಿಭಾಗಾಧಿಕಾರಿ ಶ್ರೀ ರಾಹುಲ ಪಾಂಡೆ, ದೇವಾಲಯದ ಮುಖ್ಯ ಅರ್ಷಕ ಶ್ರೀ ಅಮೃತೇಷ ಹಿರೇ, ಗ್ರಾ.ಪಂ ಮಾಜಿ ಅಧ್ಯಕ್ಷ ಶೇನ್ ನಾಗರಾಜ ಹಿತ್ತಲಮಕ್ಕಿ ಸೇರಿದಂತೆ ಮತ್ತಿತರರು ಇದ್ದರು.

RELATED ARTICLES  ಬಾಲಕಿ ಅಪಹರಣ : ಆರೋಪಿಗಳು ಪೊಲೀಸ್ ಬಲೆಗೆ

ಸಿದ್ದರಾಮಯ್ಯನವರು ಮೈನಾರಿಟಿ ಓಟಿಗಾಗಿ ಜೊಲ್ಲು ಸುರಿಸುತಿದ್ದಾರೆ..!

ಗೋಕರ್ಣ : ಸಿದ್ದರಾಮಯ್ಯನವರು ಮೈನಾರಿಟಿ ಓಟಿಗಾಗಿ ಜೊಲ್ಲು ಸುರಿಸುತಿದ್ದಾರೆ ಎಂದು ಗೃಹ ಸಚಿವ ಅರಗಾ ಜ್ಞಾನೇಂದ್ರ ರವರು ಕುಟುಕಿದ್ದಾರೆ. ಗೋಕರ್ಣದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ರವರಿಗೆ ಆರ್.ಎಸ್.ಎಸ್ ಬಗ್ಗೆ ಎಷ್ಟು ಕೆಳಮಟ್ಟದಲ್ಲಿ ಮಾತನಾಡಿದರೆ ಅಷ್ಟು ಓಟು ಸಿಗುತ್ತದೆ ಎಂದು ಭಾವಿಸಿದ್ದಾರೆ ,ಇದು ಅವರ ಭ್ರಮೆ ಅಷ್ಟೆ. ಬಿಜೆಪಿ ಕುಟುಂಬ ರಾಜಕಾರಣ ಮಾಡುತ್ತಿದೆ ಎನ್ನುತ್ತಾರೆ, ಕಾಂಗ್ರೆಸ್ ನ ಅಧ್ಯಕ್ಷರಂತೆ ಯೋಗ್ಯತೆ ಇಲ್ಲದ ರಾಜೀವ್ ಗಾಂಧಿ ,ಸೋನಿಯಾ ಗಾಂಧಿ ಅವರ ಮಗ ನಂತೆ ಯಾವುದೇ ಆರ್ಹತೆ ಇಲ್ಲದೇ ರಾಜಕೀಯಕ್ಕೆ ಬಂದು ಬಿಡುತ್ತಾರೆ, ಬಿಜೆಪಿಯಲ್ಲಿ ಅರ್ಹತೆ ,ಯೋಗ್ಯತೆ ಇರುವವರು ,ಒಬ್ಬರ ಮಗ ಎಂದು ಮೂಲೆಗೆ ಹೂಗಬಾರದ ,ಯಾರಿಗೆ ಸೇವಾ ಮನೋಭಾವನೆ, ಅರ್ಹತೆ ಇರುತ್ತದೆಯೋ ಅವರು ಮೂಲೆಗೆ ಹೋಗಬಾರದು ಎಂದರು.

RELATED ARTICLES  ಉತ್ತರಕನ್ನಡದಲ್ಲಿ ಇಂದು ಕೊರೋನಾಘಾತ : ಶತಕದ ಗಡಿ ದಾಟಿದ ಕೊರೋನಾ

ಪೊಲೀಸ್ ಠಾಣೆ ಕಟ್ಟಡಕ್ಕೆ ಮನವಿ

ಜಿಲ್ಲಾಪಂಚಾಯತ್ ನಿಕಟಪೂರ್ವ ಸದಸ್ಯರಾದ ಗಜಾನನ ಪೈರವರು ಇಂದು ಕುಮಟಾಕ್ಕೆ ಆಗಮಿಸಿದ ಮಾನ್ಯ ಗ್ರಹ ಸಚಿವರಾದ ಅರಗ ಜ್ಞಾನೇಂದ್ರಅವರನ್ನು ಭಾರತೀಯ ಜನತಾಫಾರ್ಟಿ ತಾಲೂಕ ಕಚೇರಿಯಲ್ಲಿ ಭೇಟಿಯಾಗಿ ಬಹಳ ವರ್ಷಗಳಿಂದ ಕತಗಾಲ್ ದಲ್ಲಿ ಪೊಲೀಸ್ ಠಾಣೆ ಕಟ್ಟಡಕ್ಕೆ ಮನವಿ ಮಾಡುತ್ತಿದ್ದು ಕೃಷಿ ಇಲಾಖೆ ಕಟ್ಟಡದಲ್ಲಿ ಪೊಲೀಸ್ ಸಿಬ್ಬಂದಿಗಳು ಇರುತ್ತಿದ್ದಾರೆ. ಶಿರಸಿ ಕುಮಟಾ ರಸ್ತೆಯಲ್ಲಿ ಕತಗಾಲ ಚೆಕ್ ಪೋಸ್ಟ್ ಬಹುಮುಖ್ಯ ಆಗಿರುವುದರಿಂದ ಅಧಿಕೃತ ಕಟ್ಟಡ ನಿರ್ಮಿಸಿಕೊಡುವಂತೆ ಮನವಿ ಮಾಡಿದರು.