ಕುಮಟಾ :ವೈಟ್ ಲಿಫ್ಟಿಂಗ್, ಪವರ್ ಲಿಫ್ಟಿಂಗ್ ಹಾಗೂ ಬಾಡಿಬಿಲ್ಡಿಂಗ್ ನಲ್ಲಿ ಸದಾ ಒಂದಿಲ್ಲೊಂದು ಸಾಧನೆ ಮಾಡುತ್ತಾ, ಜನತೆಗೆ ಚಿರಪರಿಚಿತರೂ ಹಾಗೂ ಸ್ನೇಹಜೀವಿ ರಾಜೇಶ್ ಮಡಿವಾಳ ಹೊಸ ಸಾಧನೆಮಾಡುವ ಮೂಲಕ ಕುಮಟಾದ ಹೆಸರನ್ನು ರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಲಿದ್ದಾರೆ
ದಾವಣಗೆರೆ ಯಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರ ರಾಜ್ಯ ಮಟ್ಟದ ಕ್ರೀಡಾಕೂಟ ದಲ್ಲಿ ಕುಮಟಾ ಅಗ್ನಿ ಶಾಮಕ ಇಲಾಖೆಯ ರಾಜೇಶ್ ಕೆ ಮಡಿವಾಳ ರವರು ಭಾಗವಹಿಸಿ ವೈಟ್ ಲಿಫ್ಟಿಂಗ್, ಪವರ್ ಲಿಫ್ಟಿಂಗ್ ಹಾಗೂ ಬಾಡಿಬಿಲ್ಡಿಂಗ್ ನಲ್ಲಿ ಎರಡು ಬಂಗಾರದ ಪದಕ ಹಾಗೂ ಒಂದು ಬೆಳ್ಳಿ ಪದಕ ಗಳಿಸಿ ರಾಷ್ಟ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.
ಇವರಿಗೆ ಜಿಲ್ಲಾ ಅಗ್ನಿಶಾಮಕ ಅಧಿಕಾರಯವರದು ಮಂಜನಾಥ ಸಾಲಿ ಹಾಗೂ ಕುಮಟಾ ಅಗ್ನಿಶಾಮಕ ಠಾಣಾಧಿಕಾರಿ ಟಿ ಎನ್ ಗೊಂಡ ಹಾಗೂ ಎಲ್ಲಾ ಸಿಬ್ಬಂದಿ ವರ್ಗ ದವರು ಹಾಗೂ ಹೆಲ್ತ್ ಪಾಯಿಂಟ್ ಜಿಮ್ ಕುಮಟಾರವರು ಅಭಿನಂದನೆ ತಿಳಿಸಿರುತ್ತಾರೆ.