ಭಟ್ಕಳ: ತಾಲೂಕಿನ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವಿಚಿತ್ರವಾದ ಮಗುವೊಂದು ಜನನವಾಗಿದ್ದು, ಅತ್ಯಂತ ವಿರಳಾತೀವಿರಳ ಪ್ರಕರಣ ಎಂದು ವೈದ್ಯಲೋಕ ತಿಳಿಸಿದೆ. ಎರಡು ತಲೆಯನ್ನು ಹೋಲುವ ಮಗುವಿನ ಜನನವಾಗಿದ್ದು, ಮಗು ಜೀವಂತವಾಗಿದೆ ಹಾಗೂ ತಾಯಿ ಸುರಕ್ಷಿತವಾಗಿದ್ದಾಳೆ ಎಂದು ಮಾಹಿತಿ ಲಭ್ಯವಾಗಿದೆ.
ಅಂಕೋಲಾದ ಹೊನ್ನಿಕೇರಿ ಮೂಲದ ದಂಪತಿಗಳಿಗೆ ಈ ವಿಚಿತ್ರ ಮಗು ಜನನವಾಗಿದೆ. ಗರ್ಬಿಣಿ ಮಹಿಳೆ ಮಣಿಪಾಲ ಆಸ್ಪತ್ರೆಗೆ ತೆರಳಿದ್ದು, ಅಲ್ಲಿಯೂ ವೈದ್ಯರು ಮಗು ಬದುಕುವ ಯಾವುದೇ ಲಕ್ಷಣ ಕಾಣಿಸುವುದಿಲ್ಲ. ಇಲ್ಲಿ ಚಿಕಿತ್ಸೆ ವೆಚ್ಚವೂ ಹೆಚ್ಚಾಗಬಹುದು ಎಂದಿದ್ದಾರೆ. ಹೀಗಾಗಿ ಮಹಿಳೆ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 10 ಸಾವಿರ ಶಿಶುಗಳಲ್ಲಿ ಒಬ್ಬರಿಗೆ ಬರುವ ಸಂಭವವಿದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಎನ್ಸ್ ಹಲೋಸ್ ಎನ್ನುತ್ತಾರೆ. ಮಗು ನೋಡಲು ಎರಡು ತಲೆ ಹೋಲುವಂತಿರುತ್ತದೆ ಎನ್ನಲಾಗಿದೆ.
ಮಹಿಳೆ ಹೊಟ್ಟೆ ನೋವಿನಿಂದ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಭಟ್ಕಳದಲ್ಲಿ ಸ್ಕ್ಯಾನಿಂಗ್ ಮಾಡಿದಾಗ ಮಗು 2 ತಲೆ ಹೋಲುವದನ್ನು ಕಂಡು ವೈದ್ಯರು ದಂಗಾಗಿದ್ದಾರೆ. 2 ತಲೆಯನ್ನು ಹೋಲುವ ಮಗುವು ಸದ್ಯ ಜೀವಂತವಾಗಿದ್ದರೂ ಬದುಕುವ ಲಕ್ಷಣ ಕ್ಷೀಣ ಎಂದು ವೈದ್ಯಾಧಿಕಾರಿ ಡಾ ಸವಿತಾ ಕಾಮತ ತಿಳಿಸಿದ್ದಾರೆ. ಭಟ್ಕಳದ ಹೆರಿಗೆ ತಜ್ಞೆ ಡಾ. ಶಂಸನೂರು ಕಷ್ಟಕರವಾದ ಈ ಪ್ರಕರಣವನ್ನು ತನ್ನೆಲ್ಲಾ ಅನುಭವದಿಂದ ನಾರ್ಮಲ್ ಹೆರಿಗೆ ಆಗುವ ಹಾಗೆ ಮಾಡಿದ್ದಾರೆ.