ಕುಮಟಾ :ನಾನು ಯಾವುದೇ ಲಾಬಿಯಾಗಲಿ, ಮತ್ತೆನೊ ಮಾಡಿ ಈ ಸ್ಥಾನಕ್ಕೆ ಬಂದಿಲ್ಲ, ನನಗೆ ಸಚಿವನಾಗುವ ಕನಸು ಕೂಡ ಇರಲಿಲ್ಲ ಎಂದು ನೂತನ ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ ಹೇಳಿದರು. ಅಲ್ಲದೆ, ಮುಂದಿನ ದಿನಗಳಲ್ಲಿ ವಿರೋಧ ಪಕ್ಷದ ಪ್ರಮುಖರು ನಮ್ಮ ಪಕ್ಷವನ್ನು ಸೇರಲಿದ್ದಾರೆ ಎನ್ನುವ ಸುಳಿವನ್ನು ಮಾರ್ಮಿಕವಾಗಿ ಹೇಳಿದರು.

ನೂತನ ಕೇಂದ್ರಸಚಿವರಾಗಿ ಆಯ್ಕೆಯಾದ ಅನಂತ ಕುಮಾರ ಹೆಗಡೆ ಅವರಿಗೆ ಕುಮಟಾ ತಾಲೂಕಿನ ನಾಮಧಾರಿ ಸಭಾಭವನದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕೌಶಲ್ಯಾಭಿವೃದ್ದಿ ಸಚಿವರಾದ ಹೆಗಡೆಯವರು ಕುಮಟಾಕ್ಕೆ ಪ್ರಥಮ ಬಾರಿಗೆ ಆಗಮಿಸಿ ಕ್ಷೇತ್ರದ ಕಾರ್ಯಕರ್ತರದಲ್ಲಿ ಹೊಸ ಹುಮ್ಮಸನ್ನು ಮೂಡಿಸಿದರು. ನಂತರ ಅವರು ಕ್ಷೇತ್ರದ ಜನರನ್ನು ಉದ್ದೇಶಿಸಿ ಮಾತನಾಡಿ, ನಾನು ಉತ್ತರ ಕನ್ನಡ ಜಿಲ್ಲೆಯ ಸಂಸದನಾಗಿ ಆಯ್ಕೆಯಾದ ಎರಡು ವರ್ಷಗಳಲ್ಲಿ ಕ್ಷೇತ್ರ ಪ್ರವಾಸವನ್ನು ಕೈಗೊಂಡಿರಲಿಲ್ಲ.. ನಾನು ರಾಜಕಿಯದಿಂದ ದೂರಹೋಗಬೇಕು ಎನ್ನುವ ಉದ್ದೇಶ ಇರುವ ಸಂದರ್ಬದಲ್ಲಿ ನಮ್ಮ ನಾಯಕರು ನನಗೆ ಹೊಸ ಜವಾಬ್ದಾರಿಗಳನ್ನು ನೀಡಿದ್ದಾರೆ. ನಾನು ಯಾವುದೆ ಲಾಬಿಯಾಗಲಿ, ಮತ್ತೆನೊ ಒಂದು ಮಾಡಿ ಈ ಸ್ಥಾನಕ್ಕೆ ಬಂದಿಲ್ಲ, ನನಗೆ ಸಚಿವನಾಗುವ ಕನಸು ಕೂಡ ಇರಲಿಲ್ಲ ಎಂದರು.
ಇಲ್ಲ ನಿಮ್ಮ ದಾರಿ ನಿಮಗೆ ನನ್ನ ದಾರಿ ನನಗೆ. ನೀರುದ್ಯೋಗಿಗಳಿಗೆ ಕೆಲಸ ಕೊಡುವ ಬಗ್ಗೆ ಪ್ರಯತ್ನ ನಮ್ಮಲ್ಲಿ ಇದೆ. ಯುವಕರಲ್ಲಿ ನಮ್ಮ ಬಗ್ಗೆ ನೀರಕ್ಷೆ ಇದೆ. ಆ ನಿರೀಕ್ಷೆಗೆ ಶಕ್ತಿಯನ್ನು ತುಂಬಬೇಕು, ನಾವು ಪಡೆದುಕೊಂಡ ಶಿಕ್ಷಣ ನಮ್ಮ ಬಾಳಿನ ದಾರಿ ದೀಪಾವಾಗಬೇಕು ಎನ್ನುವ ಆಶಾ ಭಾವನೆಯನ್ನು ಮೂಡಿಸುವ ಕಾರ್ಯ ಮಾಡಬೇಕಾಗಿದೆ,.. ಜೊತೆಗೆ ಕೌಶಲ್ಯ ಇರುವವರಿಗೆ ಅರ್ಹತ ಪತ್ರ ನೀಡುವ ಕಾರ್ಯವಾಗಲಿದೆ . ಸಂಬಳ ನೀಡಿ ಬದುಕಿಗೆ ದಾರಿ ಮಾಡಿಕೊಡುವ ಕೆಲಸ ನಮ್ಮ ಸರಕಾರದಿಂದ ಆಗಲಿದೆ. ಇದು ನಮ್ಮ ಯೋಜನೆಯಾಗಿದೆ. ಈ ಯೋಜನೆಯನ್ನು ನಾನು ಒಂದು ವರ್ಷದಲ್ಲಿ ಸಾಕರಮಾಡಿ ನಿಮ್ಮ ಮುಂದೆ ನಿಲ್ಲುತ್ತೇನೆ ಎಂದರು…

RELATED ARTICLES  ಜಗಜ್ಜನನಿ ಮಠದ ಶ್ರೀಗಳಿಗೆ "ಗೋಕರ್ಣ ಗೌರವ"

ಮುಂದಿನ ದಿನದಲ್ಲಿ ನಮ್ಮ ಜಿಲ್ಲೆಯಲ್ಲಿ ನಮ್ಮ ವಿರೋಧಿಗಳು ಇರಬಾರದು. ಯಾರೆ ಇದ್ದರು ಅವರು ನಮ್ಮ ಪಕ್ಷದಲ್ಲಿ ಪಕ್ಷಕ್ಕಾಗಿ ಇರಬೇಕು ಎನ್ನುತ್ತಾ ಮುಂದಿನ ದಿದನಲ್ಲಿ ಜಿಲ್ಲೆಯ ಪ್ರಮುಖರು ನಮ್ಮ ಪಕ್ಷವನ್ನು ಸೇರಲಿದ್ದಾರೆ ಎನ್ನುವ ಸುಳಿವು ನೀಡಿದ್ರು. ಪ್ರವಾಸೋಧ್ಯಮ ಸಚಿವರಿಗೆ ಅನುಧಾನ ಬರುವುದು ಕೇಂದ್ರ ಸರಕಾರದಿಂದ.. ಅವರು ನನ್ನೊಡನೆ ಚರ್ಚಿಸಿ ಜಿಲ್ಲೆಯಲ್ಲಿ ಅಭಿವೃದ್ದಿ ಕಾರ್ಯ ಮಾಡಿದ್ದಾರೆ ಅದಕ್ಕೆ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೆನೆ ಎಂದರು.
ಕುಮಟಾದ ಪ್ರಮುಖ ರಸ್ತೆಗಳನ್ನು ರಾಷ್ಟ್ರೀಯ ರಸ್ತೆಯನ್ನಾಗಿ ಮಾಡಿದ್ದೇವೆ. ದೀನದಯಾಳ ಯೋಜನೆಯಲ್ಲಿ ಗ್ರಾಮೀಣಾ ಪ್ರದೇಶದ ಎಲ್ಲಾರಿಗೂ ಉಚಿತ ವಿದ್ಯುತ್ ಕೊಡುವ ಕೆಲಸ ಮಾಡಿದ್ದೇವೆ.. ಆದರೆ ಈ ಯೋಜನೆಯ ಉದ್ಘಾಟನೆ ಮಾಡಲು ಪ್ರವಾಸೋಧ್ಯಮ ಇಲಾಖೆ ಸಚಿವರು ಬಿಡುತ್ತಿಲ್ಲ ಯಾಕೇಂದ್ರೆ ರಿಬ್ಬನ್ ಕಟ್ ಮಾಡುವುದು ಮತ್ತು ಕಲ್ಲ ಹಾಕುವುದು ಅವರ ಕೆಲಸ.. ಆದ್ದರಿಂದ ಮುಂದಿನ ದಿದನಲ್ಲಿ ರಾಜ್ಯ ಸರಕಾರವನ್ನು ನಮ್ಮ ಪಕ್ಷಕ್ಕೆ ಕೊಟ್ಟು ನೋಡಿ ನಮ್ಮ ಕ್ಷೇತ್ರವು ಅಭಿವೃದ್ದಿ ಯಾಗುತ್ತದೆ ಎಂದರು…

RELATED ARTICLES  ಹಿಂದೂ ದೇವರನ್ನು ಅವಹೇಳನ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ : ಹಿಂದೂ ದೇವರನ್ನು ಅಶ್ಲೀಲ ಪದದಿಂದ ನಿಂದಿಸಿದವನನ್ನು ಬಂಧಿಸಿದ ಪೊಲೀಸರು : ಜನರಿಂದ ಕೇಳಿ ಬಂದ ಆಗ್ರಹ :

ಈ ಸಂದರ್ಭದಲ್ಲಿ ತಾಲೂಕಿನ ಪ್ರಮುಖರು ಸಚಿವರಿಗೆ ಅಭಿನಂದನೆ ಸಲ್ಲಿಸಿದ್ರು ಮತ್ತು ಕುಮಟಾ ಮಂಡಲದಿಂದ ಅಭಿನಂದನೆ ಸಲ್ಲಿಸಲಾಯಿತು.
ಈ ಕಾರ್ಯಕ್ರಮದ ವೇದಿಕೆಯಲ್ಲಿ ಬಿ.ಜೆ.ಪಿ ಜಿಲ್ಲಾಧ್ಯಕ್ಷ ಕೆ.ಜಿ,ನಾಯ್ಕ, ಬಿ.ಜೆ.ಪಿ ಮುಖಂಡರಾದ ಸೂರಜ್ ನಾಯ್ಕ, ನಾಗರಾಜ್ ನಾಯಕ ತೊರ್ಕೆ, ದಿನಕರ ಶೆಟ್ಟಿ,ಜಿ,ಜಿ, ಹೆಗಡೆ,ವಿನೋಧ ಪ್ರಭು,ಸಂತೋಷ ನಾಯ್ಕ ಸೇರಿದಂತೆ ಜಿಲ್ಲೆಯ ಪ್ರಮುಖರು ಉಪಸ್ಥಿತರಿದ್ದರು..

 

ಚಂದ್ರಕಾಂತ ನಾಯ್ಕ  ಕುಮಟಾ..