ಕುಮಟಾ: ಕುಮಟಾ ಅರ್ಬನ್ ಬ್ಯಾಂಕ್ ವತಿಯಿಂದ ೨೦೧೯-೨೦ ಹಾಗೂ ೨೦೨೦-೨೧ ನೇ ಸಾಲಿನಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಬ್ಯಾಂಕಿನ ಹಾಗೂ ಕುಮಟಾ ಪುರಸಭೆಯ ಮಾಜಿ ಅಧ್ಯಕ್ಷ ಶೇಷಗಿರಿ ಶ್ಯಾನಭಾಗ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿ, ಪ್ರತಿಭಾ ಪುರಸ್ಕಾರ ಮಕ್ಕಳ ಭಾವನೆಗಳಿಗೆ ನೀಡುವ ಪ್ರೇರಣೆಯಾಗಿದ್ದು, ನಿಮ್ಮ ಸಾಧನೆಯಲ್ಲಿ ನಿಮ್ಮ ತಂದೆ-ತಾಯಿಗಳ ಶ್ರಮವೂ ಇದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ರಾಮನಾಥ (ಧೀರೂ) ಶ್ಯಾನಭಾಗ ಮಾತನಾಡಿ, ಕೇವಲ ಸಾಧನೆಯ ಸ್ಫೂರ್ತಿಗಾಗಿ ಪ್ರತಿಭಾ ಪುರಸ್ಕಾರ ನೀಡುತ್ತಿದ್ದೇವೆ. ನಿಮ್ಮ ಪ್ರಯತ್ನ ನಿರಂತರವಾಗಿ ಮುಂದುವರೆದು, ಇದಕ್ಕೂ ಹೆಚ್ಚಿನ ಸನ್ಮಾನ ಸ್ವೀಕರಿಸುವಂತಾಗಬೇಕೆAದು ಹಾರೈಸಿದರು.
೨೦೧೯-೨೦ ಹಾಗೂ ೨೦೨೦-೨೧ ನೇ ಸಾಲಿನಲ್ಲಿ ಅತೀ ಹೆಚ್ಚು ಅಂಕಗಳಿಸಿದ ೧೪ ವಿದ್ಯಾರ್ಥಿಗಳನ್ನು ಸ್ನಮಾನಿಸಿ, ಅಭಿನಂದಿಸಲಾಯಿತು. ಬ್ಯಾಂಕಿನ ಸಿಬ್ಬಂದಿಗಳಾದ ಸತೀಶ ಕಾಮತ ಸ್ವಾಗತಿಸಿದರು. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಪ್ರದೀಪ ಎಸ್. ಪೈ ವಂದಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ಚಂದ್ರಕಾAತ ಶ್ಯಾನಭಾಗ, ಮುಕುಂದ ಶ್ಯಾನಭಾಗ, ವಿವೇಕ ಪೈ, ಸದಾನಂದ ಕಾಮತ, ಸುರೇಶ ನಾಯ್ಕ, ಪ್ರಶಾಂತ ನಾಯ್ಕ, ವಸಂತ ಹುಲಸ್ವಾರ, ಲೀಲಾವತಿ ನಾಗೇಶ ಭಂಡಾರಿ, ಸುಧಾ ಬೀರಪ್ಪ ಗೌಡ, ಪ್ರಭಾಕರ ಗೋಳಿ, ಬ್ಯಾಂಕಿನ ಸಿಬ್ಬಂದಿಗಳು ಸೇರಿದಂತೆ ಸನ್ಮಾನಿತ ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು.