ಕುಮಟಾ: ಕುಮಟಾದ ಜನರು ಬೆಚ್ಚಿ ಬೀಳುವಂತಹ ಸುದ್ದಿ ಹರಿದಾಡುತ್ತಿದ್ದು, ಪಟ್ಟಣ ಸಮೀಪದ ಅರಣ್ಯ ಪ್ರದೇಶದಲ್ಲಿ ಸ್ಪೋಟಕದಂತಿರುವ ವಸ್ತು ಪತ್ತೆಯಾಗಿದೆ ಎಂಬುದೇ ಇದಕ್ಕೆ ಕಾರಣ.
ವಾಯು ವಿಹಾರಕ್ಕೆ ಆಗಮಿಸಿದ ಕೆಲ ವ್ಯಕ್ತಿಗಳು ಬಾಂಬ್ ರೂಪದಲ್ಲಿರುವ ವಸ್ತುವನ್ನು ಗಮನಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ತನಿಖೆ ಆರಂಭಿಸಿದ್ದಾರೆ. ಪಟ್ಟಣದ ವಿದ್ಯಾಧೀರಾಜ ಪಾಲಿಟೆಕ್ನಿಕ್ ಕಾಲೇಜ್ ಸಮೀಪದ ಹಿಂಭಾಗದ ಅರಣ್ಯಪ್ರದೇಶದಲ್ಲಿ ಬಾಂಬ್ ಹೋಲುವ ವಸ್ತು, ಪತ್ತೆಯಾಗಿದೆ. ಸ್ಥಳಕ್ಕೆ ಪೋಲೀಸರು ಆಗಮಿಸಿದ್ದು, ಶೋಧ ಕಾರ್ಯ ನಡೆಸಿದ್ದಾರೆ.
ಅರಣ್ಯ ಪ್ರದೇಶದಲ್ಲಿ ಪತ್ತೆಯಾದ ವಸ್ತು ಬಾಂಬ್ ತರದಲ್ಲಿಯೇ ಕಾಣುತ್ತಿದ್ದು, ಬಾಂಬ್‌ಗೆ ಅಳವಡಿಸಲಾಗುವ ವೈಯರ್ ಕೂಡ ಇದೆ ಎನ್ನಲಾಗಿದೆ. ಅಗ್ನಿ ಶಾಮಕ ದಳ ಸೇರಿದಂತೆ ಶ್ವಾನ ದಳ ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ.
ಇನ್ನು ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು ಅಗ್ನಿಶಾಮಕ ಸಿಬ್ಬಂದಿ, ಶ್ವಾನದಳ ದವರು ಬೀಡು ಬಿಟ್ಟಿದ್ದು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದ್ದು ಪೊಲೀಸರ ಮಾಹಿತಿ ಪ್ರಲಾರ ಸಿಲೆಂಡರ್ ಬ್ಯಾಟರಿ ಷಲ್ ಗಳು ಇದರಲ್ಲಿ ಇದ್ದು ಇದು ನಕಲಿ ಬಾಂಬ್ ಆಗಿರುವ ಸಾಧ್ಯತೆ ಇದೆ ಎಂದಿದ್ದಾರೆ.ಆದರೇ ಈ ವಸ್ತುಗಳು ಸಿಕ್ಕ ಪ್ರದೇಶವು ರೈಲ್ವೆ ನಿಲ್ದಾಣ ಸಹ ಹತ್ತಿರವಿದ್ದು ಸಾಕಷ್ಟು ಅನುಮಾನಗಳು ಮೂಡುವಂತೆ ಮಾಡಿದೆ.
ಆದರೆ ಇದು ಸ್ಪೋಟಕವೇ? ನಾಡಬಾಂಬೆ? ಅಥವಾ ಅಸಲಿಗೇ ಬಾಂಬ್ ಇರಬಹುದೆ ಎಂಬುದನ್ನು ಪೊಲೀಸರೇ ಖಚಿತ ಪಡಿಸಬೇಕಿದೆ. ಆದರೆ , ಸ್ಪೋಟಕದಂತ ವಸ್ತು ದೊರೆತ ಸ್ಥಳ ಕಾಲೇಜಿನಿಂದ ದೂರ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಸಂಶಯಾಸ್ಪದವಾಗಿ ತಿರುಗಾಡುತ್ತಿರುವವರನ್ನು ವಿಚಾರಣೆ ನಡೆಸಲಾಗುತ್ತಿದೆ. ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ. ಬಾಂಬ್ ನಿಷ್ಕ್ರಿಯ ದಳ ಆಗಮಿಸುತ್ತಿದೆ ಎನ್ನಲಾಗಿದೆ.