ಕುಮಟಾ: ಒಂದೆಡೆ ಪ್ರವಾಸಿಗರು ಸಮುದ್ರಕ್ಕೆ ಇಳಿದು ಅಚಾತುರ್ಯ ನಡೆಯುತ್ತಿದ್ದರೆ ಇನ್ನೊಂದೆಡೆ, ಮನಸ್ಥಾಪದ ಕಾರಣಕ್ಕೆ ಬೇಸತ್ತು, ಸಮುದ್ರ ತಡಕ್ಕೆ ಬಂದಿದ್ದ ವೃದ್ಧೆಯೊಬ್ಬಳು ಸಮುದ್ರದ ಸುಳಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಗೋಕರ್ಣದಲ್ಲಿ ನಡೆದಿದೆ.
ತಾಲೂಕಿನ ಗೋಕರ್ಣದ ಮುಖ್ಯ ಕಡಲತೀರದಲ್ಲಿ ವೃದ್ಧೆಯೋರ್ವಳ ಶವ ಪತ್ತೆಯಾಗಿದೆ. ಹುಬ್ಬಳ್ಳಿಯ ಗೋಕುಲ ರಸ್ತೆಯ ರಾಜಧಾನಿ ಕಾಲೋನಿಯ ನಿವಾಸಿ ವಿನಿತಾ ವಿ ರಾನಡೆ(62) ಮೃತ ವೃದ್ದೆ. ಈಕೆ ಮನೆಯಲ್ಲಿ ನಡೆದ ಮನಸ್ತಾಪದಿಂದ ಬೇಸತ್ತು ಗೋಕರ್ಣದ
ಮುಖ್ಯಕಡಲ ತೀರಕ್ಕೆ ಆಗಮಿಸಿ, ಸಮುದ್ರಕ್ಕೆ ಇಳಿದಿದ್ದಾಳೆ. ನೀರಿನ ಸುಳಿಕೆ ಸಿಕ್ಕಿ ಕೊಚ್ಚಿಹೋಗಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ಗೋಕರ್ಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತ ದೇಹವನ್ನು ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗಾರಕ್ಕೆ ಸಾಗಿಸಲಾಗಿದೆ. ಈ ಕುರಿತು ಗೋಕರ್ಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.