ಕುಮಟಾ: ತಾಲೂಕಿನ ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜು ಹಿಂಬದಿ ಆವರಣದಲ್ಲಿ ಬಾಂಬ್ ಮಾದರಿ ವಸ್ತು ಪತ್ತೆಯಾದ ಸುದ್ದಿ ಕುಮಟಾವನ್ನು ಅಷ್ಟೇ ಅಲ್ಲದೇ, ಉತ್ತರಕನ್ನಡದವರನ್ನೂ ಬೆಚ್ಚಿ ಬೀಳಿಸಿತ್ತು, ಆದರೆ ಈಗ ಈ ಬಗ್ಗೆ ಸಮಾಧಾನದ ಸುದ್ದಿಯೊಂದು ದೊರೆತಿದ್ದು, ರಾತ್ರೋ ರಾತ್ರಿ ಕಾರ್ಯಚರಣೆ ನಡೆಸಿದ ಪರಿಣಾಮ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದೆ.
ವಿಷಯ ತಿಳಿಯುತ್ತಿದ್ದಂತೆ ಕಾರ್ಯ ಪ್ರವೃತ್ತರಾದ ಮಂಗಳೂರಿನಿಂದ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳದವರು ತಪಾಸಣೆ ನಡೆಸಿ ವಸ್ತುವನ್ನು ನಿಷ್ಕ್ರಿಯ ಗೊಳಿಸಿದ್ದಾರೆ ಎಂದು ವರದಿಯಾಗಿದೆ.
ಬಾಂಬ್ ಮಾದರಿ ವಸ್ತುವಿನಲ್ಲಿ ಪೈಪ್ ಗಳು ಪೇಪರ್ ತುಂಡುಗಳು ,ವಯರ್ ಗಳನ್ನು ಸುತ್ತಿ ಅದಕ್ಕೆ ಷಲ್ ಗಳನ್ನು ಕನೆಕ್ಟ್ ಮಾಡಲಾಗಿತ್ತು. ಅದರ ಜೊತೆಗೆ ಸರ್ಕಿಟ್ ಬೋರ್ಡ ಅನ್ನು ಹಾಕಿ ಬಾಂಬ್ ಮಾದರಿ ತಯಾರು ಮಾಡಿ ಇಡಲಾಗಿತ್ತು ಎಂದು ತಿಳಿದುಬಂದಿದೆ.
ಸದ್ಯ ಬಾಂಬ್ ಎಂಬ ಆತಂಕ ದೂರವಾಗಿದೆ. ಕಾಲೇಜು ವಿದ್ಯಾರ್ಥಿಗಳು ಈ ರೀತಿ ಬಾಂಬ್ ತಯಾರಿ ಮಾಡಿ ಇಟ್ಟಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದು ತನಿಖೆ ಮುಂದುವರೆದಿದೆ. ಪೊಲೀಸ್ ತನಿಖೆ ಪೂರ್ಣಗೊಂಡ ನಂತರ ಘಟನೆಗೆ ಕಾರಣ ಯಾರು ಬಗ್ಗೆ ಸ್ಪಷ್ಟ ಮಾಹಿತಿ ತಿಳಿದು ಬರಲಿದೆ.