ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಪೂರ್ವದ ಹಳಗನ್ನಡ ಹಳಗನ್ನಡ ನಡುಗನ್ನಡ ಹೊಸಗನ್ನಡ ಈ ರೀತಿಯಲ್ಲಿ ಕನ್ನಡ ಭಾಷೆ ಕಾಲಘಟ್ಟವನ್ನು ಗತಿಸಿ ಆಧುನಿಕ ಕನ್ನಡದಲ್ಲಿ ಬಳಸಲ್ಪಡುತ್ತಿದೆ. ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶದೊಳ್ ಎನ್ನುತ್ತಲೇ ಮರುಜನ್ಮ ಒಂದಿದ್ದರೆ ಕೋಗಿಲೆಯಾಗಿ ಇಲ್ಲವೇ ಮರಿದುಂಬಿಯಾಗಿ ಯಾದರೂ ಇದೇ ಕನ್ನಡ ನಾಡಿನಲ್ಲಿ ಹುಟ್ಟಬೇಕು ಎನ್ನುವ ಪಂಪನ
ಮನದಿಂಗಿತ ಕನ್ನಡ ನಾಡಿನ, ಕನ್ನಡ ಭಾಷೆಯ ಹಿರಿಮೆ ಗರಿಮೆಯನ್ನು ಅನಾವರಣಗೊಳಿಸುತ್ತದೆ ಎಂದು ಡಾ. ಶ್ರೀಧರ ಗೌಡ ಉಪ್ಪಿನ ಗಣಪತಿ ಅಭಿಪ್ರಾಯಪಟ್ಟರು.
ಮಾತಾಡ್ ಮಾತಾಡ್ ಕನ್ನಡ ಕಾರ್ಯಕ್ರಮದ ನಿಮಿತ್ತ ಹೆಗಡೆಯ ಹೆಣ್ಣುಮಕ್ಕಳ ಶಾಲೆಯಲ್ಲಿ ಹಮ್ಮಿಕೊಂಡ 127 ವಿದ್ಯಾರ್ಥಿಗಳ ಹಾಗೂ 6 ಶಿಕ್ಷಕರೊಂದಿಗೆ ಲಕ್ಷಕಂಠದಲ್ಲಿ ಗೀತ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿ ದೇಶದಲ್ಲಿ ಸಾಹಿತ್ಯ ಕೃಷಿಗೆ ಕೊಡ ಮಾಡುವ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಜ್ಞಾನಪೀಠ ಪ್ರಶಸ್ತಿ ಅತಿ ಹೆಚ್ಚು ಅಂದರೆ ಎಂಟು ಪ್ರಶಸ್ತಿಗಳು ಕನ್ನಡಕ್ಕೆ ದಕ್ಕಿದ.
ಇಂದು ಜಾಗತೀಕರಣದಿಂದ ನಮ್ಮ ಸುತ್ತ ಮುತ್ತ ಹಲವಾರು ಭಾಷೆಯನ್ನಾಡುವ ಸಮುದಾಯ ದವರು ಜೊತೆಗೆ ಹಾಗೂ ಉನ್ನತ ಶಿಕ್ಷಣಕ್ಕಾಗಿ ಬೇರೆ ಬೇರೆ ಭಾಷೆಗಳನ್ನು ನಾವು ಕಲಿಯುತ್ತಿದ್ದರು ಕನ್ನಡವನ್ನು ಹೃದಯ ಭಾಷೆಯಾಗಿ ಸ್ವೀಕರಿಸಿದರೆ ನಮ್ಮತನವನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ತದನಂತರದಲ್ಲಿ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ನಿತ್ಯೋತ್ಸವ ಹಾಗೂ ಬಾರಿಸು ಕನ್ನಡ ಡಿಂಡಿಮವ ಹಾಡುಗಳನ್ನು ಸಾಮೂಹಿಕವಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಡಿದರು.
ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ಪ್ರಕಾಶ್ ನಾಯ್ಕ, ಉಪಾಧ್ಯಕ್ಷೆ ಶ್ರೀಮತಿ ಯೋಗಿತ ನಾಯ್ಕ, ಕಾರ್ಯಕ್ರಮಕ್ಕೆ ಇಲಾಖೆಯಿಂದ ವೀಕ್ಷಕರಾಗಿ ಆಗಮಿಸಿದ ಬಿ ಆರ್ ಪಿ ಶ್ರೀ ಉಲ್ಲಾಸ್ ನಾಯ್ಕ, ಸಿಆರ್ಪಿ ಮಹೇಶ್ ನಾಯ್ಕ, ಹೆಗಡೆ ಸಿಆರ್ಪಿ ಶ್ರೀ ನರಹರಿ ಭಟ್, ಪಾಲಕ-ಪೋಷಕರು ಉಪಸ್ಥಿತರಿದ್ದರು.
ಮುಖ್ಯ ಅಧ್ಯಾಪಕರಾದ ಶ್ರೀಮತಿ ಮಂಗಲ ಹೆಬ್ಬಾರ್ ಸ್ವಾಗತಿಸಿದರು. ದೈಹಿಕ ಶಿಕ್ಷಕಿ ಶಾಮಲಾ ಪಟಗಾರ್, ಸಂಕಲ್ಪ ಪ್ರತಿಜ್ಞಾವಿಧಿ ಬೋಧಿಸಿದರು, ಶಿಕ್ಷಕ ನಾಗರಾಜ್ ಶೆಟ್ಟಿ ವಂದನಾರ್ಪಣೆ ಮಾಡಿದರು. ಸಹ ಶಿಕ್ಷಕಿಯರಾದ ರೇಣುಕಾ ನಾಯ್ಕ, ನಯನಾ ಪಟಗಾರ ಹಾಗೂ ಮುಖ್ಯ ಅಡುಗೆಯವರಾದ ಜಯಂತಿ ಭಂಡಾರಿ ಸಹಕರಿಸಿದರು