ಹೊನ್ನಾವರ : ಎ.ಐ.ಸಿ.ಸಿ. ಅಧ್ಯಕ್ಷೆ ಸೋನಿಯಾ ಗಾಂಧಿಯವರ ನಿರ್ದೇಶನದಂತೆ ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷ ಕಳೆದ ಈ ಸಂದರ್ಭದಲ್ಲಿ ದೇಶಾಧ್ಯಂತ ಅಮೃತಮಹೋತ್ಸವ ಆಚರಣೆಯ ಹಿನ್ನಲೆಯಲ್ಲಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಪ್ರತಿ ಗ್ರಾಮ ಪಂಚಾಯತ ಮಟ್ಟದಲ್ಲಿ “ಮಹಾತ್ಮಾಗಾಂಧಿ ಸ್ವರಾಜ್” ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರಂತೆ ಚಂದಾವರ ಪಂಚಾಯತ ವ್ಯಾಪ್ತಿಯ “ಮಹಾತ್ಮಾಗಾಂಧಿ ಸ್ವರಾಜ್” ಕಾರ್ಯಕ್ರಮದಲ್ಲಿ ಬಿ.ಜೆ.ಪಿ. ಪ್ರಮುಖ ಮುಖಂಡರು ಕಾಂಗ್ರೆಸ್ ಸೇರ್ಪಡೆಗೊಂಡರು.

ಚಂದಾವರ ವಿ.ಎಸ್.ಎಸ್. ಬ್ಯಾಂಕ್ ಅಧ್ಯಕ್ಷರು, ಗ್ರಾಮ ಪಂಚಾಯತ ಸದಸ್ಯರಾದ ಹನಮಂತ ನಾಯ್ಕ, ಕಡ್ನೀರು ಭಾಗದ ಗ್ರಾಮ ಪಂಚಾಯತ ಸದಸ್ಯರಾದ ವಿನಯಕುಮಾರ ನಾಯ್ಕ, ಹೊದ್ಕೆಶಿರೂರು ಭಾಗದ ಶಂಭು ಮಾದೇವ ನಾಯ್ಕ, ಶ್ರೀಧರ ಶಿವಪ್ಪ ನಾಯ್ಕ, ಕಡ್ಲೆ ಗ್ರಾಮ ಪಂಚಾಯತ ಮುಖಂಡರಾದ ಪ್ರವೀಣ ನಾಗೇಶ ನಾಯ್ಕ, ಸುರೇಶ ದಾಮೋದರ ನಾಯ್ಕ, ಗಣೇಶ ಆಚಾರಿ ಇನ್ನೂ ಮುಂತಾದವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿ, ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್. ತೆಂಗೇರಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಬಿ.ಜೆ.ಪಿ.ಯ ಎಲ್ಲಾ ಪ್ರಮುಖರಿಗೆ ಪಕ್ಷದ ಶಾಲು ಹಾಕಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಚಂದಾವರ ವಿ.ಎಸ್.ಎಸ್. ಬ್ಯಾಂಕ್ ಅಧ್ಯಕ್ಷ ಹನುಮಂತ ನಾಯ್ಕ ಮಾತನಾಡಿ ಮಾಜಿ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿ ತಮ್ಮ ಅಧಿಕಾರಾವಧಿಯಲ್ಲಿ ಸಾವಿರಾರು ಕೋಟಿ ಅನುಧಾನವನ್ನು ಕುಮಟಾ- ಹೊನ್ನಾವರ ವಿಧಾನಸಭಾ ಕ್ಷೇತ್ರಕ್ಕೆ ತಂದು ಕ್ಷೇತ್ರವನ್ನು ಅಭಿವೃದ್ಧಿಯ ಪಥಕ್ಕೆ ಕೊಂಡುಯ್ಯುವಲ್ಲಿ ಸಫಲರಾಗಿದ್ದರು ಎಂದು ಶಾರದಾ ಶೆಟ್ಟಿಯವರ ಕಾರ್ಯವನ್ನು ಶ್ಲಾಘಿಸಿದರು.

RELATED ARTICLES  ಕಾಂಗ್ರೆಸ್ ಸೇರಿದ ಯುವ ಪಡೆ: ಕುಮಟಾದಲ್ಲಿ ಹೆಚ್ಚುತ್ತಿದೆ ಕಾಂಗ್ರೆಸ್ ಬಲ.

ಅವರ ಅಧಿಕಾರಾವಧಿಯಲ್ಲಿ ನಾವು ಬಿ.ಜೆ.ಪಿ ಸದಸ್ಯರಾಗಿದ್ದರೂ ಕೂಡಾ ಅಭಿವೃದ್ಧಿ ವಿಷಯದಲ್ಲಿ ತಾರತಮ್ಯ ಮಾಡದೇ ಚಂದಾವರ ಭಾಗಕ್ಕೆ ಹೆಚ್ಚಿನ ಸಹಾಯ ಮಾಡಿದ್ದನ್ನು ಸ್ಮರಿಸಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿ, ಮಹಾತ್ಮಾಗಾಂಧಿ ಗ್ರಾಮ ಸ್ವರಾಜ್ ಬಗ್ಗೆ ಮತ್ತು ದೇಶಕ್ಕಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ, ತ್ಯಾಗ, ಬಲಿದಾನ ಮಾಡಿದ ಸ್ವಾಂತಂತ್ರ್ಯ ಯೋಧರ ಕುರಿತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಜನತೆಗೆ ತಿಳಿಹೇಳುವ ಕೆಲಸ ಮಾಡುವಂತೆ ವಿನಂತಿಸಿದರು.

RELATED ARTICLES  ಮಂಕಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ

ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್. ತೆಂಗೇರಿ ಪ್ರಾಸ್ತವಿಕವಾಗಿ ಮಾತನಾಡುತ್ತಾ, ಒಗ್ಗಟ್ಟಿನಲ್ಲಿ ಬಲವಿದೆ. ಹೊಸದಾಗಿ ಪಕ್ಷಕ್ಕೆ ಸೇರ್ಪಡೆಗೊಂಡವರು ಮತ್ತು ಹಳಬರು ಎನ್ನುವ ಬೇಧ ಭಾವವಿಲ್ಲದೇ ಎಲ್ಲರೂ ಒಗ್ಗೂಡಿ ಪಕ್ಷ ಕಟ್ಟೋಣ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಾಮೋದರ ನಾಯ್ಕ, ಕಾರ್ಯದರ್ಶಿ ಲಂಭೋದರ ನಾಯ್ಕ, ಚಂದಾವರ ಪಂಚಾಯತ ಮಾಜಿ ಅಧ್ಯಕ್ಷ ಚಂದ್ರು ನಾಯ್ಕ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಪುಷ್ಪಾ ನಾಯ್ಕ, ಹಿರಿಯ ಮುಖಂಡರಾದ ಗಣೇಶ ನಾಯ್ಕ, ಉರ್ಮಿಳಾ ಶೇಟ್, ಇಮಾಮ್ ಘನಿ, ಯಶವಂತ ನಾಯ್ಕ, ಮಹೇಶ ನಾಯ್ಕ, ಶಫಿ ಮುಲ್ಲಾ ಮುಂತಾದವರು ಉಪಸ್ಥಿತರಿದ್ದರು.