ಸರ್ಕಾರದ ನಿರ್ದೇಶನದಂತೆ ಇಂದು ರಾಜ್ಯಮಟ್ಟದಲ್ಲಿ ನಡೆದ ” ಕನ್ನಡ ಗೀತ ಗಾಯನ ” ಕಾರ್ಯಕ್ರಮವನ್ನು ಹೊಲನಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶಿಷ್ಟವಾಗಿ ಆಚರಿಸಲಾಯಿತು. ವೈವಿಧ್ಯಮಯ ಉಡುಗೆ ತೊಡುಗೆಗಳಲ್ಲಿ ಮಕ್ಕಳು ನಿಗದಿತ ಮೂರು ಗೀತೆಗಳನ್ನು ಪ್ರಸ್ತುತ ಪಡಿಸಿದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸಂಪೂರ್ಣ ಶಾಲೆಯನ್ನು ರಂಗು ರಂಗಿನ ಧ್ವಜಗಳಿಂದ ಅಲಂಕರಿಸಲಾಗಿತ್ತು. ಮಕ್ಕಳು ಹಾಗೂ ಶಿಕ್ಷಕರು ಕನ್ನಡ ಧ್ವಜದ ಬಣ್ಣಗಳ ಉಡುಗೆಯಲ್ಲಿ ಗಮನಸೆಳೆದರು.

RELATED ARTICLES  ಕಾರು ಬಡಿದು ಹಾರಿತು ಪಾದಾಚಾರಿ ಪ್ರಾಣ: ದಿನ ನಿತ್ಯದ ಕೆಲಸಕ್ಕೆ ತೆರಳಿದ್ದ ಗಂಗಾಧರ ಹೆಗಡೆ ಇನ್ನಿಲ್ಲ.


ಈ ಸಂದರ್ಭದಲ್ಲಿ ಮಾತನಾಡಿದ ಪ್ರಭಾರ ಮುಖ್ಯಾಧ್ಯಾಪಕರಾದ ಶ್ರೀ ರವೀಂದ್ರ ಭಟ್ಟ ಸೂರಿಯವರು ಕಾರ್ಯಕ್ರಮದ ಹಿನ್ನೆಲೆ,ಉದ್ದೇಶಗಳನ್ನು ವಿವರಿಸಿದರು. ಕನ್ನಡವೆನ್ನುವುದು ನಮ್ಮ ಪಾಲಿಗೆ ಬರಿಯ ಒಂದು ಭಾಷೆಯಲ್ಲ ಅದು ನಮ್ಮ ಕನಸು,ಕಸುವು, ಬದುಕು, ಭರವಸೆ ಎಲ್ಲವೂ ಹೌದು. ಕನ್ನಡ ಚಿನ್ನದ ತತ್ತಿಯನ್ನಿಡುವ ಕೋಳಿಯಲ್ಲದಿರಬಹುದು ಆದರೆ ಕನ್ನಡದ ಜೊತೆ ನಮಗೆ ಭಾವನಾತ್ಮಕ ಸಂಬಂಧವಿದೆ. ಅದನ್ನು ಉಳಿಸಿ ಬೆಳೆಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ . ಎಲ್ಲೇ ಇದ್ದರೂ ಹೇಗೇ ಇದ್ದರೂ ಕನ್ನಡಿಗರಾಗಿರೋಣ ಎಂದು ಅವರು ನುಡಿದರು.

RELATED ARTICLES  ಮಕ್ಕಳನ್ನು ಸಂಸ್ಕಾರವಂತರನ್ನಾಗಿಸುವುದು ಮಾತೆಯರ ಮಹತ್ವದ ಜವಾಬ್ದಾರಿ : ಬಸವೇಶ್ವರಿ ಮಾತಾ

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಹೊಲನಗದ್ದೆಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶ್ರೀ ಚಂದ್ರಹಾಸ ನಾಯ್ಕ , ಧರ್ಮಸ್ಥಳ ಸಂಘದ ಶ್ರೀಮತಿ ರಮ್ಯಾ ಶೇಟ್, ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕರಾದ ವೀಣಾ ನಾಯ್ಕ, ಮಂಗಲಾ ನಾಯ್ಕ, ಶ್ಯಾಮಲಾ ಎಮ್ ಪಟಗಾರ, ಶ್ಯಾಮಲಾ ಬಿ.ಪಟಗಾರ, ದೀಪಾ ನಾಯ್ಕ ಸಹಕರಿಸಿದರು.