ಶಿರಸಿ: ಹಾನಗಲ್ ಉಪಚುನಾವಣೆ ಪ್ರಯುಕ್ತ ವಿಶೇಷ ಗಸ್ತಿನಲ್ಲಿದ್ದ ಇಲ್ಲಿಯ ಅಬಕಾರಿ ಅಧಿಕಾರಿಗಳು, ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮದ್ಯಪತ್ತೆ ಮಾಡಿದ್ದಾರೆ. ತಾಲೂಕಿನಲ್ಲಿ ಅಬಕಾರಿ ಅಧಿಕಾರಿಗಳು, ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮೂರು ಲಕ್ಷ ಮೌಲ್ಯದ ಮದ್ಯವನ್ನು ಪತ್ತೆ ಮಾಡಿದ ಘಟನೆ ನಡೆದಿದೆ.
ಮಹೀಂದ್ರಾ ಪಿಕಪ್‌ನಲ್ಲಿ ಗೋವಾ ಮದ್ಯವನ್ನು ಸಾಗಿಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯನುಸಾರ ಶಿರಸಿ- ಕುಮಟಾ ರಸ್ತೆಯ ಹತ್ತರಗಿ ಕ್ರಾಸ್ ಬಳಿ ಇಂದು ವಾಹನವನ್ನು ತಡೆದು
ಪರಿಶೀಲಿಸಿದಾಗ ಅನಧಿಕೃತವಾಗಿ ಸಾಗಿಸುತ್ತಿದ್ದ ಗೋವಾ ರಾಜ್ಯದ 180 ಎಂಎಲ್‌ನ 48 ವಿಸ್ಕಿ ಬಾಟಲ್‌ಗಳು, 750 ಎಂಎಲ್‌ನ ಕೊಂಕಣ ಕಾಜು ಫೆನ್ನಿಯ 4 ಬಾಟಲ್‌ಗಳು, 2 ಲೀಟರ್ ರಾಯಲ್ ಸ್ಟಾಗ್‌ನ 4 ಬಾಟಲ್‌ಗಳು, 750 ಎಂಎಲ್‌ನ ಮಾಗ್ನಿಫಿಕೆಂಟ್ ವೈನಿನ 2 ಬಾಟಲ್‌ಗಳು, 750 ಎಂಎಲ್‌ನ ರಾಯಲ್ ಸ್ಟಾಗ್ ವಿಸ್ಕಿಯ 1 ಬಾಟಲ್ ಪತ್ತೆಯಾಗಿದೆ.
ಒಟ್ಟು 3 ಲಕ್ಷ ಮೌಲ್ಯದ ಸ್ವತ್ತು ಸಹಿತ ಮದ್ಯಸಾಗಿಸುತ್ತಿದ್ದ ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲ್ಲೂಕಿನ ಟಿಪ್ಪುನಗರದ ಇಬ್ರಾಹಿಂ ಎತ್ತಿನಹಳ್ಳಿ ಎಂಬಾತನನ್ನು ಬಂಧಿಸಲಾಗಿದೆ.
ಅಬಕಾರಿ ಉಪ ಅಧೀಕ್ಷಕ ಮಹೇಂದ್ರ ನಾಯ್ಕ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕಿ ಜ್ಯೋತಿಶ್ರೀ ನಾಯ್ಕ, ರಸ್ತೆಗಾವಲು ನೇತೃತ್ವ ವಹಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಉಪನಿರೀಕ್ಷಕ ಡಿ.ಎನ್.ಶಿರ್ಸಿಕರ್, ಸಿಬ್ಬಂದಿ ಕುಮಾರೇಶ್ವರ
ಅಂಗಡಿ, ಬಸವರಾಜ ಒಂಟಿ, ಗಂಗಾಧರ ಕಲ್ಲೇದ್, ವಾಹನ ಚಾಲಕ ಜಿ.ಎನ್.ಗಾಯಕ್ವಾಡ್ ಪಾಲ್ಗೊಂಡಿದ್ದರು.