ಶಿರಸಿ: ಮಹಿಳೆಯರ ಮೇಲಿನ ಅತ್ಯಾಚಾತ ಅನಾಚಾರ ಪ್ರಕರಣಗಳು ವರದಿಯಾಗುತ್ತಿರುವ ಬೆನ್ನಲ್ಲೇ, ಶಿರಸಿಯಲ್ಲಿ ಮಹಿಳೆಯ ಜೊತೆ ಅನುಚಿತ ವರ್ತನೆ ತೋರಿದ ಬಗ್ಗೆ ಪ್ರಕರಣ ದಾಖಲಾಗಿ, ಇದೀಗ ಪೊಲೀಸರು ಆರೋಪಿಯನ್ನೂ ಬಂಧಿಸಿರುವ ಘಟನೆ ವರದಿಯಾಗಿದೆ.
ಮಹಿಳೆಯೋರ್ವಳ ಜೊತೆ ಅನುಚಿತ ವರ್ತನೆ ತೋರಿದ ಆರೋಪಿಯನ್ನು ಹೊಸ ಮಾರುಕಟ್ಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಮಂಗಳವಾರ ಸಂಜೆ
7 ಘಂಟೆ ವೇಳೆಗೆ ಹನುಮಗಿರಿ ನಿವಾಸಿಯಾದ ಮಹಿಳೆ ವೈಯಕ್ತಿಕ ಕೆಲಸಕ್ಕಾಗಿ ಶಿರಸಿ-ಹುಬ್ಬಳ್ಳಿ ರಸ್ತೆಯಲ್ಲಿ ಹೋಗುತ್ತಿರುವಾಗ ಬೈಕ್ ನಲ್ಲಿ ಬಂದ ಯುವಕ ಆಕೆಯನ್ನ ಹಿಂಬಾಲಿಸಿದ್ದು ಸ್ಕೂಟಿ ಯನ್ನ ನಿಲ್ಲಿಸುವಂತೆ ತಿಳಿಸಿದ್ದಾನೆ. ಮಹಿಳೆ ನಿಲ್ಲಿಸದೇ ಮುಂದೆ ಸಾಗಿದಾಗ ಹತ್ತಿರ ಬಂದು ಮಹಿಳೆಯ ಸೊಂಟಕ್ಕೆ ಕೈ ಹಾಕಿ ಪರಾರಿಯಾಗಿದ್ದ ಎನ್ನಲಾಗಿದೆ.
ಈ ಬಗ್ಗೆ ಮಹಿಳೆ ಮಾಹಿತಿ ನೀಡಿದ್ದು, ಪ್ರಕರಣ
ದಾಖಲಿಸಿಕೊಂಡ ಪೊಲೀಸರು ನಗರದ ಕಸ್ತೂರಿಬಾನಗರದ ಸಫಾಗಲ್ಲಿಯ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾರುಕಟ್ಟೆ ಠಾಣೆ ಪಿ .ಎಸ್.ಐ ಭೀಮಾಶಂಕರ, ಸಿನ್ನೂರ ಸಂಗಣ್ಣ
ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು.