ಕುಮಟಾ: ತಾಲೂಕಿನ ಅಳಕೋಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕತಗಾಲದಲ್ಲಿ ಪೋಲಿಸ ಉಪ ಠಾಣೆ ಕಟ್ಟಡ ನಿರ್ಮಿಸಲು ಒತ್ತಾಯಿಸಿ ಮಾಜಿ ಜಿ.ಪಂ.ಸದಸ್ಯ ಗಜಾನನ ಪೈ ನೇತೃತ್ವದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು.
ಅಳಕೋಡ, ದಿವಗಿ ಮತ್ತು ಕಲಬ್ಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಒಟ್ಟು 26 ಗ್ರಾಮಗಳಿಂದ ಕೂಡಿದ ಅತ್ಯಂತ ಹಿಂದುಳಿದ ವರ್ಗಗಳೇ ವಾಸಿಸುವ , ಗುಡ್ಡಗಾಡು ಪ್ರದೇಶ ಇದಾಗಿದೆ. ಈ ಗ್ರಾಮಗಳ ಕೇಂದ್ರಸ್ಥಾನವಾದ ಕತಗಾಲದ ಸರ್ವೇ ನಂ.69ರಲ್ಲಿ , 10 ಗುಂಟೆ ಜಾಗದಲ್ಲಿ ಬಿಟೀಷರ ಕಾಲದಲ್ಲಿ ಕಟ್ಟಲ್ಪಟ್ಟ ಪೋಲಿಸ ಠಾಣೆ ಸಂಪೂರ್ಣವಾಗಿ ಬಿದ್ದು ಹೋಗಿದೆ. . ಸದ್ಯ ಇರುವ ಉಪಠಾಣೆಗೆ ಸರಿಯಾದ ಕಟ್ಟಡ ಇಲ್ಲ ಹಾಗೂ ಪೋಲಿಸ ಸಿಬ್ಬಂದಿಗಳಿಗೆ ವಸತಿ ಗೃಹಗಳು ಇಲ್ಲ.
ಹಾಗಾಗಿ ಲಭ್ಯವಿರುವ 10 ಗುಂಟೆ ಜಾಗದಲ್ಲಿ ಪೋಲಿಸ ಉಪಠಾಣೆ ಕಟ್ಟಡ ಕಟ್ಟಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕಾಗಿ ಮನವಿಯಲ್ಲಿ ತಿಳಿಸಲಾಯಿತು. ಕಾರ್ತಿಕ್ ಭಟ್ಟ, ಗಣಪತಿ ನಾಯ್ಕ ಮುಂತಾದವರಿದ್ದರು.