ಕುಮಟಾ: ಕಲಾಸಿರಿ ವೇದಿಕೆಯ ಆಶ್ರಯದಲ್ಲಿ ನ.೧೪ ರಂದು ಪಟ್ಟಣದ ಪುರಭವನದಲ್ಲಿ ರಾಜ್ಯ ಮಟ್ಟದ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಲಾಸಿರಿ ವೇದಿಕೆಯ ಪ್ರಮುಖರಾದ ಪ್ರೋ.ಎಂ.ಜಿ.ಭಟ್ಟ ಹೇಳಿದರು.
ಅವರು ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಮನುಷ್ಯ ಸಂಘ ಜೀವಿಯಾಗಿದ್ದು, ಏಕಾಂಗಿಯಾಗಿ ಬದುಕಲು ಸಾಧ್ಯವಿಲ್ಲ. ಆ ದಿಸೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸ್ಸಿಗೆ ಆನಂದ ನೀಡುತ್ತವೆ. ಕಳೆದ ೨ ವರ್ಷಗಳಿಂದ ಕೊರೊನಾ ಸೋಂಕಿನಿಂದ ಎಲ್ಲ ಕಾರ್ಯಕ್ರಮ ಸ್ಥಗಿತಗೊಂಡಿದ್ದವು. ಪುನಃ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಒತ್ತು ನೀಡುವ ದೃಷ್ಟಿಯಿಂದ ಕಲಾಸಿರಿ ವೇದಿಕೆಯಿಂದ ಸಾಂಸ್ಕೃತಿಕ ಹಬ್ಬ ಆಯೋಜಿಸಲಾಗಿದೆ ಎಂದರು.
ಭಾಗವಹಿಸಿದ ಪ್ರತಿ ಸ್ಪರ್ಧಾರ್ಥಿಗಳಿಗೂ ರಾಜ್ಯಮಟ್ಟದ ಪ್ರಮಾಣಪತ್ರ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಜಯಾ ಶೇಟ್ ೭೪೮೩೧೯೩೨೭೧ ಹಾಗೂ ಅನುಷಾ ೮೩೧೦೫೪೩೬೩೧ ಇವರನ್ನು ಸಂಪರ್ಕಿಸಬೇಕು. ಬೆಳಿಗ್ಗೆ ೯.೩೦ ರಾತ್ರಿ ೯ ಘಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ. ಆಗಮಿಸಿದ ಎಲ್ಲರಿಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಕಲಾಸಿರಿ ವೇದಿಕೆಯ ಅಧ್ಯಕ್ಷೆ ಜಯಾ ಶೇಟ್ ಮಾತನಾಡಿ, ಮಾಡೆಲಿಂಗ್ ಕಾಂಪಿಟೇಶನ್, ಆದರ್ಶ ದಂಪತಿಗಳು, ಡಾನ್ಸ್ ಕುಮಟಾ ಡ್ಯಾನ್ಸ್ ಸ್ಪರ್ಧೆಗಳು ನಡೆಯಲಿದೆ. ಈ ಮೂರು ಸ್ಪರ್ಧೆಗಳಿಗೆ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಬೆಳಿಗ್ಗೆ ೯.೨೦ ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಸಂಜೆ ೬ ಘಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಶಾಸಕ ದಿನಕರ ಶೆಟ್ಟಿ ಬಹುಮಾನ ವಿತರಣೆ ಮಾಡಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಲಾಸಿರಿ ವೇದಿಕೆಯ ಉಪಾಧ್ಯಕ್ಷೆ ಅನುಷಾ, ಪುರಸಭಾ ಅಧ್ಯಕ್ಷೆ ಹಾಗೂ ಸಂಘದ ಸದಸ್ಯೆ ಮೋಹಿನಿ ಗೌಡ, ಶೈಲಾ ಗೌಡ, ಪ್ರಮುಖರಾದ ದೀಪಾ ಹಿಣಿ, ಮಾದೇವಿ ಮುಕ್ರಿ ಸೇರಿದಂತೆ ಮತ್ತಿತರರು ಇದ್ದರು.