ಕುಮಟಾ : ನಟ ಪುನೀತ್ ರಾಜ ಕುಮಾರ್ ರವರ ಅಕಾಲಿಕ ಮರಣದಿಂದ ಇಂದು ಕನ್ನಡ ಚಿತ್ರರಂಗಕ್ಕೆ ಹಾಗೂ ಕರ್ನಾಟಕಕ್ಕೆ ತುಂಬಲಾರದ ನಷ್ಟವಾಗಿದೆ ಉತ್ತಮ ವ್ಯಕ್ತಿತ್ವದ ನಾಯಕ ನಟನನ್ನು ಕಳೆದುಕೊಂಡ ಜನತೆ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಶೃದ್ಧಾಂಜಲಿ ಸಲ್ಲಿಸಿದ್ದಾರೆ.
ಹಳದೀಪುರದಲ್ಲಿ ಶೃದ್ಧಾಂಜಲಿ
ಸಮಸ್ತ ಹಳದಿಪುರದ ನಾಗರಿಕರು ಪುನೀತ್ ರಾಜ ಕುಮಾರ ರವರ ಭಾವಚಿತ್ರ ಹಿಡಿದು ಅಗ್ರಹಾರ ದಿಂದ ಹಳದಿಪುರದ ವರೆಗೆ ಮೇಣದ ಬತ್ತಿ ಹಿಡಿದು ಮೌನ ಮೆರವಣಿಗೆ ನಡೆಸಿದರು. ಅಗಲಿದ ಮೇರು ನಟನ ಆತ್ಮಕ್ಕೆ ಶಾಂತಿ ಸಿಗಲೆಂದು ಪುನೀತ್ ರಾಜಕುಮಾರ್ ರವರ ಹಳದಿಪುರದ ಅಭಿಮಾನಿಗಳು 1 ನಿಮಿಷದ ಮೌನ ಆಚರಿಸುವುದರ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಕುಮಟಾದಲ್ಲಿಯೂ ಶೃದ್ಧಾಂಜಲಿ.
ಕುಮಟಾ ಪಟ್ಟಣದ ಉಪ್ಪಾರಕೇರಿಯಲ್ಲಿ ಕನ್ನಡದ ಖ್ಯಾತ ನಟ ಪವರ್ ಸ್ಟಾರ್ ಪುನೀತರಾಜಕುಮಾರ ಅವರಿಗೆ ಅಭಿಮಾನ ಬಳಗದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕನ್ನಡದ ಖ್ಯಾತ ನಟ ಪುನೀತ್ ಕುಮಟಾಕ್ಕೆ ಕೆಲವು ದಿನಗಳ ಹಿಂದೆ ಆಗಮಿಸಿದ್ದರು. ಅವರ ಅಭಿಮಾನಿಗಳು ಪಟ್ಟಣದ ಉಪ್ಪಾರಕೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ, ಬಾರದ ಲೋಕಕ್ಕೆ ಪಯಣಿಸಿದ ನಟನೆಯ ಕುರಿತು ಅಭಿಮಾನಿಗಳು ಹಂಚಿಕೊಂಡರು. ಚಿಕ್ಕ ಮಕ್ಕಳು ಸೇರಿದಂತೆ ಅವರ ಅಪಾರ ಅಭಿಮಾನಿಗಳು ಮೊಂಬತ್ತಿ ಬೆಳಗಿ ಅಗಲಿದ ನಟನಿಗೆ ಅಂತಿಮ ವಿಧಾನ ಅರ್ಪಿಸಿದರು. ಪಾಂಡು ಉಪ್ಪಾರ, ಶಂಕರ ಉಪ್ಪಾರ, ರಾಜು ಉಪ್ಪಾರ, ಗಣಪತಿ ಉಪ್ಪಾರ, ಮಹೇಶ ಉಪ್ಪಾರ, ದತ್ತಾ ಉಪ್ಪಾರ, ಈಶ್ವರ ಉಪ್ಪಾರ, ಸಂದೀಪ್ ಉಪ್ಪಾರ್.ದಯಾನಂದ ಉಪ್ಪಾರ, ರಾಜೀವ ಉಪ್ಪಾರ ಓಂಕಾರ್ ಉಪ್ಪಾರ್ ಇದ್ದರು.
ಹೊನ್ನಾವರದಲ್ಲಿಯೂ ಶೃದ್ಧಾಂಜಲಿ.
ನಿನ್ನೆ ರಾತ್ರಿ ಹೊನ್ನಾವರದ ಶರಾವತಿ ಸರ್ಕಲ್ ಬಳಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಮೇಣದ ಬತ್ತಿ ಹಚ್ಚಿ ಶ್ರದ್ದಾಂಜಲಿ ಸಲ್ಲಿಸಲಾಯಿತು.