ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ  ಶಿವಪ್ರಕಾಶ್ ದೇವರಾಜು  ಅವರನ್ನು ಗದಗ ಜಿಲ್ಲೆಗೆ ವರ್ಗಾಯಿಸಲಾಗಿದ್ದು, ಉತ್ತರಕನ್ನಡಕ್ಕೆ ನೂತನ ಎಸ್ಪಿಯಾಗಿ ಮಹಿಳಾ ಅಧಿಕಾರಿ ಸುಮನ್ ಡಿ ಪೆನ್ನೇಕರ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.         

ಪೊಲೀಸ್ ಇಲಾಖೆಯಲ್ಲಿ ವಿವಿಧ ಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವರ್ಗಾವಣೆ ನಡೆಯುತ್ತಿದ್ದು ಅದರ ಮುಂದುವರಿದ ಭಾಗವಾಗಿ ಹಿರಿಯ ಅಧಿಕಾರಿಗಳ ವರ್ಗಾವಣೆಯೂ ಆರಂಭಗೊಂಡಿದೆ.

RELATED ARTICLES  ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ದಿನಕರರಿಗೆ ಸ್ವ ಪಕ್ಷದ ನಾಯಕರುಗಳ ಬೆಂಬಲ :ಬಿಜೆಪಿಗೆ ಭೀಮ ಬಲ!

ಕಳೆದ  ಜುಲೈ ವೇಳೆಯೇ ಎಸ್ಪಿ ಶಿವಪ್ರಕಾಶ್ ದೇವರಾಜು ವರ್ಗಾವಣೆಗೊಂಡು,ಅವರ ಸ್ಥಾನದಲ್ಲಿ ವರ್ತಿಕಾ ಕಟಿಯಾರ್ ಎನ್ನುವ ಮಹಿಳಾ ಅಧಿಕಾರಿ ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನಲಾಗಿತ್ತು.ನಂತರ ಆ ವರ್ಗಾವಣೆ ಆದೇಶ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಸರ್ಕಾರದ ನೂತನ ಆದೇಶದಂತೆ ರಾಜ್ಯದ ವಿವಿಧ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ.

RELATED ARTICLES  ಪ್ರೀತಿಗೆ ಕಾಣಿಕೆಯಂತೆ ನಾಗರಾಜ ನಾಯಕ ತೊರ್ಕೆಯವರಿಗೆ ಸುಗ್ಗಿಯ ತುರಾಯಿರಿಸಿ ಆನಂದಿಸಿದ ಹಾಲಕ್ಕಿಗರು.

ಹೊಸ ವರ್ಗಾವಣೆ ಪಟ್ಟಿಯಲ್ಲಿ ಶಿವಪ್ರಕಾಶ್ ದೇವರಾಜ ಜು ಅವರಿಗೆ ಗದಗ ಜಿಲ್ಲೆಗೆ ವರ್ಗಾಯಿಸಲಾಗಿದೆ. ಗದಗ ಜಿಲ್ಲೆ ಎಸ್ಪಿಯಾಗಿದ್ದ ಯತೀಶ ಅವರನ್ನು ಮಂಡ್ಯ ಜಿಲ್ಲೆಗೂ, ಮಂಡ್ಯದ ಎಸ್ಪಿ ಆಗಿದ್ದ ಸುಮನ ಡಿ ಪೆನ್ನೇಕರ ಅವರನ್ನು ಉತ್ತರ ಕನ್ನಡ ಜಿಲ್ಲೆಗೆ ವರ್ಗಾಯಿಸಲಾಗಿದೆ.