ಕುಮಟಾ; ಅಚವೆ ಗ್ರಾಮದ ಬೆರೋಳ್ಳಿಯ ಸಂಗೀತ ಕಲಾವಿದ ರವಿ ಮುಕ್ರಿ ರವರು ಟ್ರೋಲ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಗೀತ ಪ್ರೇಮದಿಂದ ಜನಪ್ರೀಯಗಳಿಸಿದ್ದಾನೆ. ತಡಬಡಿಸಿ ಚಿತ್ರಸಂಗೀತ ಹಾಡುವ ರವಿಯ ಮುಗ್ದತೆ ,ಹಾಗೂ ಅವರಲ್ಲಿರುವ ಸಂಗೀತದಾಸಕ್ತಿ ಮನಗೊಂಡು ಕುಮಟಾದ ಅಶೋಕ ಪಾಲೇಕರ ರವರು ತಡಬಡಿಸುವಿಕೆ ತಿದ್ದಲು ಸಂಗೀತ ಪೂರಕ ತರಬೇತಿಯನ್ನು ಉಚಿತವಾಗಿ ನೀಡುವುದಾಗಿ ಆಹ್ವಾನಿಸಿದ್ದರು.
ನೂರಾರು ಅಭಿಮಾನಿಗಳೊನ್ನೊಳಗೊಂಡ ರವಿ ಮುಕ್ರಿ ರವರು ‘೬೬ ನೇ ಕನ್ನಡ ರಾಜ್ಯೋತ್ಸವ’ ಅಂಗವಾಗಿ “ಎದ್ದೇಳು ಕನ್ನಡಿಗ” ಎಂಬ ಶಿರ್ಶಿಕೆಯ ಹಾಡು ಹಾಡಿದ್ದಾನೆ. ಈ ಹಾಡಿನ ಸಾಹಿತ್ಯ ಮತ್ತು ಸಂಗೀತ ಅಶೋಕ ಪಾಲೇಕರ ನೀಡಿದ್ದಾರೆ.
ರವಿ ರವರ ಹಾಡುವ ಶೈಲಿ ಮತ್ತು ಮುಗ್ಧತೆ ಹಾಗೂ ಧ್ವನಿ ಯಥಾವತ್ತಾಗಿ ಇಟ್ಟಿದ್ದು ಕುಮಟಾದ ಸು- ಮೇಘಾ ರೆಕಾರ್ಡಿಂಗ ಸ್ಟುಡಿಯೋ ದಲ್ಲಿ ಧ್ವನಿಮುದ್ರಣಗೊಂಡಿದ್ದು, ನವೆಂಬರ ೧ ರಂದು ‘ ಸ್ವರಾತ್ಮಿಕಾ ಕುಮಟಾ’ ಯುಟ್ಯೂಬ್ ನಲ್ಲಿ ಸಂಜೆ ೭ ಕ್ಕೆ ಬಿಡುಗಡೆಯಾಗಲಿದೆ.