ಕಾರವಾರ: ನಗರದ ರವಿಂದ್ರನಾಥ ಟ್ಯಾಗೋರ್ ಕಡಲ ತೀರದಲ್ಲಿ ಜಿಲ್ಲೆಯ ಎಲ್ಲಾ ಲೈಫ್ ಗಾರ್ಡ್ ಸಿಬ್ಬಂದಿಯವರಿಗೆ ಹಮ್ಮಿಕೊಳ್ಳಲಾಗಿರುವ ಜೀವ ರಕ್ಷಕ ತರಬೇತಿ ಕಾರ್ಯಗಾರ ಯಶಸ್ವಿಯಾಗಿ ನಡೆಯಿತು.
ಹೊಸ ಹೊಸ ತಾಂತ್ರಿಕತೆಗಳನ್ನು ಬಳಸಿಕೊಂಡು ಕಡಲ ತೀರಗಳಲ್ಲಿ ಉಂಟಾಗುವ ಪ್ರವಾಸಿಗರ ಜೀವ ಹಾನಿಯನ್ನು ತಡೆಯುವ ಕಾರ್ಯವಾಗಬೇಕೆಂದು ಜಿಲ್ಲಾಧಿಕಾರಿ ಮುಲೈಮುಗಿಲನ್ ಹೇಳಿದರು. ಭೇಟಿ ನೀಡಿ ವಿಕ್ಷಣೆ ಮಾಡಿದ ಬಳಿಕ ಜೀವರಕ್ಷಕ ಸಿಬ್ಬಂದಿಗಳೊoದಿಗೆ ಮಾತನಾಡಿದ ಅವರು ಇಲ್ಲಿ ತರಬೇತಿ ನೀಡುತ್ತಿರುವ ಮುಖ್ಯ ಉದ್ದೇಶ ಇನ್ನೂ ಹೆಚ್ಚಿನ ಕೌಶಲ್ಯವನ್ನು ಪಡೆದುಕೊಳ್ಳಬೇಕು.
ಈ ತರಬೇತಿಯ ಸದುಪಯೋಗವನ್ನು ಎಲ್ಲಾ ಲೈಫ್ ಗಾರ್ಡ್ಗಳು ಪಡೆದುಕೊಳ್ಳಬೇಕು . ಜೀವರಕ್ಷಕ ಸಿಬ್ಬಂದಿ ತಮಗೆ ನೀಡುತ್ತಿರುವ ಗೌರವಧನ ಹೆಚ್ಚಿಸಬೇಕೆಂಬ ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಮತ್ತೆ ಚಿಗುರೊಡೆಯುತ್ತಿದ್ದು, ಆದಾಯ ಹೆಚ್ಚಳವಾದಂತೆ ಗೌರವಧನ ಹೆಚ್ಚಿಸುವ ಕುರಿತು ಚಿಂತಿಸಲಾಗುವುದು. ಆಧುನಿಕ ಜೀವರಕ್ಷಕ ಪರಿಕರಗಳನ್ನು ಒದಗಿಸುವದರೊಂದಿಗೆ ಜಿಲ್ಲಾಡಳಿತ ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ ಎಂದರು.