ಹೊನ್ನಾವರ: ಪರಮಪೂಜ್ಯ ಜಗದ್ಗುರು ಭೈರವೈಕ್ಯ ಪಧ್ಮಭೂಷಣ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಧಿವ್ಯಾನುಗ್ರಹದೊಂದಿಗೆ, ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನಮಠದ ಫೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ದುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಕೃಪಾಶೀರ್ವಾದಗಳೊಂದಿಗೆ, ಶ್ರೀಮಠದ ಪ್ರಧಾನಕಾರ್ಯದರ್ಶಿಗಳು ಮತ್ತು ಉತ್ತರ ಕನ್ನಡ ಹಾಗೂ ಶಿವಮೊಗ್ಗಾ ಜಿಲ್ಲಾ ಶಾಖಾ ಪೂಜ್ಯರಾದ ಸದ್ಗುರು ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಆಶಿರ್ವಾದಪೂರ್ಣ ಮಾರ್ಗದರ್ಶನದಲ್ಲಿ ಗ್ರಾಮ ಒಕ್ಕಲು ಸಮಿತಿ ಹಾಗೂ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಮತ್ತು ಜಿಲ್ಲಾ ಅಂದತ್ವ ನಿವಾರಣಾ ಘಟಕ ಉ.ಕ. ಇವರ ಸಹಭಾಗಿತ್ವದಲ್ಲಿ ನಡೆಸಿದ ಉಚಿತ ನೇತ್ರ ತಪಾಸಣ ಶಿಬಿರ ಅತ್ಯಂತ ಯಶಸ್ವಿಯಾಗಿ ನೆರವೇರಿತು.

RELATED ARTICLES  ಹಸುವನ್ನು ಕಡಿಯುತ್ತಿರುವಾಗಲೇ ಪೊಲೀಸ್ ದಾಳಿ

ಶಿಬಿರದಲ್ಲಿ ಭಾಗವಹಿಸಿದ ಒಟ್ಟೂ 375 ಜನರಿಗೆ ಕಸ್ತೂರ್ಬಾ ಆಸ್ಪತ್ರೆಯ ನೇತ್ರ ತಜ್ಞರಾದ ಕ್ಷಮಾ ರೈ ರವರ ನೇತ್ರತ್ವದ 18 ವೈಧ್ಯರ ತಂಡ ತಪಾಸಣೆ ನಡೆಸಿ, ಅದರಲ್ಲಿ 61 ಜನರ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಒಳಪಡವವರು ಮತ್ತು ಉಳಿದವರಿಗೆ ಕನ್ನಡಕ ಮತ್ತು ಔಷದಿಯನ್ನು ಬಳಸಲು ಸೂಚಿಸಿದರು.

ಶಿಬಿರವನ್ನು ಆಯೋಜಿಸಲು ಮೂಲ ಪ್ರೇರಣೆ ನೀಡಿರುವ ಜಿಲ್ಲೆಯ ಹಿರಿಯ ಪತ್ರಕರ್ತರು, ಉದಯವಾಣಿ ವರದಿಗಾರರಾದ ಶ್ರೀ ಜಿ. ಯು. ಭಟ್ಟ ಸರ್ ರವರು ಕಾರ್ಯಕ್ರಮ ಉದ್ಘಾಟಿಸಿದರು. ಹೊನ್ನಾವರ ಸರ್ಕಾರಿ ಆಸ್ಪತ್ರೆಯ ವೈಧ್ಯಾಧಿಕಾರಿಗಳಾದ ಶ್ರೀ ರಾಜೇಶ ಕಿಣಿಯವರು ಮತ್ತು ಡಾ. ರಮೇಶ ಗೌಡರವರು, ಸಮಾಜದ ಮುಖಂಡರಾದ ಶ್ರೀ ಕೃಷ್ಣ ಜೆ. ಗೌಡ, ಮಾವಿನಕುರ್ವಾ, ಶ್ರೀ ಗಣಪಯ್ಯ ಕೆ. ಗೌಡ, ಮುಗಳಿ, ಶ್ರೀ ಹರೀಶ ಗೌಡ, ಕರವಳ್ಳಿ, ಸಂಘದ ಅಧ್ಯಕ್ಷರಾದ ಶ್ರೀ ತಿಮ್ಮಪ್ಪ ಜಿ. ಗೌಡ, ಉಪಾಧ್ಯಕ್ಷರಾದ ಶ್ರೀ ಮಾಬ್ಲ ಜೆ. ಗೌಡ ಮತ್ತು ಸಂಘದ ನಿರ್ದೇಶಕರುಗಳು ಮತ್ತು ಕಸ್ತೂರ್ಬಾ ಆಸ್ಪತ್ರೆಯ ಸಂಯೋಜನಾಧಿಕಾರಿ ಶ್ರೀ ರಾಜೇಂದ್ರ ನಾಯ್ಕರವರು ವೇದಿಯೆಯಲ್ಲಿ ಉಪಸ್ಥಿರಿದ್ದರು.

RELATED ARTICLES  ಸಾಣಕಟ್ಟಾ ಹೈಸ್ಕೂಲಿನಲ್ಲಿ ವಿಜ್ಞಾನ ಮತ್ತು ಗಣೀತ ವಸ್ತು ಪ್ರದರ್ಶನ