ಕುಮಟಾ : ತಾಲೂಕಿನ ಧಾರೇಶ್ವರದ ಖಾಸಗಿ ರೆಸಾರ್ಟ ಒಂದರಲ್ಲಿ ಲೈನ್ಸ್ ಜಿಲ್ಲಾ 317 ಬಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ 2020-2021 ನೇ ಸಾಲಿನಲ್ಲಿ ನಡೆಸಿದ ಅತ್ಯುತ್ತಮ ಸೇವಾ ಚಟುವಟಿಕೆಗಾಗಿ, ಕುಮಟಾ ಲೈನ್ಸ್ ಕ್ಲಬ್ ಗೆ ಒಟ್ಟು 20 ಕ್ಕೂ ಹೆಚ್ಚು ಪ್ರಶಸ್ತಿಗಳು ಕೊಡಲ್ಪಟ್ಟವು.
RELATED ARTICLES ಮೂರೂರಿನ ಪ್ರಗತಿ ವಿದ್ಯಾಲಯದ ಆಂಗ್ಲ ಮಾಧ್ಯಮದ ಬಾಲಕಿಯರು ಥ್ರೋಬಾಲ್ ನಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆ
ಅತ್ಯುತ್ತಮ ಸೇವಾ ಚಟುವಟಿಕೆ ನಡೆಸಿದ್ದಕ್ಕಾಗಿ, ಕ್ಲಬ್ ನ ಅಧ್ಯಕ್ಷೆ ಲೈ ವಿನಯಾ ಹೆಗಡೆಯವರಿಗೆ “ಬೆಸ್ಟ್ ಪ್ರೆಸಿಡೆಂಟ್” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಡಾ.ಎಸ್.ಎಸ್.ಹೆಗಡೆಯವರಿಗೆ ಬೆಸ್ಟ್ ಸೆಕ್ರೆಟರಿ ಪ್ರಶಸ್ತಿ ನೀಡಲಾಯಿತು. ಕುಮಟಾ ಲೈನ್ಸ್ ಕ್ಲಬ್‌ಗೆ ಅತ್ಯುತ್ತಮ ಸೇವಾ ಪುರಸ್ಕಾರವೂ ವಿಶೇಷವಾಗಿ ಕೊಡಲ್ಪಟ್ಟಿತು.
ಲೈನ್ ವಿನಯಾ ಹೆಗಡೆಯವರಿಗೆ ಅಂತರ್ರಾಷ್ಟ್ರೀಯ ಲೈನ್ ಅಧ್ಯಕ್ಷರ ವಿಶೇಷ ಮೆಚ್ಚಿಗೆಯ ಪ್ರಶಸ್ತಿ ಪತ್ರವನ್ನು ಜಿಲ್ಲಾ ಪ್ರಾಂತಪಾಲ ಪಿ.ಎಂ.ಜೆ ಎಫ್ ಡಾ. ಗಿರೀಶ್ ಕುಚಿನಾಡ್ ಅವರು ಇದೇ ಸಂದರ್ಭದಲ್ಲಿ ನೀಡುವ ಮೂಲಕ ಗೌರವಿಸಿದರು.