ಭಟ್ಕಳ : ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ಮಾದರಿಯ ವಸ್ತು ಪತ್ತೆ ಬೆನ್ನಲ್ಲೇ ಭಟ್ಕಳ ತಾಲೂಕಿನ ವಿವಿಧೆಡೆ ಬಾಂಬ್ ನಿಷ್ಕ್ರಿಯ ದಳ ತಪಾಸಣಾ ಕಾರ್ಯ ರವಿವಾರವೂ ಮುಂದುವರಿಸಿದ್ದಾರೆ ಭಟ್ಕಳ ತಾಲೂಕಿನ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಗುಳ್ಳಿಬಳಿಯ
ಸುರಂಗ ಮಾರ್ಗ, ಮಾವಿನಕುರ್ವೆ ಬಂದರ್ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿತು. ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳಾದ ಅನಿಲ್ ನಾಯ್ಕ, ಜಗನ್ನಾಥ ನಾಯ್ಕ, ಪ್ರದೀಪ
ನಾಯ್ಕ, ನಿತ್ಯಾನಂದ ಗೌಡ, ಗಣೇಶ ನಾಯ್ಕ, ಶೇಕು ಪೂಜಾರಿ, ಭಟ್ಕಳ ಶಹರ ಠಾಣಾ ಪೊಲೀಸ್ ಸಿಬ್ಬಂದಿ ರಾಜೇಶ ನಾಯ್ಕ ಬಾಂಬ್ ಪತ್ತೆ ಕಾರ್ಯಾಚರಣೆಯಲ್ಲಿದ್ದರು.
ಪೊಲೀಸ್ ಇಲಾಖೆ ಜನ ನಿಬಿಡ ಪ್ರದೇಶಗಳಲ್ಲಿ ಬಾಂಬ್ ಸ್ಕ್ವಾಡ್ ನಿಂದ ಪರಿಶೀಲನೆ ನಡೆಸುತ್ತಿದೆ. ಹಲವು ಭಾಗದಲ್ಲಿ ರಸ್ತೆಯಲ್ಲಿ ನಿಂತು ವಾಹನಗಳನ್ನು ಸಹ ತಪಾಸಣೆ ಮಾಡಲಾಗುತ್ತಿದೆ.
ಕಳೆದ ಎರಡು ದಿನದಿಂದ ಕೈಗಾ ,ಕದ್ರಾ,ಕಾರವಾರದ ಕದಂಬ ನೌಕಾನೆಲೆ ,ಕುಮಟಾದ ರೈಲ್ವೆ, ಬಸ್ ನಿಲ್ದಾಣ ,ಮಹಾಬಲೇಶ್ವರ ದೇವಸ್ಥಾನ ಸೇರಿದಂತೆ ಭಟ್ಕಳದ ಹಲವು ಭಾಗದಲ್ಲಿ ತಪಾಸಣೆ ನಡೆಸಿದೆ.
ಜಿಲ್ಲೆಯಲ್ಲಿ ಭಟ್ಕಳ ಉಗ್ರಗಾವಾದಿಗಳ ಹೆಸರು ತಗಲಿಕೊಂಡಿದೆ. ಜೊತೆಗೆ ಕೆಲವು ಸಂಘಟನೆಗಳು ದೇಶದ್ರೋಹ ಚಟುವಟಿಕೆಯಲ್ಲಿ ಭಾಗಿಯಾಗಿದ್ದು ಈ ಸಂಬಂಧ ಈಗಾಗಲೇ ಕೆಲವು ಜನರನ್ನು ಜಿಲ್ಲೆಯಲ್ಲಿ ಬಂಧಿಸಿಲಾಗಿದೆ. ಇನ್ನು ಶಿರಸಿಯಲ್ಲೂ ಸಹ ಕೆಲವು ವ್ಯಕ್ತಿಗಳ ಹೆಸರಿನ ಸಿಮ್ ಗಳು ಉಗ್ರವಾದಿಗಳು ಬಳಸಿದ ಹಿನ್ನಲೆಯಲ್ಲಿ ಬಂದಿಸಿ ತನಿಖೆ ಕೈಗೊಳ್ಳಲಾಗಿದೆ. ಹೀಗಾಗಿ ಕುಮಟಾದಲ್ಲಿ ಸಿಕ್ಕ ನಕಲಿ ಬಾಂಬ್ ಹಲವು ಸಂಶಯಗಳನ್ನು ತಂದೊಡ್ಡಿದೆ.
ಸದ್ಯ ಕುಮಟಾ ದಲ್ಲಿ ಸಿಕ್ಕ ಈ ಬಾಂಬ್ ನಕಲಿ ಎಂದಾಗಿದ್ದರೂ ಇದನ್ನು ಏಕೆ ತಯಾರಿಸಿದರು? ಇದರ ಉದ್ದೇಶ ಏನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.