ಶಕ್ತಿ ದೇವಾಲಯಗಳನ್ನು ಹೆಚ್ಚಾಗಿ ಹಿಂದೂ ಧರ್ಮದಲ್ಲಿ ಆರಾಧನೆ ಮಾಡುತ್ತಾರೆ. ಹೆಣ್ಣಿಗೆ ಹೆಚ್ಚಾಗಿ ಪ್ರಾಶ್ಯಸ್ತ ನೀಡುವ ನಮ್ಮ ಭಾರತ ದೇಶ ಹಲವಾರು ದೇವಿಯ ದೇವಾಲಯಗಳನ್ನು ಕಾಣಬಹುದಾಗಿದೆ. ನಮಗೆ ಮಹಾಶಿವನ ಹಾಗು ಪಾರ್ವತಿ ಮಾತೆಯ ಹಲವಾರು ಸುಮಧುರವಾದ ಬಾಂಧವ್ಯ, ಪ್ರೀತಿಯ ಬಗ್ಗೆ ತಿಳಿದಿದೆ. ಅವರ ದೇವಾಲಯಗಳು ದೇಶದಲ್ಲಿಯೇ ಅಲ್ಲದೇ ಪ್ರಪಂಚದಲ್ಲಿಯೂ ಕಾಣಬಹುದಾಗಿದೆ.

ಪಾರ್ವತಿ ಮಾತೆಯ ಹಲವಾರು ಅವತಾರಗಳೇ ವಿವಿಧ ಹೆಸರಿನ ವಿಭಿನ್ನ ದೇವಾಲಯಗಳಾಗಿ ಮಾರ್ಪಾಟಾಗಿದೆ. ಒಂದೊಂದು ದೇವಾಲಯವು ಅದರದೇ ಆದ ಮಹತ್ವವನ್ನು ಹೊಂದಿದೆ. ಆ ತಾಯಿಯು ದುರ್ಗಿಯಾಗಿ, ಪರಾಶಕ್ತಿಯಾಗಿ, ಗಾಯತ್ರಿಯಾಗಿ, ಶಾಂತ ಪ್ರಿಯಳಾಗಿ ದರ್ಶನ ನೀಡುತ್ತಾಳೆ. ನಾಮ ಹಲವಾರು ಇದ್ದರೂ ಕೂಡ ದೇವತೆ ಮಾತ್ರ ಒಬ್ಬಳೇ. ಅವಳೇ ಶಿವನ ಮಡದಿ ಪಾರ್ವತಿ. ಈ ತಾಯಿಯ ಬಗ್ಗೆ ದುರಂತವಾದ ಒಂದು ಕಥೆ ಇದೆ. ಅದೇನೆಂದರೆ…..

 

ಪ್ರಸ್ತುತ ಲೇಖನದಲ್ಲಿ ಉಗ್ರ ತಾರಾ ಮಾತಾ ದೇವಾಲಯದ ಬಗ್ಗೆ ತಿಳಿಯೋಣ.

ಪಾರ್ವತಿಯ ಕಲ್ಯಾಣ

ಸಾಮಾನ್ಯವಾಗಿ ನಮಗೆ ತಿಳಿದಿರುವಂತೆ ಸ್ಮಶಾನ ರುದ್ರನಾದ ಪರಮಶಿವನನ್ನು ಪಾರ್ವತಿಯು ವಿವಾಹವಾಗುವುದು ತಂದೆ ದಕ್ಷ ಪ್ರಜಾಪತಿಗೆ ಇಷ್ಟವಿರುವುದಿಲ್ಲ. ಆದರೂ ಕೂಡ ಪಾರ್ವತಿ ದೇವಿಯು ಶಿವನನ್ನು ವಿವಾಹ ಮಾಡಿಕೊಳ್ಳುತ್ತಾಳೆ. ಇದರಿಂದ ಕ್ರೋದಗೊಂಡ ಮಹಾಶಿವನು ಮಗಳ ಮೇಲೆ ವಾತ್ಸಲ್ಯ ಕಳೆದುಕೊಳ್ಳುತ್ತಾನೆ. ಒಂದು ದಿನ..

ಯಜ್ಞ

ಒಂದು ದಿನ ದಕ್ಷ ಪ್ರಜಾಪತಿಯು ಒಮ್ಮೆ ಯಜ್ಞವನ್ನು ಮಾಡುತ್ತಾನೆ. ಆಗ ತನ್ನ ಮಗಳಾದ ಪಾರ್ವತಿಯನ್ನು ಮಾತ್ರ ಕರೆದು ಅಳಿಯನಾದ ಮಹಾಶಿವನನ್ನು ಕರೆಯುವುದಿಲ್ಲ. ಇದನ್ನು ಸಹಿಸಿಕೊಳ್ಳಲಾದರ ಪಾರ್ವತಿ ದೇವಿಯು ತನ್ನ ಪತಿಯನ್ನು ಏಕೆ ಯಜ್ಞಕ್ಕೆ ಕರೆದಿಲ್ಲ ಎಂದು ಕೇಳುತ್ತಾಳೆ. ಈ ಮೊದಲೇ ಕ್ರೋಧಿತನಾಗಿದ್ದ ದಕ್ಷ ಪ್ರಜಾಪತಿ, ಮಗಳು ಎಂದೂ ಕೂಡ ನೋಡದೇ ಅವಮಾನ ಮಾಡುತ್ತಾನೆ.

ಅವಮಾನ ಸಹಿಸಿಕೊಳ್ಳಲಾರದ ಪಾರ್ವತಿ ದೇವಿ

ತನ್ನ ತಂದೆ ಮಾಡಿದ ಅವಮಾನವನ್ನು ಸಹಿಸಿಕೊಳ್ಳಲಾರದ ಪಾರ್ವತಿ ದೇವಿಯು ಅಗ್ನಿ ಪ್ರವೇಶ ಮಾಡುತ್ತಾಳೆ. ತನ್ನ ಪತ್ನಿಯ ಅಗ್ನಿ ಪ್ರವೇಶದ ವಿಷಯ ತಿಳಿದ ಪರಮಶಿವನು ಅತ್ಯಂತ ಕೋಪಗೊಳ್ಳುತ್ತಾನೆ. ತಕ್ಷಣ ವೀರಭದ್ರನನ್ನು ಸೃಷ್ಟಿ ಮಾಡಿ ಯಜ್ಞವನ್ನು ಭಗ್ನ ಮಾಡುವಂತೆ ಆದೇಶಿಸುತ್ತಾನೆ.

RELATED ARTICLES  ಇದೊಂದು ಖುಷಿ ಸುದ್ದಿ…. ಚಂದ್ರನ ಮೇಲೂ ನೆಟವರ್ಕ್ ಟವರ್ ನಿರ್ಮಾಣ.!

ಪರಮಶಿವನು

ತನ್ನ ಪತ್ನಿಯಾದ ಪಾರ್ವತಿಯ ಮರಣವನ್ನು ಸಹಿಸಿಕೊಳ್ಳಲಾರದ ಪರಮಶಿವನು ಪಾರ್ವತಿ ದೇಹವನ್ನು ಹೆಗಲ ಮೇಲೆ ಹಾಕಿಕೊಂಡು ತಿರುಗುತ್ತಾ ಇರುತ್ತಾನೆ. ಆ ಸಮಯದಲ್ಲಿ ಆ ಪರಮಶಿವನೇ ಸಾಧರಣ ಮಾನವನಾಗಿ ಲೋಕವನ್ನು ಗಮನದಲ್ಲಿಟ್ಟುಕೊಳ್ಳದೇ ವೈರಾಗಿಯಾಗಿ ಮಾರ್ಪಾಟಾಗುತ್ತಾನೆ.

ಶ್ರೀ ಮಹಾ ವಿಷ್ಣು

ಶಿವನು ಸಾಧಾರಣ ವ್ಯಕ್ತಿಯಾಗಿ ತನ್ನ ಪತ್ನಿಯನ್ನು ಹೆಗಲ ಮೇಲೆ ಹಾಕಿಕೊಂಡು ತಿರುಗುವುದನ್ನು ಕಂಡ ಶ್ರೀ ಮಹಾ ವಿಷ್ಣುವು ಶಿವನನ್ನು ಸಮಾಧಾನ ಮಾಡಿ ಸುದರ್ಶನ ಚಕ್ರದಿಂದ ಪಾರ್ವತಿ ದೇವಿಯ ದೇಹವನ್ನು ಚೂರು ಚೂರಾಗಿ ಕತ್ತರಿಸುತ್ತಾನೆ.

ತಾರಾ ಮಾತಾ ದೇವಾಲಯ

ಆ ಶಕ್ತಿ ಪೀಠಗಳಲ್ಲಿ ಈ ತಾರಾ ಮಾತಾ ದೇವಾಲಯವು ಕೂಡ ಒಂದು. ಈ ದೇವಾಲಯವನ್ನು ಉಗ್ರ ತಾರಾ ದೇವಾಲಯ ಎಂದು ಸಹ ಕರೆಯುತ್ತಾರೆ. ಈ ಮಾಹಿಮಾನ್ವಿತವಾದ ದೇವಾಲಯವು ಗುವಾಹಟಿಯ ಪೂರ್ವ ಭಾಗದಲ್ಲಿರುವ ಉಝಾನ್ ಬಜಾರ್‍ನಲ್ಲಿ ಈ ದೇವಾಲಯವಿದೆ. ಇದೊಂದು ಅಸ್ಸಾಂನ ಪ್ರಸಿದ್ಧ ಶಕ್ತಿ ದೇವಾಲಯವಾಗಿದೆ.

ಹೊಕ್ಕಳ ಭಾಗ

ಮಹಾವಿಷ್ಣು ಪಾರ್ವತಿ ದೇವಿಯ ದೇಹವನ್ನು 108 ಚೂರು ಮಾಡಿದ ಭಾಗವು ಈ ತಾರಾ ಮಾತಾ ದೇವಾಲಯವು ಕೂಡ ಒಂದಾಗಿದೆ. ಈ ದೇವಾಲಯದಲ್ಲಿ ಮುಖ್ಯವಾಗಿ ದೇವಿಯ ಹೊಕ್ಕಳ ಬಳ್ಳಿಯೇ ಇಲ್ಲಿ ಪಾರ್ವತಿ ದೇವಿ ಎಂದು ಪೂಜಿಸಲಾಗುತ್ತದೆ.

ಯಾರು ನಿರ್ಮಾಣ ಮಾಡಿದರು?

ಈ ಉಗ್ರ ತಾರಾ ದೇವಾಲಯವನ್ನು ರಾಜ ಅಹೊಮ್ ಶಿವ ಸಿಂಗಾ 1725 ರಲ್ಲಿ ನಿರ್ಮಾಣ ಮಾಡಿದರು. ಅವರು ಮೂರು ವರ್ಷಗಳ ಹಿಂದೆ ಒಂದು ಟ್ಯಾಂಕ್ ಅನ್ನು ಶೋಧಸಿದರು. ಇದನ್ನು ಜೋರೆಪುಕುರಿ ಎಂದು ಕರೆಯಲಾಗುತ್ತದೆ. ಇದು ದೇವಾಲಯದ ಪೂರ್ವ ಭಾಗದಲ್ಲಿದೆ.

RELATED ARTICLES  ಉದ್ಯೋಗ ಕೊಡಿಸೋದಾಗಿ ನಂಬಿಸಿ ಮೋಸ.

ಪಾರ್ವತಿ ದೇವಿಯ ಹೊಕ್ಕಳು

ದೇವಾಲಯದ ಮೇಲ್ಭಾಗವು ವಿನಾಶಕಾರಿ ಭೂಕಂಪದಿಂದ ನಾಶವಾದರೂ ಕೂಡ ನೀರಿನ ಟ್ಯಾಂಕ್ ಮಾತ್ರ ಹಾಗೆಯೇ ಇತ್ತಂತೆ. ಇಲ್ಲಿ ತಾರಾ ದೇವಿಯ ಯಾವುದೇ ವಿಗ್ರಹವಿಲ್ಲ, ಬದಲಾಗಿ ಹೊಕ್ಕಳಿನಂತೆ ಒಂದು ಸಣ್ಣ ನೀರಿನ ಗುಳಿ ಇದ್ದು, ಇದನ್ನೇ ಪಾರ್ವತಿ ದೇವಿಯ ಹೊಕ್ಕಳು ಎಂದು ಕರೆಯುತ್ತಾರೆ. ಇಲ್ಲಿ ಸದಾ ನೀರು ತುಂಬಿರುತ್ತದೆ.

ವಾಮಾಚಾರ ಆರಾಧನೆ

ಈ ದೇವಾಲಯದಲ್ಲಿ ವಮಾಚಾರ ಆರಾಧನೆಯ ಶಕ್ತಿಯಾಗಿ ಪ್ರಸಿದ್ಧಿ ಪಡೆದಿದೆ. ಇದಕ್ಕೆ ಒಂದು ಪುರಾಣ ಕಥೆ ಕೂಡ ಇದೆ. ಅದೆನೆಂದರೆ ಒಂದು ಕಾಲದಲ್ಲಿ ಯಮಧರ್ಮ ರಾಜನು ಬ್ರಹ್ಮ ದೇವನಿಗೆ ದೂರು ನೀಡುತ್ತಾನೆ. ಅದೇನೆಂದರೆ ಪಾಪಗಳನ್ನು ಮಾಡುತ್ತಿದ್ದರೂ ಕೂಡ ಕಾಮರೂಪನ ಕಾರಣವಾಗಿ ಯಾರು ಕೂಡ ನರಕಕ್ಕೆ ಬರುತ್ತಿಲ್ಲ ಎಂದು ಬ್ರಹ್ಮನಿಗೆ ದೂರು ಹೇಳುತ್ತಾನೆ.

ಕಾಮಾಕ್ಯ

ಬ್ರಹ್ಮ ದೇವನು ಈ ವಿಷಯವನ್ನು ವಿಷ್ಣುವಿಗೆ ಹೇಳುತ್ತಾನೆ. ಈ ವಿಷಯವನ್ನು ಶಿವನಿಗೆ ತಿಳಿಸಿ ಕಾಮಾಕ್ಯದಲ್ಲಿ ವಾಸಿಸುವ ಎಲ್ಲಾ ಜನರನ್ನು ಓಡಿಸಲು ಶಿವ, ಉಗ್ರ ತಾರಾಗೆ ಆದೇಶ ನೀಡುತ್ತಾನೆ. ಆ ತಾಯಿ ತನ್ನ ಸೈನ್ಯವನ್ನು ಕಳುಹಿಸುತ್ತಾಳೆ.

ಮಹಾ ಶಿವನಿಗಾಗಿ ತಪಸ್ಸು

ಆ ಸಮಯದಲ್ಲಿ ಸಂಧ್ಯಾಚಲದಲ್ಲಿ ಶಿವನ ಧ್ಯಾನದಲ್ಲಿ ಲೀನನಾಗಿ ಒಬ್ಬ ಮಹರ್ಷಿಯು ತಪಸ್ಸು ಮಾಡುತ್ತಿರುತ್ತಾನೆ. ತಾರಾ ದೇವಿಯ ಸೈನ್ಯದಿಂದ ತನ್ನ ಶಿವನಿಗಾಗಿ ಮಾಡುತ್ತಿದ್ದ ತಪಸ್ಸು ಭಂಗವಾಯಿತು ಎಂದು ಉಗ್ರ ತಾರಾ ಮಾತೆಗೆ ಶಾಪವನ್ನು ನೀಡುತ್ತಾನೆ. ಅಲ್ಲಿಂದ ಎಲ್ಲಾ ಶಿವನ ಸಾಧನಗಳನ್ನು ಕಾಮ ರೂಪದಲ್ಲಿಯೇ ನೀಡಲಾಗುತ್ತದೆ. ಹೀಗಾಗಿಯೇ ಈ ತಾಯಿಯನ್ನು ವಮಾಚರ ಸಾಧನೆಯ ದೇವತೆಯಾಗಿ ಬಳಸುತ್ತಾರೆ.

*ನೈವೇದ್ಯ*

ಈ ಉಗ್ರೋ ತಾರಾ ದೇವಾಲಯದಲ್ಲಿ ಕಾಮಾಕ್ಯಳಿಗೆ ಪೂಜೆಯಂತೆ ಮಾಡಲಾಗುತ್ತದೆ. ಇಲ್ಲಿನ ತಾಯಿಗೆ ಮದ್ಯ, ಮಾಂಸ, ಮೊದಕ, ತೆಂಗಿನಕಾಯಿಗಳು ಮತ್ತು ಕುಬ್ಬುಗಳನ್ನು ನೈವೇದ್ಯವಾಗಿ ಅರ್ಪಣೆ ಮಾಡಲಗುತ್ತದೆ.