ಕುಮಟಾ : ಬಾಡಾ ಶ್ರೀ ಕಾಂಚಿಕಾ ಪರಮೇಶ್ವರಿ ದೇವಸ್ಥಾನದ ಸುತ್ತಮುತ್ತ, ಬಿಜೆಪಿ ಯುವ ಮೋರ್ಚಾ ಕುಮಟಾ ಮಂಡಲ ವತಿಯಿಂದ ಸ್ವಚ್ಚ ಭಾರತ ಅಭಿಯಾನದ ಅಂಗವಾಗಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಲಾಯಿತು. ಅಭಿಯಾನದಲ್ಲಿ ಉತ್ತರ ಕನ್ನಡ ಜಿಲ್ಲೆಯ ಯುವ ಮೋರ್ಚಾ ಪ್ರಭಾರಿ ಯಾದ ಶ್ರೀ ಎಂ ಜಿ ಭಟ್, ಸ್ಥಳೀಯ ಗ್ರಾಮ ಪಂಚಾಯತ ಸದಸ್ಯರಾದ ಶ್ರೀ ವಿಠ್ಠಲ ನಾಯಕ, ಶ್ರೀಮತಿ ದೀಪಾ ಹರಿಕಂತ, ನಿಕಟ ಪೂರ್ವ ತಾಲೂಕ ಪಂಚಾಯತ ಸದಸ್ಯರಾದ ಜಘು ನಾಯ್ಕ, ನಮ್ಮೊಂದಿಗೆ ಇದ್ದರು.
ಉತ್ತರ ಕನ್ನಡ ಯುವ ಮೋರ್ಚಾ ಜಿಲ್ಲಾ ಬಿಜೆಪಿ ಸದಸ್ಯರು ಪವನ ಶೆಟ್ಟಿ, ಆದಿತ್ಯ ಶೇಟ್, ಪ್ರಧಾನ ಕಾರ್ಯದರ್ಶಿ ಸೂರಜ್ ಶೇಟ್, ಧೀರಜ್ ನಾಯ್ಡು, ಪ್ರಸಾದ್ ನಾಯ್ಕ, ಪ್ರಸನ್ನ ಹೆಗಡೆ, ವಿಶ್ವ ವಿಶ್ವಕರ್ಮ, ಅಲೋಕ್ ಗಾಂವ್ಕರ್, ಅಮೃತ್ ಶೇಟ್, ಸರ್ವೋತ್ತಮ ಹೆಗಡೆ ಉಪಸ್ಥಿತರಿದ್ದರು.