ಸಿದ್ದಾಪುರ : ಯಕ್ಷಗಾನ ಕಲೆಯ ಸೀಮೋಲಂಘನ ಆಗಲು ಎಲ್ಲರೂ ಹೆಗಲು ಕೊಡಬೇಕು ಎಂದು ಪತ್ರಕರ್ತ ರವೀಂದ್ರ ಭಟ್ ಹೇಳಿದರು. ರವಿವಾರ ನಗರದ ಟಿಎಂಎಸ್ ಸಭಾಂಗಣದಲ್ಲಿ ಸಿದ್ದಾಪುರದ ಶ್ರೀ ಅನಂತ ಯಕ್ಷಕಲಾ ಪ್ರತಿಷ್ಠಾನವು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಹಮ್ಮಿಕೊಂಡ ಪ್ರತಿಷ್ಠಾನದ ದಶಮಾನೋತ್ಸವ, ಯಕ್ಷಗಾನದ ದಿಗ್ಗಜ ಗೋಡೆ ನಾರಾಯಣ ಹೆಗಡೆ ಅವರಿಗೆ ಕೊಳಗಿ ಅನಂತ ಹೆಗಡೆ ಅವರ ನೆನಪಿನ ಅನಂತಶ್ರೀ ಪ್ರಶಸ್ತಿ ಪ್ರದಾನ, ಸಂಗೀತ, ಯಕ್ಷಗಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಣ ಇಲ್ಲದೇ ಬದುಕು ಹೇಗೆ ಎಂಬುದನ್ನು ಯಕ್ಷಗಾನ ಕಲೆ ಕಲಿಸುತ್ತದೆ. ಗೋಡೆ ನಾರಾಯಣ ಹೆಗಡೆ ಅವರಿಗೆ ರಾಷ್ಟ್ರ ಪ್ರಶಸ್ತಿ ಬರಬೇಕಿತ್ತು.‌ ಭಾನುವಾರ ಪ್ರಕಟಗೊಂಡ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಯಕ್ಷಗಾನಕ್ಕೆ ಒಬ್ಬರಿಗೆ ಬಂದಿದೆ. ಗೋಪಾಲ ಆಚಾರಿ ಒಬ್ಬರು ಬಿಟ್ಟರೆ ಬೇರೆ ಯಾರಿಗೂ ಬಂದಿಲ್ಲ ಎಂದು ಹೇಳಿದರು.

RELATED ARTICLES  ಧಾರೇಶ್ವರ ಸಮೀಪ ರಾಮನಗಿಂಡಿ ಮಾರ್ಗದಲ್ಲಿ ಗುಡ್ಡ ಕುಸಿತ.

ಅಭಿನಂದನಾ ಮಾತುಗಳನ್ನು ಆಡಿದ ವಿ. ಉಮಾಕಾಂತ ಭಟ್ಟ ಕೆರೇಕೈ, ಗೋಡೆ ಅವರು ಯಕ್ಷಗಾನ ರಂಗದಲ್ಲಿ ೬೫ ವರ್ಷಗಳ ಕೆಲಸ ಮಾಡಿದವರು. ಅವರ ಆರೋಗ್ಯಯಕ್ಷಗಾನದ ಭಾಗ್ಯ, ಗೋಡೆ ಅವರ ಯಕ್ಷಗಾನ ಅನುಭವ ಯಕ್ಷಗಾನದ ಅನುಭವ. ಗೋಡೆ ಅವರ ರಂಗಭೂಮಿ ಶ್ರಮ ಯಕ್ಷಗಾನದ ಶ್ರಮ. ಈ ನಿಟ್ಟಿನಲ್ಲಿ ಯಕ್ಷಗಾನಕ್ಕೆ ಗೋಡೆ ಅವರ ಕೊಡುಗೆ ಅನುಪಮವಾದದ್ದು ಎಂದರು.

RELATED ARTICLES  ಅಂಬುಲೆನ್ಸ ಹಾಗೂ ಕಂಟೇನರ್ ನಡುವೆ ಅಪಘಾತ.

ಸೆಲ್ಲೋ ಇಂಡಿಯಾದ ಸಿಇಓ ಮೋಹನ ಭಾಸ್ಕರ ಹೆಗಡೆ, ಯಕ್ಷಗಾನ ಉಳಿಸಿ, ಬೆಳೆಸಲು ಸಾಮಾಜಿಕ ಜವಬ್ದಾರಿ ಆಗಬೇಕು ಎಂದರು.
ಯಲ್ಲಾಪುರ ಸಂಕಲ್ಪದ ಮುಖ್ಯಸ್ಥ ಪ್ರಮೋದ ಹೆಗಡೆ ಯಲ್ಲಾಪುರ, ಸಾವಿಗಿಂತ ಕ್ರೂರಿ, ನಾವು ಅವರನ್ನು ಮರೆತು ಹೋಗುವದು. ಆದರೆ, ಅನಂತ ಹೆಗಡೆ ಅವರಂಥ ಕಲಾವಿದರನ್ನು ಪ್ರತಿಷ್ಠಾನವು ಜೀವಂತವಾಗಿಸಿದ್ದಾರೆ. ಗೋಡೆ ಯುಗವಾಗಿಸಿದ್ದಾರೆ ಎಂದರು.

ಸಿದ್ದಾಪುರ ಟಿಎಂಎಸ್‌ ಅಧ್ಯಕ್ಷ ಆರ್. ಎಂ. ಹೆಗಡೆ ಬಾಳೇಸರ, ಕಲಾ ಪ್ರೋತ್ಸಾಹಕ ಆರ್.ಜಿ ಭಟ್ಟ ವರ್ಗಾಸರ ಪಾಲ್ಗೊಂಡರು. ಪ್ರತಿಷ್ಠಾನದ ಅಧ್ಯಕ್ಷ ವಿ.ಎಂ.ಭಟ್ಟ ಅಧ್ಯಕ್ಷತೆ ವಹಿಸಿದ್ದರು.