ಹೊನ್ನಾವರ: ತಾಲೂಕಿನ ಖರ್ವಾ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಕಾರೊಂದು ಎರಡು ಬೈಕ್ ಗೆ ಡಿಕ್ಕಿಹೊಡೆದು ನಾಲ್ವರು ಗಾಯಗೊಂಡ ಘಟನೆ ನಡೆದಿದೆ.ಕಾರ್ ಚಾಲಕನ ಅಜಾಗರೂಕತೆಯ ಚಾಲನೆಯಿಂದ ಎರಡು ಬೈಕ್ ಗೆ ಡಿಕ್ಕಿ ಸಂಭವಿಸಿ ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಕಾರು ಚಾಲಕ ಬೆಂಗಳೂರಿನ ನಾಗದೇವನಹಳ್ಳಿಯ ಅಜೇಯ ಚಂದ್ರಶೇಖರ ಕೆ.ಎಂ ವಿರುದ್ಧ ಪ್ರಕರಣ ದಾಖಲಾಗಿದೆ. ಗೇರುಸೊಪ್ಪಾದಿಂದ ಹೊನ್ನಾವರ ಮಾರ್ಗವಾಗಿ ಅತಿವೇಗ ಹಾಗು ನಿರ್ಲಕ್ಷತನದಿಂದ ಚಲಾಯಿಸಿ ಕೊಂಡು ಬಂದು ಖರ್ವಾ ಕ್ರಾಸ್ ಹತ್ತಿರ ಒಮ್ಮೆಲೆ ಕಾರನ್ನು ತನ್ನ ಬಲಬದಿಗೆ ಚಲಾಯಿಸಿ ಎರಡು ಬೈಕ್ ಗಳಿಗೆ ಗುದ್ದಿದ್ದಾನೆ.
ಬೈಕ್ ಸವಾರಾದ ತಾಲೂಕಿನ ಹೆರಂಗಡಿಯವರಾದ ಜುಲಫಿಕರ್ ಖಾಜಾ ಜುವಾಪು ಜಾಯಿಖಾಜಾ ಅಪ್ಕರ್ ಹಾಗೂ, ಗದಗ ಜಿಲ್ಲೆಯ ಹೊಸಳ್ಳಿಯ ಶಿವಯ್ಯ ಮಹಾಲಿಂಗಯ್ಯಗಣಾಚಾರಿ ಮತ್ತು ಕಾರ್ ನಲ್ಲಿದ್ದ ದೀಕ್ಷಿತ್ ಪ್ರಭು ಲಗ್ಗೆರೆ ಬೆಂಗಳೂರು ಹಾಗೂ ಕಾರು ಚಾಲಕನಿಗೆ ಗಂಭೀರ ಗಾಯವಾಗಿದೆ. ಎರಡು ಬೈಕ್ ಹಾಗೂ ಕಾರು ಜಖಂ ಆಗಿದೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳದಲ್ಲಿ ನಿಂತು ವ್ಯವಸ್ಥೆ ಮಾಡಿದ ಮಾಜಿ ಶಾಸಕರು.
ಖಾಸಗಿ ಕಾರ್ಯವನ್ನು ಮುಗಿಸಿಕೊಂಡು ಹೊನ್ನಾವರದ ಗೇರುಸೊಪ್ಪ ಕಡೆಯಿಂದ ಮನೆಕಡೆ ಹೊರಟಿದ್ದ ಮಾಜಿ ಶಾಸಕ ಮಂಕಾಳವೈದ್ಯರಿಗೆ ಗೋಚರಿಸಿದ್ದು ಅಲ್ಟೋ ಕಾರ್ ಮತ್ತು ಬೈಕ್ ನಡುವೆ ನಡೆದ ಅಪಘಾತ. ಈ ಅಪಘಾತದಲ್ಲಿ ಬೀಕರವಾಗಿ ಗಾಯಗೊಂಡಿದ್ದ ವ್ಯಕ್ತಿಗಳನ್ನು ಅಂಬ್ಯುಲನ್ಸ ಮೂಲಕ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಮಾಜಿ ಶಾಸಕ ಮಂಕಾಳ ವೈದ್ಯ ದಾಖಲಿಸಲು ವ್ಯವಸ್ಥೆ ಮಾಡಿದ್ದಾರೆ.