ಕುಮಟಾ: ತಾಲೂಕಿನಲ್ಲಿ ತಾಂತ್ರಿಕ ವರ್ಗದವರಿಗೆ ಸಹಾಯಕವಾಗುವ ನಿಟ್ಟಿನಲ್ಲಿ ತಂತ್ರಜ್ಞಾನದ ಮಾಹಿತಿ ನೀಡುವ ದಿಶೆಯಲ್ಲಿ ಹಾಗೂ ಇತರ ಮಾಹಿತಿಗಳನ್ನು ಒದಗಿಸುವ ನಿಟ್ಟಿನಲ್ಲಿ ದಿಶಾ ಎಂಟರ್ಪ್ರೈಸಸ್ ನ ಮಾಲೀಕರಾದ ಗಜಾನನ ಹೆಗಡೆ ಅವರು ಕಾರ್ಯಕ್ರಮವನ್ನು ತಾಲೂಕಿನ ನಾದಶ್ರೀ ಕಲಾ ಕೇಂದ್ರದಲ್ಲಿ ಹಮ್ಮಿಕೊಂಡಿದ್ದರು.ಈ ಕಾರ್ಯಾಗಾರದಲ್ಲಿ, ಸುಪ್ರೀಂ, ಲೈವ್ ಗಾರ್ಡ, ಸನ್ ಝೋನ್ ಮತ್ತು ಎಲ್.ಪಿ.ಸಿ ಕಂಪನಿಗಳ ನುರಿತ ಎಕ್ಸಿಕ್ಯೂಟಿವ್ ಗಳು ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮವನ್ನು ಹೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶ್ರೀಯುತ ವಿ. ಆಯ್. ಹೆಗಡೆ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಇಬರು ಇಂಥಹ ಕಾರ್ಯಾಗಾರಗಳು ಪ್ರತಿ 6 ತಿಂಗಳಿಗೊಮ್ಮೆ ಆದರೂ ನಡೆಯಬೇಕು, ಇದರಿಂದ ತಾಂತ್ರಿಕ ವರ್ಗದವರಿಗೆ ಮಾಹಿತಿ ಜೊತೆಗೆ, ಕಂಪನಿಗಳ ಪರಿಚಯ ಜನತೆಗೆ ದೊರೆಯಲು ಸಹಕಾರಿಯಾಗುವುದು ಎಂದು ಆಶಿಸಿದರು.

RELATED ARTICLES  ಕುಮಟಾ ಮೀನು ಮಾರುಕಟ್ಟೆ ನವೀಕರಣ ಕಾಮಗಾರಿಗೆ ಚಾಲನೆ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಜಾನನ ಇಲೆಕ್ಟ್ರಿಕಲ್ ಮಾಲೀಕರಾದ ಶ್ರೀಯುತ ಆರ್. ಜಿ. ಹೆಗಡೆ ಅವರು ವಹಿಸಿದ್ದರು. ಕಾರ್ಯಕ್ರಮವನ್ನು ಪ್ರಶಾಂತ್ ಹೆಗಡೆ ಅವರು ನಿರೂಪಣೆ ಮಾಡಿ ಸಭಾ ಕಾರ್ಯದ ಸಮಾರೋಪವನ್ನು ಸಹ ಮಾಡಿಕೊಟ್ಟರು.

RELATED ARTICLES  ಬಣ ರಾಜಕಾರಣಕ್ಕೆ ಗುಡ್ ಬೈ! ಚುನಾವಣೆ ಗೆಲುವಿಗೆ ಒಗ್ಗಟ್ಟಿನ ಮಂತ್ರ ಜಪಿಸಿದ ಶಿವಾನಂದ ಹೆಗಡೆ ಹಾಗೂ ಶಾರದಾ ಶೆಟ್ಟಿ!

ಕಾರ್ಯಕ್ರಮದಲ್ಲಿ ಬಾಗವಹಿಸಿದ ಎಲ್ಲ ಸದಸ್ಯರು ಮತ್ತು ಕಂಪನಿಯ ಎಕ್ಸಿಕ್ಯೂಟಿವ್ ಗಳಿಗೆ ದಿಶಾ ಎಂಟರ್ಪ್ರೈಸಸ್ ನ ಮಾಲೀಕರಾದ ಶ್ರೀಯುತ ಗಜಾನನ ಹೆಗಡೆ ಅವರು ಕೃತಜ್ಞತೆ ಸಲ್ಲಿಸಿ, ತಮ್ಮಲ್ಲಿ ಇನ್ನೂ ಹೆಚ್ಚಿನ ವ್ಯಾಪಾರ ವಹಿವಾಟುಗಳನ್ನು ನಡೆಸಿ ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೆ ವಿಶೇಷವಾಗಿ ಸಹಕರಿಸಬೇಕೆಂದು ಮನವಿ ಮಾಡಿದರು.