ಕುಮಟಾ: ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ 66ನೇ ಕನ್ನಡ ರಾಜ್ಯೋತ್ಸವವನ್ನು ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಿಕ್ಷಕರೊಂದಿಗೆ ಅರ್ಥಪೂರ್ಣವಾಗಿ ಆಚರಿಸಿಕೊಂಡರು. ಬಹು ಕಾಲದ ಬಳಿಕ ವಿದ್ಯಾರ್ಥಿಗಳ ಕನ್ನಡಾಭಿಮಾನದ ಭಾಷಣ, ಸಮೂಹಗಾನ ಸ್ಪರ್ಧೆಗಳು ಕಾರ್ಯಕ್ರಮದ ಸೊಬಗನ್ನು ಹೆಚ್ಚಿಸಿದವು.   ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ವಿಶ್ರಾಂತ ಮುಖ್ಯಾಧ್ಯಾಪಕ, ಸಾಹಿತಿ ಎನ್. ಆರ್. ಗಜು ಅವರು ಪಠ್ಯೇತರ ಪುಸ್ತಕಗಳನ್ನೋದುವ ಹವ್ಯಾಸ ಇಂದಿನ ಮಕ್ಕಳು ಬೆಳೆಸಿಕೊಳ್ಳಬೇಕಾದ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟರು.  ತಮ್ಮ ಮನೆಯ ಗ್ರಂಥಾಲಯದ ಸಾಹಿತ್ಯ ಪುಸ್ತಕಗಳನ್ನು ಎಲ್ಲ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಕೊಡಮಾಡಿ ಪ್ರೋತ್ಸಾಹಿಸುವ ನುಡಿಗಳನ್ನಾಡಿದರು. 

ಶಾಲಾ ಮುಖ್ಯಾಧ್ಯಾಪಕ ಪಿ.ಎಸ್. ವಾಗ್ರೇಕರವರ ಲಾಲಿತ್ಯ ಭರಿತ ಅಧ್ಯಕ್ಷೀಯ ನುಡಿಗಳೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಕನ್ನಡ ಪ್ರಾಧ್ಯಾಪಕ ಸುರೇಶ್ ಪೈ  ಅಚ್ಚುಕಟ್ಟಾದ ನಿರೂಪಣೆಯನ್ನು ನೆರವೇರಿಸಿ, ಸಿಹಿ ವಿತರಣೆಯೊಂದಿಗೆ ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು. ಶಾಲೆಯ ಸರ್ವ ಶಿಕ್ಷಕ ಶಿಕ್ಷಕೇತರ ವೃಂದ ಹಾಗೂ ಬಹುತೇಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಕಾರ್ಯಕ್ರಮಕ್ಕೆ ಸಾಕ್ಷೀಭೂತರಾದರು.
RELATED ARTICLES  ಜಿಲ್ಲೆಯಲ್ಲಿ ಇಂದು 139 ಜನರಲ್ಲಿ ಕೊರೋನಾ ಪಾಸಿಟೀವ್..!