ಕುಮಟಾ : ತಾಲೂಕಿನ ಸರಸ್ವತಿ ಪ. ಪೂ. ಕಾಲೇಜಿನಲ್ಲಿ ಇಂದು 66 ನೇ ಕನ್ನಡ ರಾಜ್ಯೋತ್ಸವದ ಅಂಗವಾಗ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಜ್ಯೋತಿ ಬೆಳಗಿಸುವುದರೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಣೆ ಮಾಡುವುದರೊಂದಿಗೆ ಭಾಷಣ ಮತ್ತು ನಾಡಭಕ್ತಿಗೀತೆಗಳನ್ನು ಹಾಡಿ ಎಲ್ಲರನ್ನು ರಂಜಿಸಿ ಸಂಭ್ರಮಿಸಿದರು.
ಕನ್ನಡ ಉಪನ್ಯಾಸಕರಾದ ಶ್ರೀ ಚಿದಾನಂದರವರು ಕನ್ನಡ ನಾಡಿನ ಜನರ ಸಹೃದಯತೆ ಮತ್ತು ಸಹಕಾರವನ್ನು ಸ್ಮರಿಸಿ ಕನ್ನಡ ಭಾಷೆಯನ್ನು ಮಾತಾಡಿ ಉಳಿಸಿ ಬೆಳೆಸಬೇಕೆಂದು ವಿನಂತಿಸಿದರು. ಪ್ರಾಚಾರ್ಯರಾದ ಶ್ರೀ ಮಹೇಶ ಉಪ್ಪಿನ ಇವರು ತಮ್ಮ ಭಾಷಣದಲ್ಲಿ ಕನ್ನಡ ನಾಡಿನ ಬೆಳೆವಣೆಗೆ ಮತ್ತು ಏಕೀಕರಣದ ಮಹತ್ವವನ್ನು ತಿಳಿಸಿದರು.
ಉಪನ್ಯಾಸಕರಾದ ಶ್ರೀಮತಿ ಗಾಯತ್ರಿ ಕಾಮತ ಕವನ ಮಂಡಿಸಿದರು. ಶ್ರೀ ಪದ್ಮನಾಭ ಪ್ರಭು ಮತ್ತು ಕುಮಾರಿ ಕವಿತಾ ಗೌಡ ಉಪನ್ಯಾಸಕರು ತಮ್ಮ ಹಾಡಿನ ಮೂಲಕ ಕಾರ್ಯಕ್ರಮಕ್ಕೆ ಮೆರಗು ತಂದರು. ವಿಧಾತ್ರಿ ಆಕಾಡೆಮಿಯ ಸಂಸ್ಥಾಪಕರಾದ ಶ್ರೀ ಗುರುರಾಜ ಶೆಟ್ಟಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಎಲ್ಲರಿಗೂ ಶುಭಕೋರಿದರು.