ಶಿರಸಿ: ಯಾರೂ ವಿವಾಹ ವಿಛ್ಚೇಧನ ಮಾಡಿಕೊಳ್ಳದೇ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಜೀವನ ನಡೆಸಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು.

ನಗರದ ಮಾರಿಗುಡಿಯಲ್ಲಿ ಸರ್ವ ದಂಪತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯ ನೀಡಿ ಆಶೀರ್ವಚನ ನೀಡಿದ ಅವರು ಭ್ರೂಣಹತ್ಯೆ ಮಾಡಬಾರದು. ಹಿಂದೂ ಸಮಾಜದಲ್ಲಿ ಕನಿಷ್ಠ 3 ಮಕ್ಕಳು ಆಗಬೇಕು ಎಂದರು. ಮಕ್ಕಳಿಗೆ ಒಳ್ಳೆ ಸಂಸ್ಕ್ರತಿಯನ್ನ ನೀಡಬೇಕು ಎಂದೂ ಹೇಳಿದರು.

RELATED ARTICLES  ಕಾರುಗಳ ನಡಯವೆ ಮುಖಾಮುಖಿ ಡಿಕ್ಕಿ..!

ಶ್ರೀ ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ ಆರ್. ಜಿ. ನಾಯ್ಕ ಫಲ ಸಮರ್ಪಣೆ ಮಾಡಿದರು. ಗ್ರಾಮಭ್ಯದಯ ಅಧ್ಯಕ್ಷ ಎಂ. ಸಿ. ಹೆಗಡೆ ಕಾರ್ಯಕ್ರಮದ ಅವಲೋಕನ ಮಾಡಿದರು. ವೇದಿಕೆಯಲ್ಲಿ ಧರ್ಮದರ್ಶಿ ಶಿವಾನಂದ ಶೇಟ್, ಕೆ. ವಿ ಭಟ್ ಉಪಸ್ಥಿತರಿದ್ದರು.ಗ್ರಾಮಭ್ಯುದಯ ಕಾರ್ಯದರ್ಶಿ ಸಂತೋಷ ಭಟ್ ಕೋಡಿಗಾರ ಸ್ವಾಗತಿಸಿದರು. ಎಮ್. ಕೆ. ಹೆಗಡೆ ಗೋಳಿಕೂಪ್ಪ, ಗಣಪತಿ ಹರಿಮನೆ, ಹೇಮಂತ ಹೆಗಡೆ ತಲ್ಲಿಮನೆ ಇದ್ದರು. ರಮೇಶ್ ಹೆಗಡೆ ದೊಡ್ನಳ್ಳಿ ನಿರೂಪಿಸಿದರು.

RELATED ARTICLES  ಮಲೆನಾಡು ಗಿಡ್ಡ ಹಬ್ಬದಲ್ಲಿ ಜನಸಾಗರ: ತಳಿಯ ಉಳಿವು, ಬೆಳವಿನ ಬಗ್ಗೆ ಚಿಂತನ ಮಂಥನ.