ಕುಮಟಾ: ಉತ್ತರಕನ್ನಡದ ಹಲವೆಡೆ ಅಕ್ರಮ ಗೋ ಸಾಗಾಟ, ಗೋ ಗಳ ಹಿಂಸಾತ್ಮಕ ಸಾಗಾಟ ಪ್ರಕರಣಗಳು ವರದಿಯಾಗುತ್ತಿದೆ. ಅಂತಹುದೇ ಪ್ರಕರಣ ಇಂದು ಸಹ ಬೆಳಕಿಗೆ ಬಂದಿದೆ. ಲಾರಿ ಒಂದರಲ್ಲಿ ಅಕ್ರಮ ಹಾಗೂ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಕೋಣ ಹಾಗೂ ಎಮ್ಮೆ ಸೇರಿ ಒಟ್ಟು 22 ಜಾನುವಾರುವನ್ನು ಕುಮಟಾ ಪೊಲೀಸರು ರಕ್ಷಿಸಿದ್ದು, ಆರೋಪಿತರ ಸಮೇತ ವಾಹನವನ್ನು ಪಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ಕೋಣ ಹಾಗೂ ಎಮ್ಮೆಗಳನ್ನು ಹೊಸಾಡದ ಅಮೃತಧಾರಾ ಗೋ ಗೋಶಾಲೆಗೆ ಕಳುಹಿಸಲಾಗಿದೆ.ಅಕ್ರಮ ಜಾನುವಾರು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ಇಂದು ಕುಮಟಾ ತಾಲೂಕಿನ ಹೊಳೆಗದ್ದೆ ಟೋಲ್ ಗೇಟ್ ನಲ್ಲಿ ಪೊಲೀಸ್ ತಪಾಸಣೆ ನಡೆಸಿದ ವೇಳೆ ಲಾರಿಯಲ್ಲಿ ಅಕ್ರಮವಾಗಿ ಕೋಣ ಹಾಗೂ ಎಮ್ಮೆಗಳನ್ನು ಸಾಗಿಸುತ್ತಿರುವುದು ತಿಳಿದುಬಂದಿದೆ. ಕೂಡಲೆ ವಾಹನವನ್ನು ವಶಪಡಿಸಿಕೊಂಡ ಕುಮಟಾ ಪೊಲೀಸರು, ಈ ಕುರಿತಾಗಿ ಪ್ರಕರಣ ದಾಖಲಿಸಿಕೊಂಡು, ಎಮ್ಮೆ ಹಾಗೂ ಕೋಣವನ್ನು ಗೋಶಾಲೆಗೆ ಕಳುಹಿಸಿದ್ದಾರೆ.
ಕೊಲ್ಲಾಪುರದಿಂದ ಪಾಂಡಿಚೇರಿಗೆ ಅಶೋಕ್ ಲೈಲೆಂಡ್ ಕಂಪನಿಯ ಲಾರಿ ಮೂಲಕ 13 ಕೋಣ ಹಾಗೂ 09 ಎಮ್ಮೆ ಸೇರಿ ಒಟ್ಟು 22 ಜಾನುವಾರುವನ್ನು ಅಕ್ರಮವಾಗಿ ಸಾಗಿಸುತ್ತಿರುವ ವೇಳೆ ಕುಮಟಾ ತಾಲೂಕಿನ ಹೊಳೆಗದ್ದೆ ಟೋಲ್ ಪ್ಲಾಜಾದಲ್ಲಿ ಪೊಲೀಸ್ ತಪಾಸಣೆ ನಡೆಸಲಾಗಿದೆ. ಈ ವೇಳೆ ಜಾನುವಾರುಗಳನ್ನು ಅಕ್ರಮ ಹಾಗೂ ಹಿಂಸಾತ್ಮಕವಾಗಿ ಸಾಗಿಸುತ್ತಿರುವುದು ಖಚಿತಪಡಿಸಿಕೊಂಡು, ಕುಮಟಾ ಪಿ.ಎಸ್.ಐ ರವಿ ಗುಡ್ಡಿ ನೇತೃತ್ವದಲ್ಲಿ ವಾಹನವನ್ನು ಕುಮಟಾ ಪೊಲೀಸ್ ಠಾಣೆಗೆ ಕರೆತಂದು ಪ್ರಕರಣ ದಾಖಲಿಸಲಾಗಿದೆ.