ಮುರ್ಡೇಶ್ವರ: ಅದೆಷ್ಟು ಕಠಿಣ ನಿಯಮಗಳನ್ನು ಜಾರಿಗೆ ತಂದರೆ ಹಾಗೂ ಜಿಲ್ಲಾಡಳಿತ ಬೇರೆಬೇರೆ ರೀತಿಯಲ್ಲಿ ಪ್ರಯತ್ನ ನಡೆಸಿದರು ಸಮುದ್ರದಲ್ಲಿ ಇಳಿಯುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ ಇದರಿಂದ ಅವರ ಜೀವಕ್ಕೆ ಆಪತ್ತುಗಳು ಎದುರಾಗುತ್ತಿದೆ. ಇಂತಹುದೇ ಘಟನೆ ಇಂದು ಮತ್ತೆ ವರದಿಯಾಗಿದೆ.

RELATED ARTICLES  ಸರಕು ತುಂಬಿದ ಲಾರಿ ಪಲ್ಟಿ.

ಸಮುದ್ರ ಪಾಲಾಗುತಿದ್ದ ಪ್ರವಾಸಿಗನನ್ನು ರಕ್ಷಣೆ ಮಾಡಿದ ಘಟನೆ ಇಲ್ಲಿನ ಕಡಲತೀರದಲ್ಲಿ ನಡೆದಿದೆ. ಶಿರಸಿಯಿಂದ ನಾಲ್ವರು ಪ್ರವಾಸಿಗರು ಮುರ್ಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದರು. ಪ್ರವಾಸಕ್ಕೆ ಬಂದ ನಾಲ್ವರೂ ಸಮುದ್ರಕ್ಕೆ ಇಳಿದಿದ್ದರು. ಈ ವೇಳೆ ಓರ್ವ ಸಮುದ್ರದ ಅಲೆಗೆ ಸಿಲುಕಿ ಮುಳುಗುತ್ತಿದ್ದ. ಇದನ್ನು ಗಮನಿಸಿದ ಮುರ್ಡೇಶ್ವರದ ಓಷಿಯನ್ ಅಡ್ವೆಂಚರ್ ಸಂಸ್ಥೆ ಯುವಕರು ರಕ್ಷಣೆ ಮಾಡಿದ್ದಾರೆ. ಶಿರಸಿ ಮೂಲದ ಅಭಯ್ (35)ರಕ್ಷಣೆಗೊಂಡ ಪ್ರವಾಸಿಗ ಎಂದು ತಿಳಿದುಬಂದಿದೆ.

RELATED ARTICLES  ಕೆನರಾ ಎಕ್ಸಲೆನ್ಸ್ ಪಿ.ಯು ಕಾಲೇಜ್‌ನಲ್ಲಿ ಹಮ್ಮಿಕೊಂಡ ಜಿಲ್ಲಾ ವಿಜ್ಞಾನ ಮೇಳ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ ಮಾಹಿತಿ ಕಾರ್ಯಗಾರ