ಅಂಕೋಲಾ: ಒಂದೆಡೆ ದೀಪಾವಳಿಯ ಸಂಭ್ರಮ ಮನೆ ಮಾಡಿದ್ದರೆ ಇನ್ನೊಂದೆಡೆ ಅಕ್ರಮ ಸಾರಾಯಿ ಸಾಗಾಟ ಮಾಡುತ್ತಿದ್ದ ಪ್ರಕರಣ ಬೇಧಿಸಿ ಪೊಲೀಸರು ದಾಳಿ ನಡೆಸಿದ ಘಟನೆ ವರದಿಯಾಗಿದೆ. ಕೇಣಿ – ಮೂಲೆಭಾಗ ವ್ಯಾಪ್ತಿಯಲ್ಲಿ ಕಾರವಾರ ವಿಭಾಗಕ್ಕೆ ನೂತನ ಡಿವೈಎಸ್ಪಿ ಆಗಿ ಅಧಿಕಾರ ಸ್ವೀಕರಿಸಿರುವ ವೆಲೆಂಟೆನ್ ಡಿಸೋಜ ಮಾರ್ಗದರ್ಶನದಲ್ಲಿ, ಅಂಕೋಲಾ ಸಿಪಿಐ ಸಂತೋಷ್ ಶೆಟ್ಟಿ ಸೂಚನೆ ಮೇರೆಗೆ,ಪಿಎಸ್ಐ ಪ್ರವೀಣ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ,ಅಕ್ರಮ ಗೋವಾ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯೋರ್ವನನ್ನು ಮಾಲು ಸಮೇತ ಬಂದಿಸಿದ ಘಟನೆ ನಡೆದಿದೆ.
ಕೇಣಿ ಮೂಲೆಭಾಗ ನಿವಾಸಿ ರವಿಕಾಂತ ಮಾದೇವ ಹರಿಕಂತ್ರ ಬಂಧಿತ ಆರೋಪಿಯಾಗಿದ್ದು, ಈತನು ಹತ್ತಿರದ ಸ್ಮಶಾನದ ಬಳಿ ಪರವಾನಗಿ ಇಲ್ಲದೇ ಗೋವಾ ರಾಜ್ಯದ ಲೇಬಲ್ ಹೊಂದಿದ ಲೈಟ್ ಹೌಸ್ ವಿಸ್ಕಿ ಎಂಬ ಹೆಸರಿರುವ 180 ಎಂ.ಎಲ್ ನ 110 ಸರಾಯಿ ಬಾಟಲಿಗಳನ್ನು, ಅಕ್ರಮ ಸಾಗಾಟ ಮಾಡಿಕೊಂಡು ಬಂದು ಮಾರಾಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಆಧರಿಸಿ, ದಾಳಿ ನಡೆಸಿದ ಅಂಕೋಲಾ ಪಿ.ಎಸ್. ಐ ಪ್ರವಿಣಕುಮಾರ್ ನೇತ್ರತ್ವದ ತಂಡ ಆರೋಪಿಯನ್ನು ಬಂಧಿಸಿ, ಅಕ್ರಮ ಗೋವಾ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸಿಬ್ಬಂದಿ ಮಂಜುನಾಥ ಲಕ್ಮಾಪುರ, ಚಾಲಕ ಜಗದೀಶ ನಾಯ್ಕ, ಇತರರು ದಾಳಿಯಲ್ಲಿ ಪಾಲ್ಗೊಂಡಿದ್ದರು. ಈ ಕುರಿತು ಸಿ ಎಚ್ ಸಿ. .ವೆಂಕಟ್ರಮಣ ಓಮು ನಾಯ್ಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.