ನ್ಯೂಸ್ ಬ್ಯೂರೋ : ಬೆಲೆ ಏರಿಕೆಯ ಬಿಸಿಯಲ್ಲಿ ರೋಸಿಜೋಗಿದ್ದ ಹೋಗಿದ್ದ ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಸ್ವಲ್ಪ ರಿಲೀಫ್‌‌ ನೀಡಿದ್ದಾರೆ. ಹೌದು , ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಬೆಲೆಯನ್ನು ಇಳಿಸುವ ಮೂಲಕ ಬೆಳಕಿನ ಹಬ್ಬ ದೀಪಾವಳಿಗೆ ಕೇಂದ್ರ ಸರ್ಕಾರ ಗಿಫ್ಟ್ ನೀಡಿದೆ. ಇದರಿಂದಾಗಿ ಜನ ಸಾಮಾನ್ಯರಿಗೆ ಕೊಂಚಮಟ್ಟಿನ ನಿರಾಳತೆ ಸಿಕ್ಕಂತಾಗಿದೆ.

RELATED ARTICLES  ಕುಮಟಾದಲ್ಲಿ ಸಂಪನ್ನವಾಯ್ತು ಹಾಲಕ್ಕಿ ಕ್ರಿಕೆಟ್ ಟೂರ್ನಿ.

ಮಹತ್ವದ ಚರ್ಚೆ ಬಳಿಕ ಮೋದಿ ಸರ್ಕಾರ ಪೆಟ್ರೋಲ್ ಮೇಲೆ 5, ಡಿಸೇಲ್ ಮೇಲೆ 10 ರೂಪಾಯಿ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ. ಈ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.

RELATED ARTICLES  ‘ಆಧಾರಶ್ರೀ ಪ್ರಶಸ್ತಿ’ಗೆ ಹೊನ್ನಾವರದ ಜೀವನಾಧಾರ ಟ್ರಸ್ಟ್ ನ ಜಾಕಿ ಡಿಸೋಜಾ ಅಯ್ಕೆ.

ಪೆಟ್ರೋಲ್ ಹಾಗು ಡೀಸೆಲ್ ದರ ಏರಿಕೆಯಿಂದ ಸಾಗಾಣಿಕೆ ವೆಚ್ಚ ಜಾಸ್ತಿಯಾಗಿ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರಿರುವುದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿತ್ತು. ಹೀಗಾಗಿ ಮನಗಂಡು ಪೆಟ್ರೋಲ್ ಹಾಗು ಡಿಸೇಲ್ ಮೇಲಿನ ಅಬಕಾರಿ ಸುಂಕ ಕಡಿತ ಮಾಡುವುದಾಗಿ ಕೇಂದ್ರ ಘೋಷಿಸಿದೆ.