ಭಟ್ಕಳ: ಎಲ್ಲರೂ ಹಬ್ಬದ ಸಂಭ್ರಮದಲ್ಲಿದ್ದರೆ ಮುರುಡೇಶ್ವರ ಸಮೀಪ ಅಪರಿಚಿತ ಶವವೊಂದು ಇದೀಗ ಸುತ್ತಲ ಜನರಲ್ಲಿ ಗೊಂದಲದ ವಾತಾವರಣ ಸೃಷ್ಟಿಮಾಡಿದೆ. ಈ ಶವ ಕೊಳೆತ ಸ್ಥಿತಿಯಲ್ಲಿದ್ದು, ಸಾವು ಸಂಭವಿಸಿ ಕೆಲ‌ದಿನ ಕಳೆದಿರಬಹುದು ಎಂಬಂತಿದೆ ಎನ್ನುತ್ತಾರೆ ಸ್ಥಳೀಯರು.

ತಾಲೂಕಿನ ಮುರುಡೇಶ್ವರ ದಿವಗೇರಿ ಮಠದಹಿತ್ಲು ಸಮುದ್ರ ತೀರದಲ್ಲಿ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತ ವ್ಯಕ್ತಿಯು ನೀಲಿ ಚಡ್ಡಿ, ಕೆಂಪು ಬಣ್ಣದ ಟೀಶರ್ಟ ಧರಿಸಿದ್ದಾನೆ ಎನ್ನಲಾಗಿದೆ.

RELATED ARTICLES  ವಿವಿಧ ಕಾಮಗಾರಿಗೆ ಚಾಲನೆ ನೀಡಿದ ಶಾಸಕ

ಮೃತ ವ್ಯಕ್ತಿಯು ಸುಮಾರು 35-40 ವಯಸ್ಸಿನವರಿರಬಹುದು ಎಂದು ಅಂದಾಜಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಭಟ್ಕಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

RELATED ARTICLES  ಉತ್ತರ ಪ್ರದೇಶದ ಗುಜರಿ ವಾಹನಗಳನ್ನು ಸಿದ್ದರಾಮಯ್ಯ ಸರ್ಕಾರ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆಯಾ? ಕಾರವಾರದಲ್ಲಿ ವ್ಯಂಗ್ಯ ಮಾಡಿದ ರಾಜೇಶ ನಾಯಕ.

ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸೈ ರವೀಂದ್ರ ಬಿರಾದಾರ ತನಿಖೆ ಕೈಗೊಂಡಿದ್ದಾರೆ. ಸಾರ್ವಜನಿಕರು ಅಗತ್ಯ ಮಾಹಿತಿಗಾಗಿ ಪೊಲೀಸರು ಸಂಪರ್ಕಿಸಬಹುದು ಎಂದು ಸ್ಥಳೀಯವಾಗಿ ಮಾಹಿತಿ ಲಭ್ಯವಾಗಿದೆ.