ಭಟ್ಕಳ: ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸರ್ಕಾರಿ ಪ್ರೌಢಶಾಲೆ ಮುಂಡಳ್ಳಿಯಲ್ಲಿ ದಿನಕರ ದೇಸಾಯಿವರ ಜನ್ಮದಿನದ ಹಿನ್ನೆಲೆಯಲ್ಲಿ ಚುಟುಕುಬ್ರಹ್ಮ ದಿನಕರದೇಸಾಯಿಯವರಿಗೆ ನುಡಿನಮನ ಸಲ್ಲಿಸಲಾಯಿತು. ದಿನಕರ ದೇಸಾಯಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಪ್ರಾಸ್ತಾವಿಕ ಮಾತುಗಳನ್ನಾಡಿ ದೇಸಾಯಿಯವರು ಈ ಜಿಲ್ಲೆಯಲ್ಲಿ ದಿನಕರನಂತೆಯೇ ಹುಟ್ಟಿ, ಕೆನರಾ ವೆಲಫೇರ್ ಟ್ರಸ್ಟ ಸ್ಥಾಪಿಸಿ ಅಕ್ಷರದ ಬೆಳಕನ್ನು, ಜನಸೇವಕ ಪತ್ರಿಕೆಯ ಮೂಲಕ ವೈಚಾರಿಕತೆ ಬೆಳಕನ್ನು ಮತ್ತು ಚುಟುಕುಗಳ ಮೂಲಕ ಸಾಹಿತ್ಯ ಕೇತ್ರವನ್ನೂ ಬೆಳಗಿ ಮನೆ-ಮನಗಳ ಕತ್ತಲೆಯನ್ನು ಓಡಿಸುವ ಕಾರ್ಯ ಮಾಡುವ ಮೂಲಕ ನಿಜ ಅರ್ಥದ ಸೂರ್ಯನೇ ಆಗಿದ್ದಾರೆ ಎಂದು ನುಡಿದರು.

RELATED ARTICLES  ಸರಸ್ವತಿ ವಿದ್ಯಾ ಕೇಂದ್ರದಲ್ಲಿ “ಗುರು ಪೂರ್ಣಿಮೆ”

 

ನಂತರ ಪ್ರೌಢಶಾಲಾ ವಿಧ್ಯಾರ್ಥಿಗಳು ದೇಸಾಯಿಯವರ ಆಯ್ದ ಚುಟುಕುಗಳನು ವಾಚಿಸಿದರು. ನಂತರದಲ್ಲಿ ವಿದ್ಯಾರ್ಥಿಗಳಿಗೆ ದಿನಕರ ದೇಸಾಯಿಯವರ ಗೀತೆಗಳನ್ನು ಕೇಳಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯಾಧ್ಯಾಪಕ ಡಿ.ಟಿ.ಗೌಡ ಮಾತನಾಡಿ ಈ ನಾಡು ಕಂಡ ಅಪರೂಪದ ವ್ಯಕ್ತಿತ್ವದ,ಚುಟುಕುಬ್ರಹ್ಮ ದಿನಕರರು ರಚಿಸಿದ ಚುಟುಕುಗಳನ್ನು ವಿಧ್ಯಾರ್ಥಿಗಳು ಹೆಚ್ಚು ಹೆಚ್ಚು ಓದಬೇಕು. ಮಾತ್ರವಲ್ಲ ಅವರ ವ್ಯಕ್ತಿತ್ವ, ಮತ್ತು ಚಿಂತನೆಗಳನ್ನು ಅರಿಯಬೇಕಿದೆ. ಅವರು ಅನುಸರಿಸಿದ ಆದರ್ಶ ಬದುಕು ನುಡಿದಂತೆ ನಡೆದ ಪರಿಯನ್ನು ವಿಧ್ಯಾರ್ಥಿಗಳನ್ನು ಅನುಸರಿಸಬೇಕಿದೆ. ಇಂಥ ಅಪರೂಪದ ವ್ಯಕ್ತಿತ್ವದ ದೇಸಾಯಿಯವರ ಚಿಂತನೆಗಳನ್ನು ವಿಧ್ಯಾರ್ಥಿಗಳಿಗೆ ತಲುಪಿಸಿವ ಭಟ್ಕಳ ಕಸಾಪದ ಕಾರ್ಯವನ್ನು ಶ್ಲಾಘಿಸಿದರು.

IMG 20170911 155040

ನಂತರದಲ್ಲಿ ದಲ್ಲಿ ವಿಧ್ಯಾರ್ಥಿಗಳಿಂದ ದಿನಕರ ದೇಸಾಯಿಯವರ ಚುಟುಕುಗಳನ್ನು ವಾಚಿಸಿದರೆ ಕಾರ್ಯಕ್ರಮ ನಿರೂಪಿಸಿದ ಮಂಜುಳಾ ಶಿರೂರು ಚುಟುಕುಗಳ ಅಂತರಾರ್ಥವನ್ನು ಚುಟುಕಾಗಿ ವಿತರಿಸಿದರು. ಆ ನಂತರದಲ್ಲ ಮಕ್ಕಳಿಗೆ ದೇಸಾಯಿಯವರ ಗೀತೆಯೊಂದನ್ನು ಕೇಳಿಸಲಾಯಿತು. ಚುಟುಕು ವಾಚಿಸಿದ ವಿಧ್ಯಾರ್ಥಿಗಳಿಗೆ ಮತ್ತು ಶಾಲೆಯ ಗ್ರಂಥ ಬಂಢಾರಕ್ಕೆ ಭಟ್ಕಳದ ಚುಟುಕು ಸಾಹಿತಿ ಮಾನಾಸುತ ಶಂಭು ಹೆಗಡೆ ಅವರ ನಾಲ್ಕುಸಾಲು ಎಂಬ ಚುಟುಕು ಕೃತಿಗಳನ್ನು ನೀಡಲಾಯಿತು. ಶಿಕ್ಷಕಿ ಮಂಜುಳಾ ಶಿರೂರು ನಿರೂಪಿಸಿದರೆ, ಚಿತ್ರಕಲಾ ಶಿಕ್ಷಕ ಚನ್ನವಿರ ಹೊಸ್ಮನಿ ಎಲ್ಲರನ್ನು ವಂದಿಸಿದರು.

RELATED ARTICLES  ‘ಮುಂಗಾರಿನಲ್ಲಿ ಭತ್ತದ ಸಮಗ್ರ ಬೆಳೆ ನಿರ್ವಹಣೆ’ ಕುರಿತ ಪ್ರಾತ್ಯಕ್ಷಿಕೆ

 

ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರಾದ ವಿ,ಜೆ.ನಾಯಕ, ಪಾವಸ್ಕರ್, ಸುವರ್ಣಾ, ಮಮತಾ ನಾಯ್ಕ, ಮಂಜುಳಾ ಶಿರೂರು, ಚನ್ನವೀರ ಹೊಸ್ಮನೆ ಮುಂತಾದ ಶಿಕ್ಷಕ ವೃಂದದವರು,ಪ್ರಶಿಕ್ಷಣಾಳೊಂದಿಗೆ ಶಾಲಾ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.