ಅಂತರಾಷ್ಟ್ರೀಯ ಇಸ್ಕೋನ್ ಕೃಷ್ಣಾವಬೋಧ ಸಮಿತಿ ೧೯೮೮೪ ರಲ್ಲಿ ಸ್ಥಾಪನೆಗೊಂಡು ಪಾದಯಾತ್ರೆ ಮಾಡುತ್ತಾ ಭಾರತ ದೇಶದಾದ್ಯಂತ ಐದು ಬಾರಿ ಪರ್ಯಟನೆ ಪೂರೈಸಿತು ದ್ವಾರಕೆಯಿಂದ ಪ್ರಾರಂಭಿಸಲ್ಪಟ್ಟ ಈ ರಥವು ಕುರುಕ್ಷೇತ್ರ, ಹರಿದ್ವಾರ, ಬದರೀನಾಥ, ಮಧುರಾ, ವೃಂದಾವನ, ಜಗನ್ನಾಥಪುರಿ, ಮಾಯಾಪೂರ್, ತಿರುಪತಿ,ಶ್ರೀರಂಗಂ ಎಂಬ ಪುಣ್ಯ ಸ್ಥಳಗಳನ್ನು ಸಂದರ್ಶಿಸುತ್ತಾ ಇದೀಗ ಕೇರಳ ರಾಜ್ಯವನ್ನು ಪ್ರವೇಶ ಮಾಡಿದೆ.
ಪ್ರಚಾರಾರ್ಥ ಆರನೆಯ ಬಾರಿ ಕೇರಳವನ್ನು ಸಂದರ್ಶಿಸುವ ಈ ರಥವು ತಿರುವನಂತಪುರದಿಂದ ಕಾಸರಗೋಡು ತನಕ ಸಾಗಿ ಕರ್ನಾಟಕ ಮುಂದೆ ರಾಜ್ಯವನ್ನು ಪ್ರವೇಶಿಸಲಿದೆ. .
ಕಾಳಿಯನ್, ನಂದಕಿಶೋರ, ನರಸಿಂಹ, ಕೃಷ್ಣ, ಜೈ ಎಂಬ ನಾಮಾಂಕಿತ ಕಾಂಗ್ರಿಜ್ ತಳಿಯ ಎತ್ತುಗಳ ಸಹಿತ ರಥವು ಪಾದಯಾತ್ರೆಗೆ ಮೆರುಗನ್ನು ನೀಡುತ್ತದೆ. ಭಕ್ತಿ ವೇದಾಂತ ಟ್ರಷ್ಥಿನ ಧಾರ್ಮಿಕ ಗ್ರಂಥಗಳು ಯಾತ್ರೆಯೊಂದಿಗೆ ಲಭ್ಯವಿವೆ.
ಬೋವಿಕ್ಕಾನ ಮಾಧವಭಾಗಿನ ಇಸ್ಕೋನ್ ಹರೆಕೃಷ್ಣ ದೇವಸ್ಥಾನದಲ್ಲಿ ಪಾದಯಾತ್ರೆಗೆ ಸ್ವಾಗತ ನೀಡಲಾಯಿತು. ಈ ಸಂದರ್ಭದಲ್ಲಿ ಗಣೇಶ ನಾಯಕ್, ಸನಾತನ ಪ್ರಭು, ಜೆ ಪಿ ದಾಸಪ್ರಭು, ಬಾಲಕೃಷ್ಣ ಪ್ರಭು, ಗೋಪಿನಾಥನ್, ಕುಂಜಿರಾಮನ್ ಚೇಡಿಕ್ಕಾಲ್, ಅಖಿಲ್ ಯಾದವ್, ಗೋವಿಂದಬಳ್ಳಮೂಲೆ, ಕೃಷ್ಣನ್ ಅಮ್ಮಂಗೋಡು ಮೊದಲಾದ ಭಕ್ತರು ಉಪಸ್ಥಿತರಿದ್ದರು.

RELATED ARTICLES  ನಾಗರಾಜ ನಾಯಕರವರ ಮುಂದಾಳತ್ವದಲ್ಲಿ ಹೊಸ ಭರವಸೆಯ "ಬೆಳಕು"