ಕಾರವಾರ : ಕಳೆದ ಚುನಾವಣೆಯಲ್ಲಿ ಪಕ್ಷೇತರ ಶಾಸಕರಾಗಿ ಆಯ್ಕೆ ಆಗಿದ್ದ ಕಾರವಾರ, ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್ ಇಂದು ಕಾರವಾರದ ಉಜ್ವಲಲಕ್ಷ್ಮೀ ಸಾಭಾಬವನದಲ್ಲಿ ನಡೆದ ಬೂತ್ ಮಟ್ಟದ ಸಭೆಯಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ಅಧಿಕೃತವಾಗಿ ಕಾಂಗ್ರೇಸ್ ಸೇರಿದ್ದಾರೆ ಈ ಮೂಲಕ ಎಲ್ಲಾ ಉಹಾಪೋಹಕ್ಕೆ ತೆರೆ ಎಳೆದಿದ್ದಾರೆ.
ಮುಂದಿನ ಚುನಾವಣೆ ವೇಳೆ ಸೈಲ್ ಬಿಜೆಪಿ ಸೇರಲಿದ್ದಾರೆ ಎನ್ನುವ ಉಹಾಪೋಹ ಕ್ಷೇತ್ರದಲ್ಲಿ ಕೇಳಿ ಬಂದಿತ್ತು. ಅಷ್ಟೆ ಅಲ್ಲ ಕಾಂಗ್ರೇಸ್ ನ ಕೆಲವರು ಬರುವ ಚುನಟವಣೆಯಲ್ಲಿ ಸತೀಶ ಸೈಲ್ ಗೆ ಕಾಂಗ್ರೇಸ್ ನಿಂದ ಸ್ಪರ್ಧೆ ಮಾಡಲು ಅವಕಾಶ ನೀಡಬಾರದು ಎಂದು ಹೇಳಿಕೆ ನೀಡುತ್ತಾ ಬಂದಿದ್ದರು.
ಆದರೆ ಇಂದು ಶಾಸಕ ಆ ಎಲ್ಲಾ ವಿರೋಧಿಗಳಿಗೆ ತಿರುಗೇಟು ನೀಡುವ ರೀತಿಯಲ್ಲಿ ಕಾಂಗ್ರೇಸ್ ರಾಜ್ಯ ನಾಯಕರ ಎದುರಿನಲ್ಲಿ ಪಕ್ಷಕ್ಕೆ ಅಧಿಕೃತವಾಗಿ ಕಾಂಗ್ರೇಸ್ ಸೇರಿದ್ದಾರೆ.
ಸಭೆ ಆರಂಭವಾಗುತ್ತಿದ್ದಂತೆ ಸೈಲ್ ತಮ್ಮ ಸಾವಿರಾರು ಕಾರ್ಯಕರ್ತರೊಂದಿಗೆ ಹೊಸ ಸ್ಟೈಲ್ ನಲ್ಲಿಯೇ ಕಾಂಗ್ರೇಸ್ ಗೆ ಏಂಟ್ರಿ ನೀಡಿದ್ರು. ಇದರಿಂದ ಅವರ ವಿರೋಧಿಗಳು ಇದೀಗ ತೆರೆಮರೆಗೆ ಸರಿಯುವಂತಾಗಿದೆ.
ಸೈಲ್ ಕಾಂಗ್ರೇಸ್ ಗೆ ಅಧಿಕೃತವಾಗಿ ಏಂಟ್ರಿಕೊಟ್ಟಿರುವುದು ಪಕ್ಷದಲ್ಲಿ ಮತ್ತಷ್ಟು ಬಲ ಬಂದಂತೆ ಆಗಿದೆ ಎನ್ನುವುದು ಕಾಂಗ್ರೇಸ್ ನಾಯಕರ ಹಾಗೂ ಕಾರ್ಯಕರ್ತರಿಂದ ಕೇಳಿಬರತ್ತಾ ಇದೆ.