ಕಾರವಾರ: ಕಾರವಾರದ ಚೆಸ್ ಪ್ರತಿಭೆ ನಿತೀಶ ಬೇಳೂರಕರ ಚೆಸ್ ಇಂಟರ್‌ನ್ಯಾಷನಲ್ ಮಾಸ್ಟರ್ ಆಗುವ ಮೂಲಕ ಕಾರವಾರದ ಕೀರ್ತಿಯನ್ನು ವಿಶ್ವದಾದ್ಯಂತ ಬೆಳಗಿದ್ದಾರೆ. ಶನಿವಾರ ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಜರುಗಿದ ಇಂಟರನ್ಯಾಷನಲ್ ರೌಂಡ್ ರಾಬಿನ್ ಪಂದ್ಯಾವಳಿಯಲ್ಲಿ ಬೆಲಾರೂಸ್‌ನ ಗ್ಯಾಂಡ್ ಮಾಸ್ಟರ್ ಕೋವಲೇವ್ ಅಂದ್ರೆ ಜತೆಗಿನ ಪಂದ್ಯವನ್ನು ನಾಲ್ಕನೇ ಸುತ್ತಿನಲ್ಲಿ ಡ್ರಾ ಮಾಡಿಕೊಳ್ಳುವ ಮೂಲಕ 2400 ಇಎಓ ರೇಟಿಂಗ್ ಗಳಿಸುವದರೊಂದಿಗೆ ಚೆಸ್ ಇಂಟರ್‌ನ್ಯಾಷನಲ್ ಮಾಸ್ಟರ್ ಪದವಿ ಪಡೆದಿದ್ದಾರೆ.
ನಿತೀಶ ಬೇಳೂರಕರ ಅವರು ಜೆನೋ ಫಾರ್ಮಾಸೂಟಿಕಲ್ಸ್ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಈ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಸಾಗರ ಸಾಲಗಾಂವಕರ ನಿತೀಶ ಬೇಳೂರಕರ ಅವರ ಸಾಧನೆಯನ್ನು ಪ್ರಶಂಸಿದ್ದಾರೆ. ನಿತೀಶ ಬೇಳೂರಕರ ಮಾಜಿ ವರ್ಲ್ಡ್ ಸ್ಕೂಲ್ ಚೆಸ್ ಚಾಂಪಿಯನ್ ಆಗಿದ್ದಾರೆ. ವಿವಿಧ ದೇಶಗಳಲ್ಲಿ ನಡೆದ ಚೆಸ್ ಪಂದ್ಯಾವಳಿಗಳನ್ನು ಗೆದ್ದು ಸಾಧನೆ ಮಾಡಿದ್ದಾರೆ. ನಿತೀಶ ಬೇಳೂರಕರ ಅವರ ಸಾಧನೆಗೆ ಗೋವಾ ಹಾಗೂ ಕಾರವಾರದ ಚೆಸ್ ಅಭಿಮಾನಿಗಳು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.