ಬೆಂಗಳೂರು: ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ವಿರೋಧಿಸಿ ನಗರದಲ್ಲಿ ನಡೆದ ‘ಪ್ರತಿರೋಧ ಸಮಾವೇಶ’ ಯಶಸ್ವಿಯಾಗಿ ನಡೆಯಿತು. ಸಮಾವೇಶದಲ್ಲಿ ದೇಶದ ನಾನಾ ಭಾಗಗಳಿಂದ ಆಗಮಿಸಿದ ಚಿಂತಕರು, ಹೋರಾಟಗಾರರು, ಗಣ್ಯರು ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು. ‘ನಾನೂ ಗೌರಿ, ನಾವೆಲ್ಲಾ ಗೌರಿ’ ಎಂಬ ಘೋಷಣೆ ಸಮಾವೇಶ ನಡೆದ ಬೆಂಗಳೂರಿನ ಸೆಂಟ್ರಲ್ ಕಾಲೇಜು ಮೈದಾನದಿಂದ ಮೊಳಗಿತು. ದೇಶದ ವಿಭಿನ್ನ ಚಿಂತಕರು ಮತ್ತು ಹೋರಾಟಗಾರರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಒಂದೆಡೆಯಾದರೆ, ಗೌರಿ ಲಂಕೇಶ್ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ, ನಿರ್ಣಯಗಳ ಮಂಡನೆಗೆ ಈ ಬೃಹತ್ ಸಮಾವೇಶ ಸಾಕ್ಷಿಯಾಯಿತು.

RELATED ARTICLES  ಸಾಮಾಜಿಕ ಜಾಲತಾಣದಲ್ಲಿ 'ಗಣಪನ ಮದುವೆ' ಕಿರುಚಿತ್ರದ್ದೇ ಹವಾ